ಬೆಳ್ತಂಗಡಿ:(ಆ.14) ವಿಶಿಷ್ಟ ಪರಂಪರೆಯುಳ್ಳ ಈ ನಮ್ಮ ತುಳುನಾಡಿನಲ್ಲಿ ನಮ್ಮ ಸಂಸ್ಕೃತಿಯು ಕೃಷಿ ಸಂಸ್ಕೃತಿಯ ಜೊತೆಗೆ ಬೆಸೆದುಕೊಂಡಿದೆ. ಇಲ್ಲಿನ ಆಚರಣೆಗಳು, ಆರಾಧನಾ ಪರಂಪರೆ ಈ ಮಣ್ಣಿನ ವಿಶಿಷ್ಟ ಸೊಬಗು ಎಂದು ಹಿರಿಯ ನ್ಯಾಯವಾದಿ, ಧಾರ್ಮಿಕ ಮುಂದಾಳು ಬಿ.ಕೆ ಧನಂಜಯ ರಾವ್ ಹೇಳಿದರು. ಸನ್‌ರಾಕ್ ಬಲಿಪ ರೆಸಾರ್ಟ್ ಇದರ ವತಿಯಿಂದ ಕೆಳಗಿನ ಮಂಜೊಟ್ಟಿ ಯಶೋಧರ ದೇವಾಡಿಗರ ಗದ್ದೆಯಲ್ಲಿ ನಡೆದ ಕೆಸರ್ದ ಗೊಬ್ಬು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: 🔴ಮೊಗ್ರು : ಸ.ಕಿ.ಪ್ರಾ ಶಾಲೆ ಮೊಗ್ರು ನಲ್ಲಿ ಸ್ವಚ್ಛತಾ ಕಾರ್ಯಕ್ರಮ

ಲಯನ್ಸ್ ಕ್ಲಬ್ ಬೆಳ್ತಂಗಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ನಡ ಕನ್ಯಾಡಿ, ರಿಕ್ಷಾ ಚಾಲಕರ ಮಾಲಕರ ಸಂಘ ನಡ, ಸುರ್ಯ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ನಡ ಕನ್ಯಾಡಿ, ಜನಸ್ನೇಹಿ ಸಂಘ ಸುರ್ಯ, ಹಾಲು ಉತ್ಪಾದಕರ ಸಹಕಾರ ಸಂಘ ನಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನಡ ಕನ್ಯಾಡಿ, ಶೌರ್ಯ ವಿಪತ್ತು ಘಟಕ ನಡ ಕನ್ಯಾಡಿ, ಶ್ರೀ ಗೋಪಾಲಕೃಷ್ಣ ಸೇವಾ ಸಮಿತಿ ನಾವೂರು, ಪ್ರಾಥಮಿಕ ಆರೋಗ್ಯ ಉಪ ಕೇಂದ್ರ ನಡ ಕನ್ಯಾಡಿ, ಚಂದ್ಕೂರು ಶ್ರೀ ದುರ್ಗಾ ಪರಮೇಶ್ವರೀ ಭಜನಾ ಮಂಡಳಿ ನಡ ಲಾಯಿಲ, ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ ನಡ, ಶ್ರೀ ಸದಾಶಿವೇಶ್ವರ ಭಜನಾ ಮಂಡಳಿ ಕನ್ಯಾಡಿ ನಡ ಇವರು ಸಹಯೋಗ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಬಳಂಜ ಮಸ್ಜಿದ್ ಧರ್ಮಗುರು ಝಮೀರ್ ಸಅದಿ ವಲ್ ಫಾಝಿಲ್, ಮಂಜೊಟ್ಟಿ ಚರ್ಚ್ ನ ಧರ್ಮಗುರು ರೆ.ಫಾ. ಪ್ರವೀಣ್ ಡಿಸೋಜ, ಗ್ರಾ.ಪಂ. ಅಧ್ಯಕ್ಷೆ ಮಂಜುಳಾ, ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥ ಸಯ್ಯಿದ್ ಹಬೀಬ್ ಸಾಹೇಬ್ ನಡ, ಗ್ರಾ. ಯೋ. ತಾಲೂಕು ಯೋಜನಾಧಿಕಾರಿ ಸುರೇಂದ್ರ ಆರೋಗ್ಯ ಕ್ಲಿನಿಕ್‌ನ ಡಾ.ಪ್ರದೀಪ್ ನಾವೂರು, ಇವರು ಶುಭ ಹಾರೈಸಿದರು.

