ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶೂಲ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:48 ಗಂಟೆ, ರಾಹು ಕಾಲ ಬೆಳಿಗ್ಗೆ 09:28 ರಿಂದ 11:01, ಯಮಘಂಡ ಕಾಲ ಮಧ್ಯಾಹ್ನ 02:08 ರಿಂದ 03:42ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:21 ರಿಂದ 07:55ರ ವರೆಗೆ.
ಮೇಷ ರಾಶಿ : ನೀವು ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಇಟ್ಟುಕೊಳ್ಳಬೇಕಾಗುವುದು. ಇಂದು ನೀವು ಯಾವುದೇ ವಿಚಾರವನ್ನು ಸಂಪೂರ್ಣವಾಗಿ ತಿಳಿದು ಮಾತನಾಡುವುದು ಒಳ್ಳೆಯದು. ನಿಮ್ಮ ಮಾತು ಇತರರಿಗೆ ನೋವನ್ನು ಕೊಡಬಹುದು.
ವೃಷಭ ರಾಶಿ : ಇಂದು ಚರಾಸ್ತಿಯ ವಿಚಾರಕ್ಕೆ ಸಹೋದರರ ನಡುವೆ ವಾಗ್ವಾದ ನಡೆಯಬಹುದು. ನಿಮಗೆ ಸಾಲ ಕೊಡಲು ಯಾರಾದರೂ ಮುಂದೆಬರಬಹುದು. ನಿಮ್ಮ ವಿವೇಕವು ಸರಿಯಾಗಿ ಇರಲಿ. ನಿಮ್ಮವರನ್ನೇ ನೀವು ನಂಬದ ಸ್ಥಿತಿಯಲ್ಲಿ ಇರಬಹುದು.
ಮಿಥುನ ರಾಶಿ : ಇಂದು ನಿರುಪಯೋಗಿ ವಸ್ತುಗಳನ್ನು ಅನ್ಯರಿಗೆ ಕೊಡುವಿರಿ. ಸಾಮಾಜಿಕ ಕಾರ್ಯದಲ್ಲಿ ತಾರತಮ್ಯವನ್ನು ತೋರಿಸುವುದು ಬೇಡ. ಎಲ್ಲವನ್ನೂ ಮಾತಿನಿಂದಲೇ ಬಗೆಹರಿಸಲಾಗದು. ನೀವು ನಿಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವಿರಿ. ನಿಮಗೆ ಅದು ಬಹಳ ಆಪ್ತವಾಗಲಿದೆ.
ಕರ್ಕಾಟಕ ರಾಶಿ : ಅವಿವಾಹಿತರಿಗೆ ಇಂದು ವಿವಾಹಕ್ಕೆ ಯೋಗ್ಯವಾದ ಮಾತುಗಳು ಕೇಳಿಸಬಹುದು. ನಿಮ್ಮ ಸಂತೋಷದ ಸುದ್ದಿಯನ್ನು ಇತರರಿಗೂ ಹಂಚುವಿರಿ. ನಿಮ್ಮ ಆಲೋಚನೆಗಳನ್ನು ಮನೆಯವರ ಮೇಲೆಹೇರಲು ಹೋದರೆ ಕಲಹವೇ ಆದೀತು. ನೈತಿಕ ಬೆಂಬಲ ಸಿಗುವುದು ಕಷ್ಟ.
ಸಿಂಹ ರಾಶಿ : ಇಂದು ಮನೆಯನ್ನು ನೋಡಿಕೊಳ್ಳುವ ಹೊಣೆ ನಿಮಗೆ ಸಿಗಲಿದೆ. ನಿಮ್ಮ ಉತ್ಸಾಹವೇ ನಿಮಗೆ ಶಾಪವಾದೀತು. ತುಂಬಾ ದಿನಗಳಿಂದ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಲಿದೆ. ನಿಮ್ಮ ಉದ್ಯೋಗಕ್ಕೆ ಬೇಕಾದ ಸಲಹೆಗಳನ್ನು ನೀವು ತೆಗೆದುಕೊಳ್ಳಬೇಕಾಗಬಹುದು.
ಕನ್ಯಾ ರಾಶಿ : ಇಂದು ನಿಮ್ಮ ಉದ್ಯಮದಲ್ಲಿ ಆದ ನಷ್ಟದಿಂದ ಮನಸಿನೊಳಗೆ ಸಂಕಟಪಡುವಿರಿ. ತಂತ್ರಜ್ಞಾನದಿಂದ ನಿಮ್ಮ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳುವಿರಿ. ಸಮಯದ ಬೆಲೆಯನ್ನು ನೀವು ಇಂದು ಅರ್ಥಮಾಡಿಕೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಭಾವನೆಗಳು ಬದಲಾಗಬಹುದು.
ತುಲಾ ರಾಶಿ : ನಿಮ್ಮ ಕಾರ್ಯದಕ್ಷತೆಗೆ ಜವಾಬ್ದಾರಿಗಳು ಬದಲಾಗಲಿವೆ. ಚೆನ್ನಾಗಿರುವ ವ್ಯವಸ್ಥೆಯನ್ನು ಇನ್ನೂ ಚೆನ್ನಾಗಿ ಮಾಡಲು ಹೋಗಿ ಹಾಳು ಮಾಡುವಿರಿ. ಮಾನಸಿಕ ತೊಂದರೆಯನ್ನು ಅನುಭವಿಸುವಿರಿ. ತಾಳ್ಮೆಯಿಂದ ಇರುವುದು ಇಂದು ನಿಮಗೆ ಕಷ್ಟವಾದೀತು. ಇನ್ನೊಬ್ಬರ ಮಾತಿಗೆ ಅವಕಾಶವನ್ನು ಮಾಡಿಕೊಡಿ.
