Wed. Nov 20th, 2024

Belthangadi: ಬೆಳ್ತಂಗಡಿಯ 77 ಮೊಹಲ್ಲಾಗಳ ಖಾಝಿಯಾಗಿ ಎ.ಪಿ ಉಸ್ತಾದ್ ಅಧಿಕಾರ ಸ್ವೀಕಾರ

ಬೆಳ್ತಂಗಡಿ:(ಆ.18) ಅಧಿಕಾರ ಅಥವಾ ಅವಕಾಶಗಳು ಕೇಳಿ ಪಡೆಯದೆ ಅದಾಗಿ ಒಲಿದು ಬಂದರೆ ದೇವರ ಕಡೆಯಿಂದ ಮತ್ತು ಜನರ ಕಡೆಯಿಂದ ಸಹಕಾರ ತನ್ನಿಂತಾನೇ ಹರಿದು ಬರಲಿದೆ ಎಂದು ದೇವರು ಪ್ರವಾದಿಯವರ ಮೂಲಕ ತಿಳಿಸಿಕೊಟ್ಟಿದ್ದಾರೆ. ಅಲ್ಲಾಹನ ಧರ್ಮ ಕಾರ್ಯ ಅಳಿಇಲ್ಲದೆ ನಡೆಯಬೇಕೆಂಬ ಉದ್ದೇಶದಿಂದ ನಿಮ್ಮೆಲ್ಲರ ಅಪೇಕ್ಷೆಯಂತೆ ತಾಲೂಕಿನ ಜಮಾಅತ್ ಗಳ ಖಾಝಿ ಯಾಗಿ ನಾನು ಅಧಿಕಾರ ವಹಿಸಿಕೊಂಡಿದ್ದೇನೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ, ವಿಶ್ವದರ್ಜೆಯ ಧಾರ್ಮಿಕ ವಿದ್ವಾಂಸ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರ ಹೇಳಿದರು.

ಇದನ್ನೂ ಓದಿ: 🔴ಬೆಳ್ತಂಗಡಿ: ಗರ್ಡಾಡಿ ಶಕ್ತಿ ಕೇಂದ್ರದ ಪರವಾಗಿ ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾಸಕ ಹರೀಶ್ ಪೂಂಜರವರ ಹುಟ್ಟುಹಬ್ಬ ಆಚರಣೆ

ಸಂಯುಕ್ತ ಜಮಾಅತ್ ಬೆಳ್ತಂಗಡಿ ವತಿಯಿಂದ ಗುರುವಾಯನಕೆರೆ ಎಫ್.ಎಂ ಗಾರ್ಡನ್ ನಲ್ಲಿ ನಡೆದ ತಾಲೂಕಿನ 77 ಮೊಹಲ್ಲಾಗಳ ಖಾಝಿಯಾಗಿ ಅಧಿಕಾರ ಪದ ಸ್ವೀಕರಿಸಿ ಅವರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ವಹಿಸಿದ್ದರು.


ಸಯ್ಯಿದ್ ಸಾದಾತ್ ತಂಙಳ್ ಪ್ರಸ್ತಾವನೆಗೈದರು. ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು, ಪಝಲ್ ಜಮಲುಲ್ಲೈಲಿ ತಂಙಳ್ ಸಬರಬೈಲು, ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್, ಅಬ್ದುಸ್ಸಲಾಂ ತಂಙಳ್ ಪುಂಜಾಲಕಟ್ಟೆ, ಸಯ್ಯಿದ್ ಅಲವಿ ಜಲಾಲುದ್ದೀನ್ ತಂಙಳ್ ಮಲ್‌ಜ‌ಅ, ಹಝ್ರತ್ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಸಯ್ಯಿದ್ ಮಸ್‌ಊದ್ ತಂಙಳ್ ಕಾರ್ಯಕ್ರಮಕ್ಕೆ ದಿವ್ಯ ಸಾನಿದ್ಯ ನೀಡಿದರು.

ಕರ್ನಾಟಕ‌ ಉಲಮಾ ಒಕ್ಕೂಟದ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಸಮಾವೇಶ ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ ರೋಡ್ ಹುಸೈನ್ ಸ‌ಅದಿ ಕೂರತ್‌ ತಂಙಳ್ ಅನುಸ್ಮರಣಾ ಸಂದೇಶ ನೀಡಿದರು. ಮರ್ಕಝ್ ನಾಲೆಡ್ಜ್ ಸಿಟಿ ಆಡಳಿತ ನಿರ್ದೇಶಕ ಡಾ. ಹಕೀಂ ಅಝ್ಹರಿ ಕಾಂತಪುರ ಸಾಂದರ್ಭಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ವಕ್ಫ್ ಮಂಡಳಿ ನಿಕಟಪೂರ್ವ ರಾಜ್ಯಾಧ್ಯಕ್ಷ ಶಾಫಿ ಸ‌ಅದಿ ಬೆಂಗಳೂರು, ವಿದ್ವಾಂಸರುಗಳಾದ ಹೈದರ್ ಮದನಿ ಕರಾಯ, ಕಾಸಿಂ ಮದನಿ ಕರಾಯ, ಪಣಕಜೆ ಉಸ್ತಾದ್, ಕೆ.ಯು ಉಮರ್ ಸಖಾಫಿ ಕಾಜೂರು, ಆದಂ ಅಹ್ಸನಿ, ಪಿ.ಕೆ ಉಸ್ತಾದ್, ಕುಂಞಬ್ದುಲ್ಲ ದಾರಿಮಿ, ಪ್ರಮುಖರಾದ ಶಾಕಿರ್ ಹಾಜಿ, ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ವಕ್ಫ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ, ಸದಸ್ಯ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಹಾಗೂ ಸಂಯುಕ್ತ ಜಮಾಅತ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರತೀ‌ ಜಮಾಅತ್ ಗಳಿಂದ ಅಧ್ಯಕ್ಷ ಕಾರ್ಯದರ್ಶಿಗಳು ಭಾಗಿಯಾಗಿ ಖಾಝಿ ಅಧಿಕಾರ ವಾಗ್ದಾನ ಮಾಡಿದರು. ಬಳಿಕ ಎಪಿ ಉಸ್ತಾದ್ ಅವರನ್ನು ನಿಲುವಂಗಿ ತೊಡಿಸಿ ಪೇಠ ಧರಿಸಿ ಗೌರವಿಸಲಾಯಿತು. ಖಾಝಿ ಸ್ವೀಕರಿಸಿದ ಜಮಾಅತ್ ಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

ಸಂಯುಕ್ತ ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಅಶ್ರಫ್ ಸಖಾಫಿ ಅನುಸ್ಮರಣಾ ಭಾಷಣ ಮಾಡಿದರು.

Leave a Reply

Your email address will not be published. Required fields are marked *