ಬೆಳ್ತಂಗಡಿ:(ಆ.19) “ಸ್ವಚ್ಛತೆ ಅದೆಷ್ಟೋ ಮಟ್ಟಿಗೆ ಆರೋಗ್ಯದ ಹಾದಿಯಾಗಿದೆ.” ICYM ಮತ್ತು YCS ಬೆಳ್ತಂಗಡಿ ಘಟಕದ ಸುಮಾರು 30 ಉತ್ಸಾಹಿ ಯುವಕರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದಾಗ ಈ ಸಿದ್ಧಾಂತವನ್ನು ಅರ್ಥಪೂರ್ಣವಾಗಿ ಪ್ರತಿಪಾದಿಸಲಾಯಿತು. ಹೋಲಿ ರಿಡೀಮರ್ ಚರ್ಚ್ ಆವರಣದಿಂದ ಬೆಳ್ತಂಗಡಿ ಬಸ್ ನಿಲ್ದಾಣದವರೆಗೆ ಕಾರ್ಯಕ್ರಮ ನಡೆಯಿತು.
ಈ ಅಭಿಯಾನಕ್ಕೆ ವಂದನೀಯ ಸ್ವಾಮಿ ಫಾ. ವಾಲ್ಟರ್ ಡಿ’ಮೆಲ್ಲೋ, ಹೋಲಿ ರಿಡೀಮರ್ ಸ್ಕೂಲ್ ಪ್ರಿನ್ಸಿಪಾಲ್ ರೆ. ಫಾ. ಕ್ಲಿಫರ್ಡ್ ಪಿಂಟೋ, ಪ್ಯಾರಿಷ್ ಕೌನ್ಸಿಲ್ ಕಾರ್ಯದರ್ಶಿ ಶ್ರೀ ಗಿಲ್ಬರ್ಟ್ ಪಿಂಟೋ, ಉದ್ಯಮಿ ಶ್ರೀ ಪ್ರೇಮ್ ರಾಜ್ ಸಿಕ್ವೇರಾ, ಸಿಸ್ಟರ್ ಜೆಸಿಂತಾ, ಮತ್ತು ಸಹೋದರ ಅಲ್ರಿಕ್ ಚಾಲನೆ ನೀಡಿದರು.
ICYM ಆನಿಮೇಟರ್‌ಗಳಾದ ಶ್ರೀ ವಿಲ್ಸನ್ ಮೋನಿಸ್, ಡಾ. ಫ್ಲಾವಿಯಾ ಪೌಲ್ ಮತ್ತು YCS ಆನಿಮೇಟರ್‌ಗಳಾದ ಶ್ರೀ ಜೇಮ್ಸ್ ಬಾರ್ಬೋಜಾ ಮತ್ತು ಶ್ರೀಮತಿ ಪ್ರೀತಾ ಅವರ ಮಾರ್ಗದರ್ಶನದಲ್ಲಿ, ICYM ಅಧ್ಯಕ್ಷೆ ಅನ್ಸೆಲ್ಮಾ ಡಿಸೋಜಾ, ICYM ಕಾರ್ಯದರ್ಶಿ ಅಜಯ್ ರೋಡ್ರಿಗಸ್, YCS ಕಾರ್ಯದರ್ಶಿ ಸ್ಟಾಲನ್ ಅವರ ನೇತೃತ್ವದಲ್ಲಿ, ಯುವಕರು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.