Wed. Nov 20th, 2024

Bihar: ದೇವಸ್ಥಾನದಲ್ಲಿ ಭಾರೀ ಜನದಟ್ಟಣೆ – ಕಾಲ್ತುಳಿತಕ್ಕೆ ಏಳು ಮಂದಿ ಬಲಿ

ಬಿಹಾರ:(ಆ.12) ಬಿಹಾರದ ಜೆಹಾನಾಬಾದ್‌ ಜಿಲ್ಲೆಯಲ್ಲಿನ ದೇವಸ್ಥಾನವೊಂದರಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: 🏆ಉಜಿರೆ: ಉಜಿರೆ SDM ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಓವರಾಲ್ ಚಾಂಪಿಯನ್‌ ಶಿಪ್

ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನಜಂಗುಳಿಯನ್ನು ನಿಯಂತ್ರಿಸಲು ಪೋಲೀಸರು ಬಲ ಪ್ರಯೋಗ ಮಾಡಿದ್ದರಿಂದ ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಇದು ಕಾಲ್ತುಳಿತ ದುರಂತಕ್ಕೆಕಾರಣವಾಗಿದೆ ಎನ್ನಲಾಗಿದೆ. ಇದು ಬಿಹಾರದ ಬರಾವರ್ ಹಿಲ್ಸ್‍ನಲ್ಲಿರುವ ಬಾಬಾ ಸಿದ್ಧನಾಥ ದೇವಸ್ಥಾನಆಗಿದೆ. ಇನ್ನು ಈ ಅವಘಡದಲ್ಲಿ 35 ಮಂದಿಗೆ ಗಾಯಗಳಾಗಿವೆ. ಆದರೆ ತಮ್ಮ ಕಡೆಯಿಂದ ಯಾವುದೇ ನಿರ್ಲಕ್ಷ್ಯ ನಡೆದಿಲ್ಲ ಎಂದು ಪೋಲೀಸ್ ಅಧಿಕಾರಿಗಳು ಆರೋಪವನ್ನು ನಿರಾಕರಿಸಿದ್ದಾರೆ.

ಪ್ರತಿ ವರ್ಷವೂ ಪವಿತ್ರ ಶ್ರಾವಣ ಮಾಸದ ವೇಳೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಉತ್ಸವ ನಡೆಯುತ್ತದೆ. ಇದಕ್ಕಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ಬಾಬಾ ಸಿದ್ಧನಾಥ ದೇವಸ್ಥಾನಕ್ಕೆ ಆಗಮಿಸಿದ್ದರು. ಗಾಯಾಳುಗಳನ್ನು ಸ್ಥಳೀಯ ಮಖ್ದುಂಪುರ್ ಮತ್ತು ಸದಾರ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಮ್ಮವರನ್ನು ಕಳೆದುಕೊಂಡ ಕುಟುಂಬದವರು ಶೋಕಿಸುತ್ತಿರುವ ದೃಶ್ಯ ಮನಕಲಕುವಂತಿತ್ತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಘಟನೆಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಗಾಯಾಳುಗಳಿಗೆ ಉತ್ತಮಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸೂಚಿಸಿದರು.

Leave a Reply

Your email address will not be published. Required fields are marked *