ವೃಶ್ಚಿಕ ರಾಶಿ : ನಿಮಗೆ ಸಿಗುವ ಸಾಮಾಜಿಕ ಮನ್ನಣೆಯು ಅಧಿಕ ಕಾರ್ಯವನ್ನು ಮಾಡುವಂತೆ ಮಾಡೀತು. ಮಕ್ಕಳ ಆರೋಗ್ಯದ ಕಾರಣದಿಂದ ನೀವು ಕಛೇರಿಗೆ ವಿರಾಮ ಹಾಕಬೇಕಾದೀತು. ನಿಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಎಲ್ಲರನ್ನೂ ಶಪಿಸುವುದು ಸರಿಯಲ್ಲ. ನಿಮ್ಮವರ ಸಲಹೆಯನ್ನು ಪಡೆದು ಕೆಲಸಕ್ಕೆ ಹೋಗುವುದು ಒಳ್ಳೆಯದು.
ಧನು ರಾಶಿ : ಇಂದು ನಿಮ್ಮ ದಾಂಪತ್ಯದ ಬಿರುಕು ನ್ಯಾಯಾಲಯದ ಮೆಟ್ಟಿಲೇರಿಸಲೂಬಹುದು. ನಿಮ್ಮ ವಸ್ತುವನ್ನು ಯಾರಿಗೂ ಕೊಡುವ ಮನಸ್ಸಾಗದು. ಆಸ್ತಿಯ ವಿಚಾರದಲ್ಲಿ ಕಲಹಗಳು ಉಂಟಾಗಬಹುದು. ನಿಮ್ಮ ಆಲೋಚನೆಗಳನ್ನು ಸಂಗಾತಿಯು ತಿದ್ದಲು ಪ್ರಯತ್ನಿಸಬಹುದು.
ಮಕರ ರಾಶಿ : ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳುವುದು ಔಚಿತ್ಯವಿಲ್ಲ. ವ್ಯವಹಾರದಲ್ಲಿ ಯಾರಾದರೂ ನಿಮ್ಮನ್ನು ಮಾತಿನಿಂದ ಮರುಳುಮಾಡಬಹುದು. ಹಣದ ಪ್ರಾಮುಖ್ಯವನ್ನು ತಿಳಿದುಕೊಳ್ಳುವ ಸಮಯವಿಂದು. ಹಣವನ್ನು ನೀವು ಹೂಡಿಕೆಯಲ್ಲಿ ಇಡುವ ಸಾಧ್ಯತೆ ಇದೆ. ಸಾಲದ ಹಣವನ್ನು ಪಾವತಿಸಿ ಸ್ವಲ್ಪ ಖುಷಿಪಡುವಿರಿ.
ಕುಂಭ ರಾಶಿ : ಸಜ್ಜನರ ಭೇಟಿಯಾಗುವ ಸಾಧ್ಯತೆ ಇದೆ. ನಿಮಗೆ ನಿರೀಕ್ಷಿತ ಫಲ ಸಿಗದೇ ಮನೆಯವರಿಗೆ ಬೇಸರವಾಗಬಹುದು. ಆಪ್ತರ ಜೊತೆ ಉದ್ಯೋಗಕ್ಕೆ ಸಂಬಂಧಿಸಿದ ಸಮಾಲೋಚನೆಯನ್ನು ನಡೆಸುವಿರಿ. ಇಂದಿನ ಬೆಳಗ್ಗೆ ಹೆಚ್ಚಿನ ಉತ್ಸಾಹ ಇರಲಿದೆ. ಅನುಕೂಲಕರ ವಾತಾವರಣವನ್ನು ನೀವು ಸೃಷ್ಟಿಸಿಕೊಂಡು ಇರುವಿರಿ.
ಮೀನ ರಾಶಿ : ಒತ್ತಡದ ನಡುವೆಯೂ ಕಾರ್ಯನಿರ್ವಹಣೆ ಮಾಡಿದ ಕೌಶಲಕ್ಕೆ ಪ್ರಶಂಸೆಗಳು ಸಿಗಲಿವೆ. ಯಾರನ್ನೋ ಗೆಲ್ಲುವುದು ಸುಲಭದ ತುತ್ತಲ್ಲ. ಹಣದ ಸಮಸ್ಯೆಗಳಿಂದ ಮುಕ್ತರಾಗುವಿರಿ. ನಿಮ್ಮನ್ನು ಇಂದು ಕೆಲವರು ಭೇಟಿಯಾಗಲಿದ್ದಾರೆ. ನಿಮ್ಮ ವ್ಯಕ್ತಿತ್ವವನ್ನು ನೀವು ಪರಿಚಯಿಸುವಿರಿ. ನೀವು ನೆಮ್ಮದಿಯನ್ನು ಕಳೆದುಕೊಳ್ಳಲು ಕೆಲವು ಸಂಗತಿಗಳು ಆಗಬಹುದು. ನಿಮ್ಮ ಶ್ರಮಕ್ಕೆ ಎಂತಹ ಫಲವೆಂದು ಇಂದು ಗೊತ್ತಾಗುವುದು.