Sat. Apr 19th, 2025

Ujire: ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಉಜಿರೆ ವರ್ತಕರ ಕುಟುಂಬ ಮಿಲನ

ಉಜಿರೆ:(ಆ.18) ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಉಜಿರೆ ವರ್ತಕರ ಕುಟುಂಬ ಮಿಲನ ಕಾರ್ಯಕ್ರಮವು ಆ.18 ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಮಕೃಷ್ಣ ಮಂಟಪದಲ್ಲಿ ಜರುಗಿತು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ದೀಪ ಬೆಳಗಿಸಿ ಉದ್ಘಾಟಿಸಿದರು.

ಇದನ್ನೂ ಓದಿ: 🛑Bengaluru: ಅರೆಪ್ರಜ್ಞಾವಸ್ಥೆಯಲ್ಲಿದ್ದ ಬೆಂಗಳೂರು ಪದವಿ ವಿದ್ಯಾರ್ಥಿನಿ ಅತ್ಯಾಚಾರಕ್ಕೆ ಬಿಗ್ ಟ್ವಿಸ್ಟ್!!

ವರ್ತಕರ ಸಂಘದ ಸಲಹೆಗಾರ ಪದ್ಮನಾಭ ಶೆಟ್ಟಿಗಾರ ಪದ್ಮಶ್ರೀ ತೆಂಗಿನ ಸಿರಿ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪೊಲೀಸ್ ಸಂಚಾರ ಠಾಣಾ ಸಬ್ ಇನ್ಸೆಕ್ಟರ್ ಅರ್ಜುನ್, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ, ಉಜಿರೆ ಸೈಂಟ್ ಸೆಬಾಸ್ಟಿನ್ ಆಟೋ ಇಂಜಿನಿಯರಿಂಗ್ ವರ್ಕ್ ಮಾಲಕ ಆಂಟನಿ ಟಿ.ಆರ್., ಉಜಿರೆ ಶ್ರೀ ಧನಲಕ್ಷ್ಮಿ ಜ್ಯುವೆಲ್ಲರ್ಸ್ ಮಾಲಕ ಕೆ. ರಮೇಶ್ ಕುಮಾರ್, ಉಜಿರೆ ಭಾರತ್ ಫೂಟ್ ವೇರ್ ಮಾಲಕ ಮೊಹಮ್ಮದ್ ಅಬ್ಬಾಸ್ , ಉಜಿರೆ ದಿಶಾ ಫುಡ್ ಕಾರ್ನರ್ ಮಾಲಕ ಅರುಣ್‌, ಸಮೃದ್ಧಿ ಟ್ರೇಡರ್ಸ್ ಮಾಲಕ ಇಬ್ರಾಹಿಂ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಅಧ್ಯಕ್ಷ ಅರವಿಂದ್ ಕಾರಂತ, ಕಾರ್ಯದರ್ಶಿ ಲಕ್ಷ್ಮಣ ಗೌಡ, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ವರ್ತಕರ ಸಂಘದ ಕೋಶಾಧಿಕಾರಿ ಅಬೂಬಕ್ಕರ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಬಿ. ಎಸ್. ಪ್ರಸಾದ್ ವಂದಿಸಿದರು. ಬಳಿಕ ವಿವಿಧ ಮನೋರಂಜನೆ, ಆಟೋಟ ಸ್ಪರ್ಧೆಗಳು ನಡೆಯಿತು.

Leave a Reply

Your email address will not be published. Required fields are marked *