Wed. Nov 20th, 2024

Daily Horoscope – ಇಂದು ಈ ರಾಶಿಯವರಿಗೆ ಸ್ನೇಹಿತರ ಸಹವಾಸವೇ ಕಂಟಕವಾಗಬಹುದು!!!!

Daily Horoscope - ಇಂದು ಈ ರಾಶಿಯವರಿಗೆ ಸ್ನೇಹಿತರ ಸಹವಾಸವೇ ಕಂಟಕವಾಗಬಹುದು!!!!

ಮೇಷ ರಾಶಿ : ಪ್ರತಿಭಾವಂತರು ಜಾಣ್ಮೆಯಿಂದ ಹೆಸರು ಮಾಡುವರು. ಸಂತೋಷದಿಂದ ಇರುತ್ತಾರೆ. ಇಂದು ನೀವು ಗೃಹನಿರ್ಮಾಣದ ಕಾರ್ಯವನ್ನು ಆರಂಭಿಸುವ ಯೋಚನೆ ಇದ್ದರೆ ಅದನ್ನು ಕೈಬಿಡುವುದು ಒಳ್ಳೆಯದು. ನಿನ್ನ ಕೋರಿಕೆಗಳು ಕೆಲವು ಈಡೇರಬಹುದು.

ವೃಷಭ ರಾಶಿ : ಸ್ಥಿರಾಸ್ತಿಯ ಒಡೆತನ ನಿಮಗೆ ಸಿಗಬಹುದು. ಮನೆಯವರ ಮಾತುಗಳು ನಿಮಗೆ ಅತ್ಯಂತ ಆಘಾತವನ್ನು ಉಂಟುಮಾಡಬಹುದು. ಹೊಸವಸ್ತುಗಳೇ ಆಗಿದ್ದರೂ ಅವುಗಳಿಂದ ನಷ್ಟವನ್ನು ಪಡೆಯುವಿರಿ. ಕೌಟುಂಬಿಕ ಭಿನ್ನಾಭಿಪ್ರಾಯವು ಹೆಚ್ಚಾಗುವ ಸಾಧ್ಯತೆ ಇದೆ.

ಮಿಥುನ ರಾಶಿ : ಮಕ್ಕಳ‌ ಮೇಲೆ‌ ಪ್ರೀತಿ ಇದ್ದರೂ ಹುಸಿ ಮುನಿಸು ಅಗತ್ಯವಾಗಿ ಬೇಕು. ನಿಮ್ಮ ತೀರ್ಮಾನಗಳು ನಿಮಗೆ ಸಂತೃಪ್ತಿಯನ್ನು ಕೊಡಬಹುದು. ಆರೋಗ್ಯವನ್ನು ನಿರ್ಲಕ್ಷಿಸುವುದು ಬೇಡ. ಭವಿಷ್ಯವು ನಿಮ್ಮನ್ನು ಅತಿಯಾಗಿ ಕಾಡಬಹುದು. ಹೊಸ ಸಂಬಂಧವನ್ನು ಬೆಳೆಸಲು ನೀವು ಸಜ್ಜಾಗಿರುವಿರಿ.

ಕರ್ಕಾಟಕ ರಾಶಿ : ಸಂಗಾತಿಗಾಗಿ ಮನಸ್ಸಿಲ್ಲದಿದ್ದರೂ ಖರ್ಚು ಮಾಡಬೇಕಾಗುವುದು. ನೀವು ಸ್ನೇಹಿತರ ಜೊತೆ ಹೊಸ ಉದ್ಯಮವನ್ನು ನಡೆಸಲು ಚಿಂತನೆ ನಡೆಸುವಿರಿ. ಅಧ್ಯಾತ್ಮದಲ್ಲಿ ಒಲವು ಇರಲಿದೆ. ಮಕ್ಕಳ ವರ್ತನೆಯನ್ನು ಕಂಡು ಆಶ್ಚರ್ಯಪಡುವಿರಿ. ಪ್ರತಿಷ್ಠೆಯನ್ನು ಇಟ್ಟುಕೊಳ್ಳುವುದು ಸುಲಭವಲ್ಲ.

ಸಿಂಹ ರಾಶಿ : ನಿಮ್ಮ ಕಾರ್ಯವು ಸಫಲವಾಗಲು ಶ್ರಮ ಅಗತ್ಯ. ಓಡಾಟದಿಂದ ಆಯಾಸ ಹೆಚ್ಚಾಗುವುದು. ಸಂಸಾರದಲ್ಲಿ ಹೆಚ್ಚಿನ ಸುಖವನ್ನು ಪಡೆಯಲು ಇಚ್ಛಿಸುವಿರಿ. ಆರ್ಥಿಕತೆಯೂ ಅಭಿವೃದ್ಧಿಯತ್ತ ಹೊರಳಬಹುದು. ಅಪರಿಚಿತರು ಪರಿಚಿತರಂತೆ ಕಾಣಬಹುದು. ಇಂದು ಕೆಲಸದ ಒತ್ತಡವಿರಲಿದ್ದು ಯಾರ ಜೊತೆಯೂ ಮಾತನಾಡಲು ಹೋಗಬೇಡಿ

ಕನ್ಯಾ ರಾಶಿ : ಶತ್ರುಗಳು ನಿಮ್ಮ ವಿರುದ್ಧ ಮಾಡುವ ತಂತ್ರಗಳು ನಿಮಗೆ ಪೂರಕವಾಗಿಯೇ ಬರುವುದು. ನೀವು ಬರಹಗಾರರಾಗಿದ್ದರೆ ನಿಮ್ಮ ಸಾಹಿತ್ಯಕ್ಕೆ ಯಶಸ್ಸು ಬರಬಹುದು. ಕೃಷಿ ಉತ್ಪನ್ನ ಮಾರಾಟಗಾರರು ಹೆಚ್ಚಿನ ಲಾಭವನ್ನು ಗಳಿಸಬಹುದು. ನಿಮ್ಮ ಮಾತುಗಳು ಕೆಲವರಿಗೆ ಬೇಸರವನ್ನು ತರಿಸಬಹುದು.

