ಕೊಪ್ಪಳ:(ಆ.17) ಸತತ ಎರಡು ದಿನಗಳಿಂದ ಈ ಕಾರ್ಯಾಚರಣೆ ಬಳಿಕ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ 19ರ ಸ್ಟಾಪ್ ಲಾಗ್ ಗೇಟ್ ನ ಮೊದಲ ಎಲಿಮೆಂಟ್ ಅಳವಡಿಕೆ ಸಕ್ಸಸ್ ಆಗಿದೆ. ಅಡ್ಡಿಯಾಗಿದ್ದ ಸ್ಕೈವಾಕ್ ತೆರವು ಮಾಡಿದ ಬೆನ್ನಲ್ಲೇ ಮೊದಲ ಹಂತದ ಸ್ಟಾಪ್ ಗೇಟ್ ಅಳವಡಿಕೆ ಯಶಸ್ವಿಯಾಗಿದೆ.
ಇದನ್ನೂ ಓದಿ: 🛑ಬೆಳ್ತಂಗಡಿ: ತಂದೆಯ ವಿಯೋಗದ ಐದನೇ ದಿನವೇ ಮಗನೂ ಮರಣ
ತುಂಗಾಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ನ ಚೈನ್ ಲಿಂಕ್ ಕಟ್ ಹಿನ್ನೆಲೆಯಲ್ಲಿ ಕೈಗೊಂಡಿದ್ದ ಸ್ಟಾಪ್ ಗೇಟ್ ಅಳವಡಿಕೆ ಮೊದಲ ಹಂತದಲ್ಲಿ ಯಶಸ್ವಿ ಆಗಿದ್ದು, ವರಮಹಾಲಕ್ಷ್ಮೀ ಹಬ್ಬದಂದು ಪ್ಲೇಟ್ ಕೂರಿಸಲಾಯಿತು. ಇದರಿಂದ ಸಚಿವ ಶಿವರಾಜ್ ತಂಗಡಗಿ ಹಾಗೂ ಶಾಸಕರು, ಸಂಸದರು ಸಿಬ್ಬಂದಿ, ಅಧಿಕಾರಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಈ ಸ್ಟಾಪ್ ಲಾಗ್ ಗೇಟ್ ಅಳವಡಿಕೆಗೆ ಎರಡು ದಿನಗಳಿಂದ ಸಿಬ್ಬಂದಿ ಹರಸಾಹಸ ಪಟ್ಟಿತ್ತು. ಕೊನೆಗೆ ಶನಿವಾರ ಅಡ್ಡಿಯಾಗಿದ್ದ ಸ್ಕೈವಾಕ್ ತೆರವುಗೊಳಿಸಿ ಬಳಿಕ ಸ್ಟಾಪ್ ಲಾಗ್ ಗೇಟ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ.
ಹರಿಯೋ ನೀರಲ್ಲಿ ಎಲಿಮೆಂಟ್ ಅಳವಡಿಸೋದು ದೊಡ್ಡ ಸವಾಲಾಗಿತ್ತು. ಆದ್ರೆ ಕಾರ್ಮಿಕರು ಯಶಸ್ವಿಯಾಗಿ ಅಳವಡಿಸಿದ್ದಾರೆ. ಹೀಗಾಗಿ ಕನ್ನಯ್ಯ ನಾಯ್ಡು ಸೇರಿದಂತೆ ಎಲ್ಲಾ ಸಿಬ್ಬಂದಿ ಗೆ ಧನ್ಯವಾದಗಳು ಎಂದು ಹೇಳಿ ಸಂತಸ ವ್ಯಕ್ತಪಡಿಸಿದರು.