ಮೇಷ ರಾಶಿ: ನಿಮ್ಮ ನಡವಳಿಕೆಯೇ ಸಮೀಪಕ್ಕೆ ಜನರು ಬರುವಂತೆ ಮಾಡಿದೆ. ಇಂದು ನೀವು ಅತಿಥಿಗಳ ಕಡೆ ಗಮನ ಕೊಡದೆ ಅವರಿಗೆ ಬೇಸರ ಮಾಡುವಿರಿ. ಅತಿಯಾದ ಬಳಕೆಯಿಂದ ಸಂಬಂಧಗಳು ಹಳಸಬಹುದು. ಸಂಗಾತಿಯ ಮಾತನ್ನು ನೆರವೇರಿಸುವುದು ಕಷ್ಟವಾಗಬಹುದು.
ವೃಷಭ ರಾಶಿ : ಇಂದು ನಿಮಗೆ ಕೆಲವು ಕಾರ್ಯಗಳು ವ್ಯರ್ಥವೆನಿಸಬಹುದು. ಅನಗತ್ಯ ಓಡಾಟವನ್ನು ನಿಲ್ಲಿಸಿ. ಇದು ನಷ್ಟದ ಓಡಾಟವೇ ಆಗಲಿದೆ. ದೇಹವನ್ನು ನೀವು ದಂಡಿಸುವಿರಿ. ಅತಿಯಾದ ದಾಹದಿಂದ ನೀವು ಕಂಗೆಡುವಿರಿ. ಕಛೇರಿಯ ಘಟನೆಯನ್ನು ಮನೆಯಲ್ಲಿ ಹೇಳಿ ಅವರನ್ನು ಆತಂಕಕ್ಕೆ ತಳ್ಳುವವರಿದ್ದೀರಿ.
ಮಿಥುನ ರಾಶಿ : ನಿಮ್ಮ ಆಲೋಚನೆಗಳಿಂದ ನಿಮಗೆ ಯೋಗ್ಯ ಸ್ಥಾನವು ಲಭಿಸುವುದು. ನಿರ್ಲಕ್ಷ್ಯವನ್ನು ಮಾಡದೇ ಕೆಲಸಗಳನ್ನು ಮಾಡಿ ಮುಗಿಸಿ. ಉತ್ಸಾಹಕ್ಕೆ ಭಂಗ ಬರುವ ಸನ್ನಿವೇಶವನ್ನು ನೀವು ಎದುರಿಸುವಿರಿ. ನೀವು ಇನ್ನೊಬ್ಬರ ಜೊತೆ ಮಾತನಾಡುವುದು ಇಷ್ಟವಾಗದು.
ಕರ್ಕಾಟಕ ರಾಶಿ : ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಿಲ್ಲ. ಸಂದರ್ಭಕ್ಕೆ ತಕ್ಕಂತೆ ಬದಲಾಗಬಹುದು. ನಿಮ್ಮ ಅಗತ್ಯದ ಹಣವನ್ನು ಪೂರೈಸಲು ಶ್ರಮಪಡುವಿರಿ. ನೂತನ ಉದ್ಯೋಗವನ್ನು ಅರಸುತ್ತಿರುವಿರಿ. ಈಗಾಗಲೇ ಉದ್ಯೋಗದಲ್ಲಿ ಇರುವವರು ವೇತನವನ್ನು ಹೆಚ್ಚಿಸಲು ವಿನಂತಿಸಲಿದ್ದೀರಿ.
ಸಿಂಹ ರಾಶಿ : ಜಟಿಲ ಸಮಸ್ಯೆಗಳನ್ನು ನಿಮ್ಮ ಬಳಿ ಹೇಳಿಕೊಳ್ಳುವರು. ಯಾರನ್ನೋ ಮೆಚ್ಚಿಸಲು ನಿಮ್ಮ ಸಮಯವನ್ನು ವ್ಯಯಿಸಬೇಕಾಗುವುದು. ದುರಾಸೆಯಿಂದ ಸಂಕಷ್ಟವನ್ನು ಹೆಚ್ಚು ಮಾಡಿಕೊಳ್ಳುವಿರಿ. ಯಾರಿಗಾದರೂ ಯೋಗ್ಯರಿಗೆ ದಾನವನ್ನು ಮಾಡಿ. ನಿಮ್ಮವರಿಗೆ ನೀಡಿದ ಹಣವನ್ನು ಪಡೆಯಲು ಬಹಳ ಸಾಹಸ ಪಡುವಿರಿ.
ಕನ್ಯಾ ರಾಶಿ : ಇಂದು ಬಿಡಲಾಗದ ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಘಾಸಿಗೊಳಿಸಬಹುದು. ಹಣದ ಆಮಿಷವನ್ನು ತೋರಿಸಿ ನಿಮ್ಮನ್ನು ವಂಚಿಸುವ ಸರಳ ಉಪಾಯವಾಗಿದೆ. ನಿಮಗೆ ಪರಿಹರಿಸಿಕೊಳ್ಳಲು ಕಷ್ಟವಾದ ಸಮಸ್ಯೆಯನ್ನು ನೀವು ಅನುಭವಿಗಳ ಅಥವಾ ಆಪ್ತರ ಜೊತೆ ಹಂಚಿಕೊಳ್ಳಿ.
