ಉಜಿರೆ:(ಆ.21) ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಿ.ಬಿ.ಎಸ್.ಇ ಅಂತರ ಶಾಲೆಗಳ ಐಕ್ಸ್ (AICS) ಸಾಂಸ್ಕೃತಿಕ ಸ್ಪರ್ಧೆ “ಆನ್ವೀಕ್ಷ್ಯಂ-2024” ಎಂಬ ಶೀರ್ಷಿಕೆಯಡಿಯಲ್ಲಿ ಆಗಸ್ಟ್ 21 ರಂದು ನಡೆಯಿತು.
ಇದನ್ನೂ ಓದಿ: 🛑ಮಹಾರಾಷ್ಟ್ರ : ಮದುವೆಗೆ ಒಪ್ಪದಿದ್ದಕ್ಕೆ ಪ್ರಿಯಕರನಿಗೆ ಪ್ರೇಯಸಿ ಮಾಡಿದ್ದೇನು ಗೊತ್ತಾ?
ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀಯುತ ಡಾ.ಸತೀಶ್ಚಂದ್ರ.ಎಸ್ ಕಾರ್ಯಕ್ರಮ ಉದ್ಘಾಟಿಸಿ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದ ಸ್ಪರ್ಧಾರ್ಥಿಗಳಿಗೆ ಶುಭಹಾರೈಸಿದರು.
ಶಾಲೆಯ ಹಿರಿಯ ವಿದ್ಯಾರ್ಥಿನಿ ಡಾ.ಅಖಿಲ ಭಂಡಾರ್ಕರ್.ಪಿ (ಎಮ್.ಬಿ.ಬಿ.ಎಸ್, ಎಮ್.ಡಿ ಜೆನೆರಲ್ ಮೆಡಿಸಿನ್, ಡಿ.ಎಮ್ ಎಂಡೋಕ್ರಿನೋಲಜಿ) ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ, ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಶ್ರೀಯುತ ಧನ್ಯಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಶಾಲಾ ಮುಖ್ಯೋಪಾಧ್ಯಾಯ ಶ್ರೀ ಮನ್ಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.
ಸ್ಪರ್ಧೆಯಲ್ಲಿ ಜಿಲ್ಲೆಯ ಒಟ್ಟು 33 ಸಿ.ಬಿ.ಎಸ್.ಇ ಶಾಲಾ ತಂಡಗಳು ಭಾಗವಹಿಸಿದ್ದವು.