Sat. Apr 19th, 2025

Belal : ಮೈತ್ರಿ ಯುವಕ ಮಂಡಲ (ರಿ.) ಬೆಳಾಲಿನಲ್ಲಿ 78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

ಬೆಳಾಲು :(ಆ.15) ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರ ವಠಾರ ದಲ್ಲಿ 78 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಇದನ್ನೂ ಓದಿ: 🛑ಬೆಳ್ತಂಗಡಿ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಕೊಡುಗೆ ಮಹತ್ತರದ್ದು – ರಕ್ಷಿತ್ ಶಿವರಾಂ

ಯುವಕ ಮಂಡಲ ಅಧ್ಯಕ್ಷರಾದ ನಿತಿನ್ ಮೋನಿಸ್ ಧ್ವಜಾರೋಹಣ ನೆರವೇರಿಸಿದರು. ಸಂಘದ ಗೌರವ ಸಲಹೆಗರಾರು ನೋಟರಿ ವಕೀಲರಾದ ಶ್ರೀನಿವಾಸ್ ಗೌಡ ಇವರು ಸ್ವಾತಂತ್ರ್ಯ ಆಚರಣೆಯ ಮಹತ್ವ ಹಾಗೂ ವೀರ ಸೇನಾನಿಗಳ ಬಲಿದಾನ ವಿಚಾರ ಬಗ್ಗೆ ತಿಳಿಸಿದರು. ಗೌರವಾಧ್ಯಕ್ಷರಾದ ರಾಜೇಶ್ ಗೌಡ ಪಾರ್ಲ, ಸಂಘದ ಹಿರಿಯ ಗೌರವ ಸಲಹೆಗರಾರು, ಪದಾಧಿಕಾರಿಗಳು ಸರ್ವ ಸದಸ್ಯರು ನಾಗರಿಕರು ಉಪಸ್ಥಿತರಿದ್ದರು.

ಹಲವಾರು ಶಾಲೆಗಳಿಗೆ ಸಿಹಿತಿಂಡಿ ವಿತರಿಸಲಾಯಿತು. ನವನೀತ್ ಏರ್ದೊಟ್ಟು ಸ್ವಾಗತಿಸಿ, ಸಂಘದ ಕಾರ್ಯದರ್ಶಿ ವಿಘ್ನೇಶ್ ಅನಂತೋಡಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *