Sat. Apr 19th, 2025

Mangaluru: ಮೀನುಗಾರರಿಂದ ಸಮುದ್ರ ಪೂಜೆ – ಸಮೃದ್ಧ ಮೀನುಗಾರಿಕೆಗೆ ಹಾರೈಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ

ಮಂಗಳೂರು:(ಆ.19) ಮೀನುಗಾರರ ಶ್ರೇಯೋಭಿವೃದ್ದಿಗಾಗಿ ತಣ್ಣೀರುಬಾವಿ ಮೊಗವೀರ ಮಹಾಸಭಾ (ರಿ.) ಇದರ ವತಿಯಿಂದ ಚಿತ್ರಾಪುರ ಕಡಲ ಕಿನಾರೆಯಲ್ಲಿ ಆ. 19ರಂದು ಸಮುದ್ರ ಪೂಜೆ ನಡೆಯಿತು.

ಇದನ್ನೂ ಓದಿ: 🛑ಬೆಳ್ತಂಗಡಿ: ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ

ಸಮುದ್ರರಾಜನಿಗೆ ಹಾಲು, ಫಲ ಅರ್ಪಿಸಿ, ಸಮುದ್ರ ಪೂಜೆಯಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ದ.ಕ. ಸಂಸದ ಕ್ಯಾ| ಬ್ರಿಜೇಶ್ ಚೌಟ ” ಕರಾವಳಿಯಲ್ಲಿ ನೂಲ ಹುಣ್ಣಿಮೆಯಂದು ಸಮುದ್ರರಾಜನಿಗೆ ಪೂಜೆ ಸಲ್ಲಿಸುವುದು ಸಾಮಾನ್ಯ ಪ್ರತೀತಿ. ಹೊಸಋತುವಿನ ಮೀನುಗಾರಿಕೆಗೆ ತೆರಳುವ ಪ್ರತಿ ಮೀನುಗಾರರನ್ನು ಯಾವುದೇ ಪ್ರಾಣಾಪಾಯ ಇಲ್ಲದಂತೆ ಸಮುದ್ರರಾಜ ರಕ್ಷಿಸಲಿ, ಮತ್ಸ್ಯ ಸಮೃದ್ಧಿ ಉಂಟಾಗಲಿ” ಎಂದು ಹಾರೈಸಿದರು.

ಮಹಾಸಭಾ ದ ಅಧ್ಯಕ್ಷರಾದ ಲೀಲಾದರ್ ಕರ್ಕೇರ, ಉಪಾಧ್ಯಕ್ಷರಾದ ಕೇಶವ ಕರ್ಕೇರ, ಪ್ರಧಾನ ಕಾರ್ಯದರ್ಶಿ ಗಿರೀಶ್ ಕರ್ಕೇರ, ಪ್ರಧಾನ ಅರ್ಚಕರಾದ ದಯಾನಂದ ಬಂಗೇರ, ಭಜನಾ ಮಂದಿರದ ಅಧ್ಯಕ್ಷರಾದ ಶರತ್ ಬಂಗೇರ, ಉಪಾಧ್ಯಕ್ಷರಾದ ಸೀತಾರಾಮ್ ಬಂಗೇರ,ಕಾರ್ಯದರ್ಶಿ ರೋಶನ್ ಸುವರ್ಣ, ಸ್ಥಳೀಯ ಕಾರ್ಪೊರೇಟರ್ ಕುಮಾರಿ ಸುಮಿತ್ರಾ, , ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಓಂದಾಸ್ ಕಾಂಚನ್, ರಾಜೀವ್ ಕಾಂಚನ್,ಸುರೇಂದ್ರ ಬಂಗೇರ, ಮಧುಕರ್ ಕಾಂಚನ್,ರಾಜೇಶ್ ಸಾಲ್ಯಾನ್, ಮಹಿಳಾ ಸಭಾದ ಮೀನಾಕ್ಷಿ ಸುವರ್ಣ, ಸುರತ್ಕಲ್ ನಗರ ಮಹಾಶಕ್ತಿ ಕೇಂದ್ರ 2ರ ಅಧ್ಯಕ್ಷರಾದ ಸುನಿಲ್ ಕುಳಾಯಿ, ಮಹಿಳಾ ಮೋರ್ಚಾದ ಮಂಡಲ ಕಾರ್ಯದರ್ಶಿ ಪವಿತ್ರಾ ನಿರಂಜನ್, ಮಹಿಳಾ ಮೋರ್ಚಾ ದ ಮಂಡಲ ಸದಸ್ಯೆ ದಿವ್ಯ ಜಯರಾಜ್, ಬೂತ್ 61ರ ಅಧ್ಯಕ್ಷರಾದ ಲೋಕೇಶ್ ಸುವರ್ಣ,ಕಾರ್ಯದರ್ಶಿ ರಾಜೇಶ್ ಕರ್ಕೇರ, ಸುನೀತ್ ಚಿತ್ರಾಪುರ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *