ಬೆಂಗಳೂರು:(ಆ.16) ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಜೈಲು ಪಾಲಾಗಿರುವ ದರ್ಶನ್ & ಗ್ಯಾಂಗ್ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ತಿದೆ. ಬಗೆದಷ್ಟು ಹತ್ತಾರು ಸಾಕ್ಷಿಗಳು ಹೊರಬರುತ್ತಿವೆ. ಇದೀಗ ಆರೋಪಿಗಳ ಕೂದಲು ಸ್ಯಾಂಪಲ್ ಡಿಎನ್‌ಎ (DNA) ಮ್ಯಾಚ್ ಆಗಿದೆ.
ಇದನ್ನೂ ಓದಿ: 🔴ಬೆಳ್ತಂಗಡಿ: ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ
ದರ್ಶನ್ ಕೇಸ್‌ನಲ್ಲಿ ಎಫ್‌ಎಸ್‌ಎಲ್‌ನ ಬಹುತೇಕ ಎಲ್ಲಾ ರಿಪೋರ್ಟ್‌ಗಳು ಪೊಲೀಸರ ಕೈ ಸೇರಿದೆ. ಎಫ್‌ಎಸ್‌ಎಲ್ ರಿಪೋರ್ಟ್‌ಗಳಲ್ಲಿ ಬಹುಮುಖ್ಯವಾದ ಡಿಎನ್‌ಎ ರಿಪೋರ್ಟ್ ಪೊಲೀಸರ ಕೈಗೆ ಸಿಕ್ಕಿದೆ. ಈ ಮೂಲಕ ದರ್ಶನ್ ರಕ್ತ ಮಾತ್ರ ಅಲ್ಲ, ಇನ್ನುಳಿದ ಆರೋಪಿಗಳ ಕೂದಲು ಕೂಡ ಸಂಕಷ್ಟ ತಂದೊಡ್ಡುತ್ತಾ ಇದೆ.
ರೇಣುಕಾಸ್ವಾಮಿ ಶವವನ್ನು ಬಿಸಾಡುವಾಗ ಸ್ಕಾರ್ಪಿಯೋ ಕಾರಲ್ಲಿ ನಾಲ್ವರು ಆರೋಪಿಗಳು ಹೋಗಿದ್ದರು. ಆ ಸ್ಕಾರ್ಪಿಯೋ ಕಾರಲ್ಲಿ ಆರೋಪಿಗಳ ಕೂದಲು ಉದುರಿತ್ತು. ಆ ಉದುರಿದ ಕೂದಲನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಡಿಎನ್‌ಎ ವರದಿ ಬಂದಿದ್ದು, ಆರೋಪಿಗಳ ಕೂದಲು ಮ್ಯಾಚ್ ಆಗಿದೆ ಎಂದು ತಿಳಿದು ಬಂದಿದೆ.