ತುಲಾ ರಾಶಿ : ದಾನವನ್ನು ಪಡೆಯಲಿಕ್ಕಾಗಿ ಇಂದು ನಿಮ್ಮ ಬಳಿ ಯಾರಾದರೂ ಬರಬಹುದು. ಬುದ್ಧಿವಂತರಾದರೆ ಸಾಲದು. ಅದನ್ನು ಪ್ರಯೋಗಿಸುವ ಚಾಣಾಕ್ಷತೆಯೂ ಬೇಕು. ಯಾವುದನ್ನೂ ಕೊಂಡುಕೊಳ್ಳಬಹುದು. ಆದರೆ ನೆಮ್ಮದಿ ಸುಖವನ್ನು ಖರೀದಿಸಲಾಗದು.
ವೃಶ್ಚಿಕ ರಾಶಿ : ಇಂದು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಿರಿ. ಅನಧಿಕೃತ ವಿಚಾರಕ್ಕೆ ನೀವು ಮನಸ್ಸು ಮಾಡುವುದು ಬೇಡ. ಒಮ್ಮೆಲೇ ದೊಡ್ಡ ಯೋಚನೆಯನ್ನು ಕಾರ್ಯಗತಗೊಳಿಸುವುದು ಬೇಡ. ನೀವು ಮೊದಲು ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿ.
ಧನು ರಾಶಿ : ಹತ್ತರ ಜೊತೆ ಹನ್ನೊಂದು ಎನ್ನುವ ಭಾವ ಬೇಡ. ಪಾಲಕರಿಗೆ ನಿಮ್ಮನ್ನು ದೂರ ಕಳುಹಿಸುವುದು ಕಷ್ಟವಾದೀತು. ಉತ್ತಮ ಯೋಜನೆ ನಿಮ್ಮ ಉನ್ನತಾಧಿಕಾರಕ್ಕೆ ಪೂರಕವಾಗಬಹುದು. ಮನೆಯಲ್ಲಿ ಆಡಿದ ಮಾತುಗಳಿಂದ ನೀವು ಹೊರಬರಲು ಸಮಯಬೇಕಾದೀತು. ಸಂಗಾತಿಯ ಮೇಲೆ ಅನುಮಾನದ ದೃಷ್ಟಿ ಇರಲಿದೆ.
ಮಕರ ರಾಶಿ : ಇಂದು ನಿಮ್ಮ ವ್ಯಾಪಾರದಲ್ಲಿ ಚೇತರಿಕೆ ಕಾಣಿಸಿಕೊಂಡರೂ ನೀವು ಯಾವುದೋ ಗಹನವಾದ ಆಲೋಚನೆಯಲ್ಲಿಯೇ ಇರುವಿರಿ. ತಪ್ಪು ಆಲೋಚನೆಗಳಿಂದ ಮಾಡಿದ ಕಾರ್ಯವು ತಪ್ಪಾಗಿಯೇ ಆಗುತ್ತದೆ. ನೀವು ಸಂಗಾತಿಯ ಮೇಲೆ ಭಾವನಾತ್ಮಕವಾಗಿ ಇರುವಿರಿ. ಉದ್ಯೋಗದ ನಿಮಿತ್ತ ಸಂಗಾತಿಯನ್ನು ಬಿಡಲು ನಿಮಗೆ ಕಷ್ಟವಾದೀತು.
ಕುಂಭ ರಾಶಿ : ಒಂದೇ ಉದ್ದೇಶ ಹೊಂದಿದ ಹಲವರನ್ನು ಭೇಟಿ ಮಾಡುವಿರಿ. ಯಾವುದನ್ನಾದರೂ ಮೊದಲು ಬಂದಂತೆ ಸ್ವೀಕರಿಸಿ. ಅನಂತರ ಅದನ್ನು ನಿಮಗೆ ಬೇಕಾದಂತೆ ಮಾಡಿಕೊಳ್ಳಬಹುದು. ಭರವಸೆಯೇ ನಿಮಗೆ ಭವಿಷ್ಯದ ಬೆಳಕಾಗಲಿದೆ. ಮಾನಸಿಕವಾಗಿ ನೀವು ದುರ್ಬಲವಾದರೆ ಸ್ವಲ್ಪ ಸಮಯ ಏಕಾಂತವಾಗಿ ಇರಿ.
ಮೀನ ರಾಶಿ : ನೀವು ಇಂದು ಅಕಾರಣವಾಗಿ ಚಿಂತೆ ಮಾಡುವಿರಿ. ನಿಮಗೆ ವ್ಯಾಪಾರದ ನಷ್ಟವನ್ನು ಸಹಿಸಿಕೊಳ್ಳುವುದು ಕಷ್ಟವಾದೀತು. ಪೂರ್ಣ ವಿವರಗಳನ್ನು ಪಡೆದು ಕಾರ್ಯಪ್ರವೃತ್ತರಾಗಿ. ಆತುರದಲ್ಲಿ ಮಾಡಿದ ಕಾರ್ಯವನ್ನೇ ಮತ್ತೆ ಮಾಡಬೇಕಾದೀತು.