ತುಲಾ ರಾಶಿ : ಸ್ಪರ್ಧಾತ್ಮಕ ವಿಚಾರಗಳಲ್ಲಿ ನಿಮಗೆ ಸೋಲಾಗಬಹುದು. ನಿಮ್ಮ ಕೆಲಸವು ನಿಮಗೆ ಆತ್ಮಸಂತೋಷವನ್ನು ತರಬಹುದು. ಪಂಡಿತರಿಗೆ ಸಣ್ಣ ಮಟ್ಟದ ಗೌರವ ಪ್ರಾಪ್ತವಾಗಲಿದೆ. ಪಾಲುದಾರಿಕೆಯನ್ನು ನೀವು ಅನುಮಾನದಿಂದ ಕಾಣುವಿರಿ. ನಿಮ್ಮ ತಪ್ಪು ನಿರ್ಧಾರಗಳೇ ನಿಮ್ಮನ್ನು ಕಾಡಬಹುದು.

ವೃಶ್ಚಿಕ ರಾಶಿ : ಗೃಹ ನಿರ್ಮಾಣಕ್ಕೆ ನಿಮ್ಮಿಂದ ಸಹಕಾರ ಸಿಗಲಿದೆ. ನಿಮ್ಮ ಮಾತುಗಳು ವರ್ಷದ ವಾದವನ್ನು ಹುಟ್ಟಿಸುವಂತೆ ಮಾಡಬಹುದು. ಇಂದು ನೀವು ಉದ್ಯೋಗವನ್ನು ಹುಡುಕುವ ಪ್ರಯತ್ನ ಮಾಡಿದರೆ ವ್ಯರ್ಥವಾಗಬಹುದು.

ಧನು ರಾಶಿ : ಅನಿರೀಕ್ಷಿತ ವಿಚಾರಗಳನ್ನು ಎದುರಿಸುವುದು ನಿಮಗೆ ಕಷ್ಟವಾದೀತು. ಶಿಕ್ಷಣವನ್ನು ನೀವು ಹೊಸ ರೀತಿಯಲ್ಲಿ ಕೊಡಲು ಪ್ರಾರಂಭಿಸಬಹುದು. ಸಂಗಾತಿಯ ಸಲಹೆಯನ್ನು ನೀವು ಸ್ವೀಕರಿಸುವಿರಿ. ಹೊಸ ಉದ್ಯಮವು ಬಹಳ ಸಂತೋಷದಿಂದ ನಡೆಯಲಿದೆ.

ಮಕರ ರಾಶಿ : ಹೊಸ ಕಾರ್ಯವನ್ನು ಮಾಡುವುದು ನಿಮಗೆ ಕಷ್ಟವಾಗಬಹುದು. ನಿಮ್ಮ ಬಳಿ ಕೆಲವರು ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸಲು ಬರಬಹುದು. ಖರ್ಚಿನ ಮೇಲೆ‌ ನೀವು ಹಿಡಿತ ಸಾಧಿಸಲು ಪ್ರಯತ್ನಿಸುವಿರಿ. ಸ್ವಾರಸ್ಯಕರ ಸಂಗತಿಗಳು ನಿಮಗೆ ಸಹಜದಂತೆ ಆಗಬಹುದು. ಬೇಡದವರ ಸಹವಾಸದಿಂದ ಹೆಸರು ಹಾಳಾಗುವುದು.

ಕುಂಭ ರಾಶಿ : ಹಣದ ಹಂಚಿಕೆಯಲ್ಲಿ ನಿಮಗೆ ಕಲಹವಾಗುವುದು. ಹೇಗಾದರೂ ಮಾಡಿ ಸರಿ‌ಮಾಡಿಕೊಳ್ಳಿ. ಸೋಲನ್ನು ಒಪ್ಪಿಕೊಳ್ಳಲು ನೀವು ತಯಾರಿರುವುದಿಲ್ಲ. ಸಂಗಾತಿಯನ್ನು ಸಂತೋಷಪಡಿಸಲು ಏನನ್ನಾದರೂ ಮಾಡಲಿದ್ದೀರಿ.

ಮೀನ ರಾಶಿ : ಮಹಿಳೆಯರು ಇಂದು ಹೆಚ್ಚು ಒತ್ತಡದಲ್ಲಿ ಇರುವಂತೆ ಕಂಡರೂ ಒತ್ತಡದ ನಡುವೆಯೂ ನಿಮ್ಮ ಕಾರ್ಯಗಳನ್ನು ಸರಳೀಕರಿಸಿಕೊಂಡು ಮಾಡುವ ವಿಧಾನವನ್ನು ಮೆಚ್ಚುವರು. ಏನೇ ಅಂದರೂ ನಿಮ್ಮ ಮಾತನ್ನು ಕೇಳುವ ಮನಃಸ್ಥಿತಿಯು ಇರುವುದಿಲ್ಲ. ಎಂದಿನಂತೆ ನಿಮ್ಮ ಕೆಲಸದಲ್ಲಿ ನೀವು ಮಗ್ನರಾಗಿರುವಿರಿ.

Leave a Reply

Your email address will not be published. Required fields are marked *