ಉಡುಪಿ:(ಆ.11) ಶ್ರೀ ಕೃಷ್ಣ ದೇವರ ಆಶೀರ್ವಾದದಿಂದ ಉಡುಪಿ ರಾಜಾಂಗಣದಲ್ಲಿ ಪದ್ಮ ಸಾಲಿ ನೇಕಾರ ಪ್ರತಿಷ್ಠಾನ 11 ದಿನ ಗಳ ಕಾಲ ನಡೆಸಿ ಕೊಟ್ಟ ಲೀಲೋತ್ಸವ ಮತ್ತು ಸೀರೆಗಳ ಉತ್ಸವದ ಸಮಾರೋಪ ಸಮಾರಂಭವು ಪೂಜ್ಯ ಪರ್ಯಾಯ ಶ್ರೀ ಕೃಷ್ಣ ಮಠ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದರ ಆಶೀರ್ವಾದದಿಂದ ನಡೆಯಿತು.
ಪದ್ಮ ಶಾಲಿ ನೇಕಾರ ಅಭಿವೃದ್ಧಿ ಕಾಣಬೇಕು, ನೇಕಾರರ ವೃತ್ತಿ ಭರವಸೆಯ ಜೊತೆಗೆ ನೈಪುಣ್ಯತೆ ಮತ್ತು ಕ್ರಾಂತಿ ಸಾಧಿಸಬೇಕು , ಹುಟ್ಟಿ ಬಂದ ನೇಕಾರ ಪ್ರತಿ ಸ್ಥಾನದ ಪ್ರತಿ ಹೆಜ್ಜೆಯಲ್ಲೂ ಶ್ರೀ ಕೃಷ್ಣ ನ ಆಶೀರ್ವಾದ ಮತ್ತು ಪೂಜ್ಯ ಶ್ರೀ ಗಳ ಸಹಕಾರವಿದೆ. ಆದ್ದರಿಂದಲೇ ಸಂತೃಪ್ತಿಯ ಸಾಧನೆ ಮಾಡುತ್ತಿದೆ. ಅನೇಕ ಯೋಜನೆಗಳು, ಯೋಚನೆಗಳು ಸರಕಾರ ರೋಬೊಸಾಫ್ಟ್ ನಬಾರ್ಡ್ ಮತ್ತು ಎಲ್ಲಾ ಸಮಾಜದವರಿಂದ ಸಹಕಾರದಿಂದಲೇ ಸಾಧ್ಯವಾಗಿದೆ.
ಇದನ್ನೂ ಓದಿ: 🛑ಕೈಕಂಬ : ರಸ್ತೆಯಲ್ಲಿರುವ ಹೊಂಡಗಳಿಗೆ ಬಾಳೆ ಗಿಡ ನೆಟ್ಟು ಪ್ರತಿಭಟನೆ
11 ದಿನಗಳ ಕಾಲ ಮತ್ತು ಪೂರ್ವ ತಯಾರಿಗೆ ಸಹಕರಿಸಿ ದ ಪ್ರತಿಯೊಬ್ಬರಿಗೂ ಶ್ರೀ ಕೃಷ್ಣ ನೇ ಶಕ್ತಿ ನೀಡಿದ್ದಾರೆ, ನಮ್ಮ ಹೆಗಲ ಮೇಲೆ ಇರುವ ದೊಡ್ಡ ಜವಾಬ್ದಾರಿ ಮುಂದ ಕ್ಕೂ ಗುರಿ ಮುಟ್ಟಿಸುವಲ್ಲಿ ನಿಮ್ಮ ಪ್ರೀತಿ, ಸಹಕಾರ ಬೇಕು ಎಂದು ಪ್ರತಿಷ್ಠಾನದ ಅಧ್ಯಕ್ಷರು ರತ್ನಾಕರ್ ಭಾವುಕರಾಗಿ ನುಡಿದರು.
ಆಯೋಜನ ಸಮಿತಿಯ ಅಧ್ಯಕ್ಷರಾದ ಡಾ.ಚಂದನ್ ಶೆಟ್ಟಿಗಾರ್, ಮಾತನಾಡುತ್ತಾ, 11 ದಿನಗಳ ಕಾಲ ನಾವು ಭಕ್ತರಾಗಿ ಸೇವೆ ಮಾಡಿದ್ದೇವೆ ಎಂಬ ತೃಪ್ತಿ ನಮಗಿದೆ. ಎಲ್ಲಾ ಮಳಿಗೆಯವರು ಎಲ್ಲೂ ಕಾಣದ ತೃಪ್ತಿ ವ್ಯಕ್ತ ಪಡಿಸಿದ್ದಾರೆ, ಪ್ರಥಮವಾಗಿ ಕುಣಿತ ಭಜನೆ ರಾಜಾಂಗಣ ದಲ್ಲಿ ಪ್ರಾಯೋಗಿಸಿದ ಕೀರ್ತಿ ಪ್ರತಿಷ್ಠಾನದ್ದು, ಭಗವದ್ಗೀತೆಯ ಶಿಖಾರೊಪಾನ್ಯಾಸದ ಮೂಲಕ ಜ್ಞಾನರ್ಜನೆ ಮಾಡಿಸಿದ ಅನೇಕ ಜ್ಞಾನಿಗಳು ಶ್ರೀ ಗಳ ಕೋಟಿ ಗೀತಾ ಕಾರ್ಯಕ್ರಮಕ್ಕೆ ಸಹಕಾರಿಯಾಯಿತು.
ಶ್ರೀ ಕೃಷ್ಣ ಲೀಲೋತ್ಸವ ನೂರಾರು ಕಲಾವಿದರಿಂದ ಸಾವಿರಾರು ಭಕ್ತ ಮೆಚ್ಚುಗೆಗೆ ಪಾತ್ರವಾಯಿತು. ಎಲ್ಲಾ ನೇಕಾರರ ಏಳಿಗೆಗೆ ಶ್ರಮಿಸುವ ಆಸೆಯಿದೆ, ಸಹಕಾರ, ಮಾರ್ಗದರ್ಶನ ನೀಡಿ ನಮ್ಮೊಂದಿಗೆ ಕೈ ಜೋಡಿಸಿ ಎಂದರು. 11 ದಿನಗಳಲ್ಲಿ ವೇದಿಕೆಯಲ್ಲಿ ಭಾಗವಹಿಸಿದ ನೂರಾರು ಗಣ್ಯರ ಸಲಹೆ ಮಾರ್ಗದರ್ಶನ ಮತ್ತು ಅವರು ನೀಡಿದ ಸಹಕಾರ ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಇದು ಮುಕ್ತಾಯ ಕಾರ್ಯಕ್ರಮ ಅಲ್ಲ, ನೇಕಾರರ ಹಿತಚಿಂತನೆಯ ಪ್ರಥಮ ಹೆಜ್ಜೆ, ಅನೇಕ ಚಿಂತನೆ ಮತ್ತು ಅಭಿವೃದ್ಧಿ ಗಾಗಿ ಮುಂದಿನ ಹೆಜ್ಜೆ ಪ್ರಾರಂಭ ಮಾಡಿದ್ದೇವೆ ಎಂದು ಪ್ರತಿಷ್ಠಾನದ ಎಲ್ಲಾ ಪದಾಧಿಕಾರಿಗಳು ಭರವಸೆಯ ನುಡಿ ನುಡಿದರು.