ಮುಂಬೈ, (ಜು.8) : ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭ ಜುಲೈ ಹನ್ನೆರಡನೇ ತಾರೀಕಿಗೆ ಇದೆ. ಇನ್ನು ಇದಕ್ಕೆ ಮುಂಚಿತವಾಗಿ ಕುಟುಂಬದ ಸಂಗೀತ್ ಕಾರ್ಯಕ್ರಮ ಇತ್ತು. ಇದರಲ್ಲಿ ಟಿ-ಟ್ವೆಂಟಿ ವರ್ಲ್ಡ್ ಕಪ್ ಗೆದ್ದ ಭಾರತ ತಂಡದ ಸದಸ್ಯರು ಕೆಲವು ಭಾಗೀ ಆಗಿದ್ದರು. ತಂಡದ ನಾಯಕ ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಭಾಗೀ ಆಗಿದ್ದರು. ಇವರು ಮುಕೇಶ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಸದಸ್ಯರು ಕೂಡ ಹೌದು.
ಸಂಗೀತ್ ಕಾರ್ಯಕ್ರಮದಲ್ಲಿ ಅಂಬಾನಿ- ಮರ್ಚೆಂಟ್ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಅತಿಥಿಗಳು ತುಂಬ ದೊಡ್ಡ ಸಂಖ್ಯೆಯಲ್ಲಿ ಭಾಗೀ ಆಗಿದ್ದರು. ಈ ಸಂದರ್ಭದಲ್ಲಿ ನೀತಾ ಅಂಬಾನಿ ಅವರು ಬಹಳ ಭಾವುಕರಾಗಿದ್ದರು. ವಿಶ್ವಕಪ್ ವಿಜೇತ ತಂಡದ ಸದಸ್ಯರನ್ನು ವೇದಿಕೆ ಮೇಲೆ ಬರಮಾಡಿಕೊಳ್ಳಲಾಯಿತು. ಈ ವೇಳೆ ಸಮಾರಂಭದಲ್ಲಿ ಭಾಗೀ ಆಗಿದ್ದ ಎಲ್ಲರೂ ಭಾರೀ ದೊಡ್ಡ ಮಟ್ಟದಲ್ಲಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಚಪ್ಪಾಳೆ, ಶಿಳ್ಳೆ ಹೊಡೆದರು, ಉತ್ತೇಜನದ ಘೋಷವಾಕ್ಯಗಳನ್ನು ಹೇಳಿದರು. ಅಂದ ಹಾಗೆ ಇದೊಂದು ವಿಶೇಷ ಸಂದರ್ಭ. ಅದಕ್ಕೆ ಕಾರಣ ಕೂಡ ಆರಂಭದಲ್ಲಿಯೇ ಹೇಳಿದಂತೆ, ವಿಶ್ವ ಕಪ್ ಗೆದ್ದ ತಂಡದ ಸದಸ್ಯರಲ್ಲಿ ಮೂವರು ಮುಂಬೈ ಇಂಡಿಯನ್ ತಂಡದವರು.
ದಕ್ಷಿಣ ಆಫ್ರಿಕಾದ ವಿರುದ್ಧ ರೋಚಕವಾದ ವಿಜಯ ಸಾಧಿಸಿದ ಭಾರತ ತಂಡದ ಪ್ರದರ್ಶನವನ್ನು ಕೊನೆ ಕ್ಷಣದ ತನಕ ಹೇಗೆ ಭಾರತೀಯರು ಉಸಿರು ಬಿಗಿ ಹಿಡಿದು ವೀಕ್ಷಿಸಿದರು. ಇನ್ನು ಗೆಲುವು ಅಸಾಧ್ಯ ಎಂದುಕೊಂಡ ಸಂದರ್ಭದಲ್ಲಿ ಹೇಗೆ ಭಾರತ ಕ್ರಿಕೆಟ್ ತಂಡ ಗೆದ್ದು ಬೀಗಿತು. ಇದರೊಂದಿಗೆ ಹಲವು ವರ್ಷಗಳ ನಿರೀಕ್ಷೆಯು ನಿಜವಾಯಿತು ಎಂಬುದನ್ನು ನೀತಾ ಅಂಬಾನಿ ಅವರು ಇದೇ ವೇದಿಕೆ ಮೇಲೆ ವಿವರಿಸಿ, ಸ್ವತಃ ಭಾವುಕರಾದರು.
ಹಾರ್ದಿಕ್ ಪಾಂಡ್ಯ ಪ್ರದರ್ಶನದ ಬಗ್ಗೆ ಜನರ ಅಭಿಪ್ರಾಯಗಳನ್ನು ಹೇಳಿದ ನೀತಾ ಅಂಬಾನಿ, ಕಷ್ಟದ ಕಾಲ ಕೊನೆ ಆಗುವುದಿಲ್ಲ, ಆದರೆ ಗಟ್ಟಿಯಾದ ಜನರು ಸಾಧಿಸುತ್ತಾರೆ ಎಂದು ತಿಳಿಸಿದರು.
ಇನ್ನು ಮುಕೇಶ್ ಅಂಬಾನಿ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿ, ಭಾರತ ಹೆಮ್ಮೆ ಪಡುವುದಕ್ಕೆ ಕಾರಣರಾದ ಆಟಗಾರರಿಗೆ ಅಭಿನಂದಿಸಿದರು. ಈ ಸಂದರ್ಭವು ಹೇಗೆ 2011ರ ಏಕದಿನ ವಿಶ್ವಕಪ್ ಪಂದ್ಯಾವಳಿ ಗೆಲುವನ್ನು ನೆನಪಿಸಿತು ಎಂಬುದನ್ನು ಹೇಳಿದರು.
ಸಂಗೀತ್ ಕಾರ್ಯಕ್ರಮದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹಲವು ಆಟಗಾರರು ಭಾಗೀ ಆಗಿದ್ದರು. ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೃನಾಲ್ ಪಾಂಡ್ಯ, ಕೆ.ಎಲ್. ರಾಹುಲ್, ಮಹೇಂದ್ರ ಸಿಂಗ್ ಧೋನಿ ಭಾಗೀ ಇದ್ದರು. ಜಸ್ಪ್ರೀತ್ ಬೂಮ್ರಾ ಪ್ರವಾಸದಲ್ಲಿ ಇರುವುದರಿಂದ ಕಾರ್ಯಕ್ರಮದಲ್ಲಿ ಭಾಗೀ ಆಗಿರಲಿಲ್ಲ.