ಮೇಷ ರಾಶಿ: ನೀವು ಕೊಟ್ಟ ಮಾತನ್ನು ಇಂದು ಉಳಿಸಿಕೊಳ್ಳುವುದು ಕಷ್ಟವಾದೀತು. ಕಠಿಣ ಸಂದರ್ಭದಲ್ಲಿ ನಿಮ್ಮ ವರ್ತನೆಯೂ ಲೆಕ್ಕಕ್ಕೆ ಬರಲಿದೆ. ನಿಮ್ಮ ಕೆಲಸಗಳು ನಿಮ್ಮನ್ನು ಯಾರೆಂದು ಹೇಳುವುದು. ಪರಿಶ್ರಮದ ವಿದ್ಯಾಭ್ಯಾಸಕ್ಕೆ ನಿಮ್ಮ ಮನಸ್ಸು ತೆರೆದುಕೊಳ್ಳಬಹುದು.
ವೃಷಭ ರಾಶಿ: ನಿಮ್ಮ ಭೂಮಿಯ ಮಾರಾಟಕ್ಕೆ ಯಾರಾದರೂ ಬರಬಹುದು. ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಆತಂಕ ಇರುವುದು.ನಿಮಗೆ ಬೇಕಾದುದನ್ನು ನೀವು ಪಡೆಯುವಿರಿ. ಅನ್ಯರು ನಿಮ್ಮನ್ನು ಗೇಲಿ ಮಾಡಿಯಾರು. ಕಛೇರಿಯ ಕಾರ್ಯಗಳು ಕೆಲವು ನಿಧಾನವಾಗಿ ಸಾಗುವುದು.
ಮಿಥುನ ರಾಶಿ: ಇಂದು ಸಹೋದರನ ನಡತೆ ನಿಮಗೆ ಸಂಶಯ ತರಿಸಬಹುದು. ಅತಿಥಿಗಳಿಗೆ ನಿಮ್ಮಿಂದ ಅನಾದರ ಸಿಗುವ ಸಾಧ್ಯತೆ ಇದೆ. ಒಂದು ಗುಣದಿಂದ ಅವರ ಸ್ವಭಾವವನ್ನು ಅಳೆಯುವುದು ಸರಿಯಲ್ಲ. ಸ್ವಲ್ಪ ದಿನ ಕಾದುನೋಡುವುದು ಒಳ್ಳೆಯದು.
ಕರ್ಕಾಟಕ ರಾಶಿ: ನಿಮ್ಮ ಪ್ರಭಾವದಿಂದಾಗಿ ಇನ್ನೊಬ್ಬರಿಗೆ ಸಹಾಯ ಸಿಗಲಿದೆ. ಮನೆಯ ಕೆಲಸದಲ್ಲಿ ಆಸಕ್ತಿ ಹೆಚ್ಚಿರುವುದು. ಮನಸ್ತಾಪಗಳನ್ನು ಹೊರಹಾಕುವಲ್ಲಿ ಹಾಕಿ ಮತ್ತು ಅದಕ್ಕೆ ರೀತಿಯೂ ಇರಲಿ. ನಿಮ್ಮ ಉತ್ಸಾಹವು ಸಂಜೆಯ ಸಮಯಕ್ಕೆ ಅತಿಯಾಗಿ ಇರುವುದು.
ಸಿಂಹ ರಾಶಿ: ಅಧಿಕಾರದ ಹಿಡಿತ ತಪ್ಪುವ ಸಾಧ್ಯತೆ ಇದೆ. ನಿಮ್ಮ ಇಷ್ಟದ ಕಾರ್ಯವನ್ನು ಮಾಡಿ ಸಂತೋಷಗೊಳ್ಳುವಿರಿ. ಸಂದರ್ಭಕ್ಕೆ ತಕ್ಕಹಾಗೆ ನಿಮ್ಮನ್ನು ಪರಿವರ್ತನೆ ಮಾಡಿಕೊಂಡರೆ ಯಾವುದೂ ಕಷ್ಟವಾಗದು. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಆಲೋಚನೆಗಳು ಮಾರ್ಗವನ್ನು ತಪ್ಪಬಹುದು.
ಕನ್ಯಾ ರಾಶಿ: ನಿಮಗೆ ಇಂದು ಏನಾದರೂ ಹೊಸತನ್ನು ಮಾಡಬೇಕು ಎಂದು ಅನ್ನಿಸುವುದು. ವ್ಯಾಮೋಹದಿಂದ ಕೆಲವನ್ನು ನೀವು ಬಿಡುವುದು ಕಷ್ಟವಾದೀತು. ನಿಮ್ಮ ವ್ಯವಹಾರದ ಬಗ್ಗೆ ಕಣ್ಣಿಟ್ಟಿರುತ್ತಾರೆ. ನಿಮ್ಮ ಆಪ್ತರೆನಿಸಕೊಂಡವರ ಜೊತೆ ಬೇಕಾದುದಷ್ಟನ್ನೇ ಮಾತನಾಡಿ.
