Sat. Apr 19th, 2025

Guruvayanakere :ವಿದ್ವತ್ ಪದವಿಪೂರ್ವ ಕಾಲೇಜಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

ವಿದ್ವತ್ ಪದವಿಪೂರ್ವ ಕಾಲೇಜಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

ಗುರುವಾಯನಕೆರೆ : ವಿದ್ವತ್ ಪದವಿಪೂರ್ವ ಕಾಲೇಜು ಗುರುವಾಯನ ಕೆರೆಯ ವಿದ್ವತ್ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಈ ಮಂಡಗಳಲೆ, ಕಾಲೇಜಿನ ಪ್ರಾಂಶುಪಾಲರಾದ ಅರುಣ್ ಕ್ಯಾಸ್ಟಲಿನೊ, ಮತ್ತು ವಿದ್ಯಾರ್ಥಿಗಳು ದೀಪ ಪ್ರಜ್ವಲಿಸುವುದರ ಮೂಲಕ ನೆರವೇರಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಡಳಿತ ಅಧಿಕಾರಿಗಳಾದ ಚಂದ್ರಶೇಖರ ಗೌಡ ಕೆ ಮಾತನಾಡಿ ಶಿಕ್ಷಣ, ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಿಗೆ ನಾರಾಯಣಗುರು ರವರು ಸಲ್ಲಿಸಿದ ಕೊಡುಗೆಯ ಬಗ್ಗೆ ಹಾಗೂ ಸಾಮಾನ್ಯ ಜನರಿಗೆ ನೀಡಿದ ಸಂದೇಶದ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಬೋಧಕೇತರ ವರ್ಗ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *