ಉತ್ತರ ಪ್ರದೇಶ:(ಆ.9) ಶಿಕ್ಷಕರಾದವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ದೀಪವಾಗಬೇಕು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರದ್ದು. ಆದರೆ ಇಲ್ಲೊಬ್ಬ ಶಿಕ್ಷಕ ತಾನು ಎಲ್ಲಿದ್ದೇನೆ, ತನ್ನ ಕರ್ತವ್ಯವೇನು, ತನ್ನ ವಯಸ್ಸೇನು ಎಂಬುವುದನ್ನೇ ಮರೆತು ಲೇಡಿ ಟೀಚರ್ ಒಬ್ಬರ ಜೊತೆ ಫ್ಲರ್ಟ್ ಮಾಡಿದ್ದಾರೆ. ಹಾಜರಾತಿ ಕೊಡಿ ಎಂದು ಕೇಳಲು ಬಂದ ಶಿಕ್ಷಕಿಯ ಜೊತೆಗೆ ಮಾತನಾಡುತ್ತಾ, ಹಾಜರಾತಿ ಬೇಕೆಂದರೆ ನನ್ನ ಕೆನ್ನೆಗೊಂದು ಸಿಹಿ ಮುತ್ತನ್ನು ಕೊಡಬೇಕು ಎಂದು ಕೇಳಿದ್ದಾರೆ. ಮುಖ್ಯ ಶಿಕ್ಷಕನ ಈ ನಾಚಿಕೆಗೇಡಿನ ವರ್ತನೆಯ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಉನ್ನಾವೊದಲ್ಲಿ ನಡೆದಿದ್ದು, ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ, ಸಹ ಶಿಕ್ಷಕಿಯಿಂದ ಮುತ್ತಿಗಾಗಿ ಬೇಡಿಕೆಯಿಟ್ಟಿದ್ದಾರೆ. ಅಟೆಂಡೆನ್ಸ್ಗೆ ಪ್ರತಿಯಾಗಿ ಪ್ರಿನ್ಸಿಪಾಲ್ ಮಹಿಳಾ ಶಿಕ್ಷಕಿಯಿಂದ ಕೆನ್ನೆಗೊಂದು ಮುತ್ತು ಕೊಡುವಂತೆ ಕೇಳಿದ್ದಾರೆ. ಮುಖ್ಯ ಶಿಕ್ಷಕನ ಈ ನಾಚಿಕೆಗೇಡಿನ ಕೆಲಸವನ್ನು ಅವರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಡಿಐಒಎಸ್ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ವೈರಲ್ ವಿಡಿಯೋದಲ್ಲಿ ಅಟೆಂಡೆನ್ಸ್ ಬೇಕೆಂದು ಕೇಳಿ ಬಂದ ಲೇಡಿ ಟೀಚರ್ ಜೊತೆ ಶಾಲೆಯ ಹೆಡ್ ಮಾಸ್ಟರ್ ಫ್ಲರ್ಟ್ ಮಾಡುತ್ತಾ ಕುಳಿತಿರುವುದನ್ನು ಕಾಣಬಹುದು. ಪ್ರಾಂಶುಪಾಲರ ಬಳಿ ಬಂದ ಲೇಡಿ ಟೀಚರ್ ನನ್ಗೆ ಅಟೆಂಡೆಸ್ ಕೊಡಿ ಸರ್ ಎಂದು ಕೇಳುತ್ತಾರೆ. ಆಗ ಮುಖ್ಯ ಶಿಕ್ಷಕ ಹಾಜರಾತಿ ಬೇಕೆಂದರೆ ನನ್ನದೊಂದು ಷರತ್ತು ಇದೆ. ಅದಕ್ಕೆ ಒಪ್ಪಿಗೆ ನೀಡಿದರೆ ಫುಲ್ ಅಟೆಂಡೆಸ್ ಕೊಡುವೆ ಎಂದು ಹೇಳುತ್ತಾರೆ. ಏನದು ಕಂಡೀಷನ್ ಎಂದು ಕೇಳಿದಾಗ ಪ್ರಿನ್ಸಿಪಾಲ್ ತನ್ನ ಕೆನ್ನೆಯ ಮೇಲೆ ಕೈಯಿಟ್ಟು ಮುತ್ತು ಕೊಡಬೇಕೆಂದು ಕೇಳುತ್ತಾರೆ. ಈ ಕಂಡೀಷನ್ಗೆ ಮಹಿಳಾ ಶಿಕ್ಷಕಿ ಒಲ್ಲೆ ಎಂದಿದ್ದಾರೆ.