ತುಲಾ ರಾಶಿ: ಬೇಗನೆ ಯಶಸ್ಸು ಸಿಗುವುದೆಂದು ದಾರಿ ಬದಲಿಸಬಾರದು. ಗುಣಾತ್ಮಕತೆಯಲ್ಲಿ ನಿಮಗೆ ಹಿನ್ನಡೆಯಾಗಲಿದೆ. ಸಂಗಾತಿಯ ನಡುವಿನ ವೈಮನಸ್ಯವು ಮಕ್ಕಳಿಂದ ದೂರಾಗಬಹುದು. ಕಛೇರಿಯಲ್ಲಿ ನಿಮ್ಮ ಕೆಲಸವು ಶಿಸ್ತಿನಿಂದ ಇರಲಿ.
ವೃಶ್ಚಿಕ ರಾಶಿ: ಇಂದು ವೃತ್ತಿಯಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಇದೆ. ಸ್ವಾರ್ಥವನ್ನು ಬಿಟ್ಟು ಆಚೆಗೆ ಬಂದಾಗ ನಿಮ್ಮ ಬುದ್ಧಿಯೂ ವಿಕಾಸವಾಗುತ್ತದೆ. ಕೃಷಿಯಲ್ಲಿ ಆಸಕ್ತಿ ಇರುವವರು ಹೊಸತನ್ನು ಮಾಡುವರು. ನೀವು ವಂಶಪಾರಂಪರ್ಯವಾಗಿ ಬಂದ ವಿದ್ಯೆಯನ್ನು ದುಡಿಮೆಗೆ ಬಳಸಿಕೊಳ್ಳುವಿರಿ.
ಧನು ರಾಶಿ: ಇಂದು ದುಸ್ಸಾಧ್ಯವಾದ ಕಾರ್ಯವನ್ನೇ ಮಾಡಲು ಮುಂದಾಗುವಿರಿ. ಕಾರ್ಯಕ್ಷೇತ್ರದಲ್ಲಿ ಅನಿರೀಕ್ಷಿತ ಬದಲಾವಣೆ ನಿಮಗೆ ಖುಷಿಯನ್ನು ಕೊಡದು. ಪ್ರಯಾಣದ ದಣಿವು ನಿಮ್ಮನ್ನು ಬಾಧಿಸೀತು. ನೀವು ಯಾರಿಗಾದರೂ ಮಾದರಿಯಾಗಬೇಕು ಎಂದುಕೊಳ್ಳಬೇಕಿಲ್ಲ. ಮಕ್ಕಳಿಗೆ ಆದರೆ ಸಾಕು.
ಮಕರ ರಾಶಿ: ಇಂದು ನಿಮಗೆ ನ್ಯಾಯಾಲಯದ ವಿಚಾರದಲ್ಲಿ ಬೇಸರವೆನಿಸಬಹುದು. ಯುವಕರಲ್ಲಿ ಅಧಿಕ ಉತ್ಸಾಹ ಕಾಣಿಸುವುದು. ದಾಂಪತ್ಯದಲ್ಲಿ ಸಾಮರಸ್ಯವು ಸ್ವಲ್ಪವೇ ಬರಲಿದೆ. ಅಪರಿಚಿತರು ನಿಮ್ಮ ನಡುವೆ ಏನಾದರೂ ಆಗುವಂತೆ ನೋಡಬಹುದು. ಪಾಲುದಾರಿಕೆಯಲ್ಲಿ ಇರುವವರು ಪರಸ್ಪರರ ಮಾತನ್ನು ಮಾತ್ರ ನಂಬಿ.
ಕುಂಭ ರಾಶಿ: ನಿಮ್ಮ ಗುರಿಯನ್ನು ಇಂದು ಯಾರಾದರೂ ಬದಲಿಸಬಹುದು. ಬದಲಾವಣೆಗಾಗಿ ದಿನವನ್ನೋ ವ್ಯಕ್ತಿಗಳನ್ನೋ ಕಾಯುವುದು ಬೇಡ. ನಿಮ್ಮವರನ್ನು ನೀವು ಕಳೆದುಕೊಂಡು ದುಃಖಪಡಬೇಕಾದೀತು. ಒಳ್ಳೆಯ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ.
ಮೀನ ರಾಶಿ: ನಿಮಗೆ ಸಿಗುವ ಕೆಲವು ಜವಾಬ್ದಾರಿಗಳಲ್ಲಿ ಹಿನ್ನಡೆಯಾಗಲಿದೆ. ವಿದೇಶೀಯ ವ್ಯಾಪಾರವು ಯಾವುದೇ ತೊಂದರೆ ಇಲ್ಲದೇ ನಡೆಯುವುದು. ನಿಮ್ಮ ಮಂತ್ರಕ್ಕೆ ಮಾವಿನ ಕಾಯಿ ಬೀಳದು. ಪ್ರಯತ್ನ ಬಹಳ ಮುಖ್ಯ. ನಿಮ್ಮ ವಿರುದ್ಧ ಯಾರಾದರೂ ಮಾತನಾಡಬಹುದು.