ಬೆಳ್ತಂಗಡಿ:(ಆ.19) ಯುವ ಸಾಹಿತಿ ಚಂದ್ರಹಾಸ ಕುಂಬಾರ ಬಂದಾರು ಇವರಿಗೆ ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ವಿಶ್ವ ದಾಖಲೆ ಗೌರವ ಲಭಿಸಿದೆ. ಬೆಳ್ತಂಗಡಿ ತಾಲೂಕಿನಿಂದ ಒಬ್ಬರು ಮಾತ್ರ ಆಯ್ಕೆಯಾಗಿದ್ದು ಬೆಳ್ತಂಗಡಿ ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ.
ಇದನ್ನೂ ಓದಿ: 🔶ಭಟ್ಕಳ: ಶಾಸಕ ಹರೀಶ್ ಪೂಂಜ, ಬಿಜೆಪಿ ಪ್ರಮುಖರು ಶ್ರೀ ರಾಮ ಕ್ಷೇತ್ರ ಕರಿಕಲ್ ಶಾಖಾ ಮಠಕ್ಕೆ ಭೇಟಿ
ಬೆಂಗಳೂರು ವಿಶ್ವ ದಾಖಲೆಗಾಗಿ ಏಕಕಾಲಕ್ಕೆ ಸಾವಿರಾರು ಕವಿಗಳಿಂದ ವಾಟ್ಸಾಪ್ ಗುಂಪಿನಲ್ಲಿ ಕವಿತೆ ಬರೆಸಿ ಸಾಹಿತ್ಯಿಕ ವಿಭಾಗದಲ್ಲಿ ದಾಖಲೆ ನಿರ್ಮಿಸುವ ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ಚೇತನ ಫೌಂಡೇಷನ್ ಹಾಗೂ ಕಾವ್ಯಶ್ರೀ ಟ್ರಸ್ಟ್ ಇವರ ಸಹಯೋಗದೊಂದಿಗೆ ಆಯೋಜಿಸಿದ “ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್”ಕವಿತೆಗಳ ಸಂಕಲನವು ವಿಶ್ವದಾಖಲೆಯಾಗಿದೆ.
ಆಗಸ್ಟ್ 18 ರಂದು ಕುವೆಂಪು ಸಭಾಂಗಣ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರು ಇಲ್ಲಿ ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ಮತ್ತು ಚೇತನ ಫೌಂಡೇಷನ್ ಕರ್ನಾಟಕ, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ (ರಿ.)ಬೆಂಗಳೂರು ಆಯೋಜಿಸಿದ ವಂದೇ ಮಾತರಂ ಕಾರ್ಯಕ್ರಮದಲ್ಲಿ “ಕಾವ್ಯ ಚೇತನ” ಪ್ರಶಸ್ತಿ ಪಡೆದಿರುತ್ತಾರೆ.