ಬೆಳ್ತಂಗಡಿ:(ಆ.15) ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿ ವತಿಯಿಂದ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯು ಆ.15 ರಂದು ಮುಳಿಯ ಜ್ಯುವೆಲ್ಸ್ ಆವರಣದಲ್ಲಿ ಸಂಭ್ರಮದಿಂದ ನೆರವೇರಿತು.
ಇದನ್ನೂ ಓದಿ: 🇮🇳ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾದಿಂದ ಬೈಕ್ ಜಾಥಾದ ಮೂಲಕ ಸ್ವಾತಂತ್ರ್ಯೋತ್ಸವ ದಿನಾಚರಣೆ
ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ, ವಕೀಲರಾದ ಅನಿಲ್ ಕುಮಾರ್ ಯು ಧ್ವಜಾರೋಹಣವನ್ನು ನೆರವೇರಿಸಿ, ಮಾತನಾಡಿದ ಅವರು ಸ್ವಾತಂತ್ರ್ಯಕ್ಕೆ ಹೋರಾಡಿದ ವೀರ ಸೈನಿಕರ ಪರಾಕ್ರಮವನ್ನು ವಿವರಿಸಿದರು, ಅಲ್ಲದೇ ನಾವೆಲ್ಲ ಇವತ್ತು ಸ್ವಾತಂತ್ರ್ಯವಾಗಿ ಯಾವುದೇ ಭಯವಿಲ್ಲದೇ ಬದುಕಬೇಕಾದರೆ ನಮ್ಮನ್ನು ಕಾಯುವ ಸೈನಿಕರ ಪರಿಶ್ರಮ ಕಾರಣ ಎಂದು ಹೇಳುತ್ತಾ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮುಳಿಯ ಶಾಖಾ ಪ್ರಬಂಧಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.