ವೇದಿಕೆಯಲ್ಲಿ ಹಿರಿಯ ನ್ಯಾಯವಾದಿ ಶಶಿಕಿರಣ್ ಜೈನ್, ಸಂಸೆ ಎಸ್.ಡಿ.ಎಂ ಐಟಿಐ ಪ್ರಾದ್ಯಾಪಕ ಸಿದ್ದಾರ್ಥ್, ಮಂಗಳೂರಿನ ಟ್ರಕ್ಕಿಂಗ್ ಸಂಸ್ಥೆಯ ಶಿವಕುಮಾರ್, ಗದ್ದೆಯ ಮಾಲಕ ಯಶೋಧರ ದೇವಾಡಿಗ, ಸನ್ ರಾಕ್ ಮಾಲಿಕ ಡೆನ್ನಿಸ್ ವಾಲ್ಟರ್ ಸಿಕ್ವೇರ ಭಾಗಿಯಾಗಿದ್ದರು. ಅಧ್ಯಕ್ಷತೆ ವಹಿಸಿದ್ದ ಬಲಿಪ ರೆಸಾರ್ಟ್ ಮಾಲೀಕ, ನೋಟರಿ ನ್ಯಾಯವಾದಿ ಮುರಳಿ ಬಲಿಪ ಮಾತನಾಡಿ, ಸ್ಥಳೀಯರ ಜೊತೆ ಸೇರಿಕೊಂಡು ಸ್ಥಳೀಯ ಸಂಸ್ಕೃತಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಬಡವರಿಗೆ ಮತ್ತು, ವಿದ್ಯಾರ್ಥಿಗಳಿಗೆ ನೆರವು ನೀಡುವ ಮಹತ್ ಉದ್ದೇಶ ಇದರ ಹಿಂದೆ ಅಡಗಿದೆ ಎಂದರು.
ಇಡೀ ದಿನ ವಿವಿಧ ವಯೋಮಾನಗಳಲ್ಲಿ ಸ್ಪರ್ಧೆ ನಡೆಯಿತು. ತುಳುನಾಡ ಶೈಲಿಯ ಊಟೋಪಚಾರ ವ್ಯವಸ್ಥೆ ಗೊಳಿಸಲಾಗಿತ್ತು. ವಸಂತ ಶೆಟ್ಟಿ ಶ್ತದ್ಧಾ ಸ್ವಾಗತಿಸಿದರು. ಅಚ್ಚು ಮುಂಡಾಜೆ ನಿರೂಪಿಸಿದರು. ಸುರಕ್ಷಾ ಕನ್ಮಾಜೆ ಪ್ರಾರ್ಥನೆ ಹಾಡಿದರು. ಮಾಜಿ ಸೈನಿಕ ಹರೀಶ್ ರೈ ಧನ್ಯವಾದವಿತ್ತರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ ಸುಬ್ಬಾಪೂರಮಠ, ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ, ಮಾಜಿ ಸೈನಿಕ ಹರೀಶ್ ರೈ ಚಂದ್ಕೂರು, ಕಿರಣ್ ಕುಮಾರ್ ಶೆಟ್ಟಿ, ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಶಿಕಾಂತ ಡೋಂಗ್ರೆ ಮೊದಲಾದವರು ಉಪಸ್ಥಿತರಿದ್ದರು. ಮನೋರಮಾ ಬಲಿಪ, ಮಯೂರ್ ಮತ್ತು ಮಂದಾರ ಬಲಿಪ ಸಹಕರಿಸಿದರು.
ವೃಂದ ಬಲಿಪ ಸ್ವಾಗತಿಸಿದರು. ವಸಂತ ಶೆಟ್ಟಿ ಶ್ರದ್ಧಾ ನಿರೂಪಿಸಿದರು. ಕಾವ್ಯಶ್ರೀ ಬಲಿಪ ವಂದಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸತೀಶ್ ಕುತ್ಲೂರು ವೀಕ್ಷಕ ವಿವರಣೆ ನೀಡಿದರು