Sat. Apr 19th, 2025

Bandaru: ಭಾರೀ ಗಾಳಿ ಮಳೆ- ಬಂದಾರು ಪೇರಲ್ದಪಲಿಕೆಯಲ್ಲಿ ವಿದ್ಯುತ್ ತಂತಿ ಮೇಲೆ ಬಿದ್ದ ಮರ

ಬಂದಾರು :(ಆ.14) ಬಂದಾರು ಗ್ರಾಮದ ಪೇರಲ್ದಪಲಿಕೆ -ಬೆಳ್ತಿಗೇರು ಹೋಗುವ ರಸ್ತೆಯ ಪೇರಲ್ದ ಪಲಿಕೆ ಎಂಬಲ್ಲಿ ನಿನ್ನೆ ರಾತ್ರಿ ಸುರಿದ ವಿಪರೀತ ಗಾಳಿ ಮಳೆಗೆ ರಸ್ತೆ ಬದಿಯಲ್ಲಿರುವ ವಿದ್ಯುತ್ ತಂತಿ ಮೇಲೆ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ತಂತಿ ನೆಲಕ್ಕೆ ತಾಗಿಕೊಂಡಿದೆ. ಪಕ್ಕದ ಕಿರಣ್ ಪೇರಲ್ದಪಲಿಕೆ ಅವರ ಅಡಿಕೆ ಕೃಷಿಗೂ ಅಪಾರ ಹಾನಿಯಾಗಿದ್ದು, ಭಾಗದ ರಸ್ತೆ ಸಂಚಾರಕ್ಕೂ ಸಮಸ್ಯೆ ಉಂಟಾಗಿದೆ.

ಇದನ್ನೂ ಓದಿ: 🛑ಮಂಗಳೂರು: ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ತುಳುನಾಡ ದೈವಕ್ಕೆ ಅಪಮಾನ

ಸ್ಥಳಕ್ಕೆ ಬಂದಾರು ಪಂಚಾಯತ್ ಸದಸ್ಯರಾದ ಚೇತನ್ ಪಾಲ್ತಿಮಾರ್ ಅವರು ಭೇಟಿ ನೀಡಿ ಮೆಸ್ಕಾಂ ಇಲಾಖೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮಕರಣಿಕರು, ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರಿಗೆ ಮಾಹಿತಿ ನೀಡಿರುವ ಬಗ್ಗೆ ವರದಿಯಾಗಿದೆ.

Leave a Reply

Your email address will not be published. Required fields are marked *