ಬೆಳ್ತಂಗಡಿ:(ಆ.12) ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ, ಕುಲಶೇಖರ ಮಂಗಳೂರು ಇದರ ಬೆಳ್ತಂಗಡಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ಸಾಮಾನ್ಯ ಸಭೆಯನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀ ಕೆ.ಪಿ. ಸುಚರಿತ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಿನಾಕಿ ಸಭಾಭವನ, ಸಂತೆಕಟ್ಟೆ, ಬೆಳ್ತಂಗಡಿ ಇಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ಸಂಘಗಳ ಅಭಿವೃದ್ಧಿ ಕುರಿತು ರಚನಾತ್ಮಕ ಸಲಹೆ ಸೂಚನೆಗಳ ಬಗ್ಗೆ ಚರ್ಚಿಸಲಾಯಿತು. ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಯಿತು ಮತ್ತು ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಉತ್ತಮ ಪುರುಷ ಮತ್ತು ಮಹಿಳಾ ಕೃತಕ ಗರ್ಭಧಾರಣಾ ಕಾರ್ಯಕರ್ತರ ಸಾಲಿನಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ, ಬಂದಾರು ಶ್ರೀಮತಿ ಸುಮಿತ್ರಾ ಇವರಿಗೆ 2023-24ನೇ ಸಾಲಿನ ಬೆಳ್ತಂಗಡಿ ತಾಲೂಕಿನ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷರು ಸುಚರಿತ ಶೆಟ್ಟಿ, ಉಪಾಧ್ಯಕ್ಷರು ಜಯರಾಮ ರೈ, ಕೆಎಂಎಫ್ ನಿರ್ದೇಶಕರು ಕಾಪು ದಿವಾಕರ ಶೆಟ್ಟಿ, ಎಂ ಡಿ ವಿವೇಕ್ ಡಿ, ಬೆಳ್ತಂಗಡಿ ನಿರ್ದೇಶಕರು ಪದ್ಮನಾಭ ಶೆಟ್ಟಿ, ನಿರ್ದೇಶಕರಾದ ನಾರಾಯಣ ಪ್ರಕಾಶ್, ಸುಧಾಕರ್, ಸುಭದ್ರಾ ರಾವ್, ವೀಣಾ, ಮ್ಯಾನೇಜರ್ ರವಿರಾಜ್ ಉಡುಪ, ಉಪ ವ್ಯವಸ್ಥಾಪಕರು ಸತೀಶ್ ರಾವ್ ಹಾಗೂ ಸಂಘದ ಅಧ್ಯಕ್ಷರಾದ ರಾಜೇಶ್ವರಿ ಕಬಿಲಾಲಿ ಹಾಗೂ ಕಾರ್ಯದರ್ಶಿ ಭವ್ಯಾ ಗಣೇಶ್ .ಕೆ ಉಪಸ್ಥಿತರಿದ್ದರು.