Wed. Nov 20th, 2024

Prostitution : ಅಮೆರಿಕಾದಲ್ಲಿ ವೇಶ್ಯಾವಾಟಿಕೆ ದಂಧೆ – ಭಾರತೀಯ ಮೂಲದ ಯುವಕರ ಬಂಧನ

Prostitution:(ಆ.24) ಅಮೆರಿಕಾದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಭಾರತೀಯ ಮೂಲದ 7 ಯುವಕರು ಸೇರಿದಂತೆ ಒಟ್ಟು 21 ಜನರನ್ನು ಬಂಧಿಸಲಾಗಿದೆ. ವೇಶ್ಯಾವಾಟಿಕೆ ನಿಗ್ರಹಕ್ಕಾಗಿ ನಡೆದ ಸ್ಟಿಂಗ್ ಆಪರೇಷನ್‌ ವೇಳೆ 21 ಜನ ಸಿಕ್ಕಿಬಿದ್ದಿದ್ದು, ಅದರಲ್ಲಿ 7 ಭಾರತೀಯರು ಸೇರಿದ್ದಾರೆ. ಅಮೆರಿಕಾದ ಟೆಕ್ಸಾಸ್‌ನ ಡೆಂಟನ್ ಕೌಂಟಿಯಲ್ಲಿ ಈ ಘಟನೆ ನಡೆದಿದೆ. ವೇಶ್ಯಾವಾಟಿಕೆ ವಿರುದ್ಧ ನಡೆದ ಕುಟುಕು ಕಾರ್ಯಾಚರಣೆ ವೇಳೆ 21 ಜನರನ್ನು ಬಂಧಿಸಲಾಗಿದ್ದು, ಅದರಲ್ಲಿ 7 ಭಾರತೀಯರು ಸೇರಿದ್ದಾರೆ.

ಇದನ್ನೂ ಓದಿ: 🛑ಬೆಳ್ತಂಗಡಿ: ಬೆಳಾಲು ಕೊಲೆ ಪ್ರಕರಣಕ್ಕೆ ಟ್ವಿಸ್ಟ್‌

ಟೆಕ್ಸಾಸ್‌ನ ಡೆಂಟನ್ ಕೌಂಟಿ ಶೆರಿಫ್‌ ಕಚೇರಿಯೂ ವೇಶ್ಯಾವಾಟಿಕೆಯ ನಿರ್ಮೂಲನೆಗಾಗಿ 2 ದಿನಗಳ ಸ್ಟಿಂಗ್ ಆಪರೇಷನ್ ನಡೆಸಿತ್ತು. ವೇಶ್ಯಾವಾಟಿಕೆ ಬೇಡಿಕೆ ನಿಗ್ರಹ ಕಾರ್ಯಾಚರಣೆ ಎಂದು ಕರೆಯಲ್ಪಡುವ ಈ ಕಾರ್ಯಾಚರಣೆಯೂ ಲೈಂಗಿಕ ಸೇವೆಗಳನ್ನು ಖರೀದಿಸಲು ಪ್ರಯತ್ನಿಸುವ ವ್ಯಕ್ತಿಗಳನ್ನು ಗುರಿಯಾಗಿಸುವ ಮೂಲಕ ಸಮುದಾಯದಲ್ಲಿ ವೇಶ್ಯಾವಾಟಿಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿತ್ತು.

ಈ ಕಾರ್ಯಾಚರಣೆ ವೇಳೆ ಬಂಧಿತರಾದ ಭಾರತೀಯ ಮೂಲದ ವ್ಯಕ್ತಿಗಳನ್ನು ನಿಖಿಲ್ ಬಂಡಿ, ನಿಖಿಲ್ ಕುಮ್ಮರಿ, ಗಲ್ಲಾ ಮೊನಿಶ್‌, ಕಾರ್ತಿಕ್ ರಾಯಪತಿ, ನಬಿನ್‌ ಶ್ರೇಷ್ಠ, ಅಮಿತ್ ಕುಮಾರ್ ಹಾಗೂ ಜೈ ಕಿರಣ್ ರೆಡ್ಡಿ ಮೆಕಲ ಎಂದು ಗುರುತಿಸಲಾಗಿದೆ. ಇವರಲ್ಲಿ ನಿಖಿಲ್ ಬಂಡಿ ಹಾಗೂ ನಿಖಿಲ್ ಕುಮ್ಮರಿ ಡೆಂಟನ್ ನಿವಾಸಿಗಳಾಗಿದ್ದು, ಇವರ ವಿರುದ್ಧ ಬಂಧನದಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದ ಆರೋಪವೂ ಇವರ ಮೇಲಿದೆ.

ಹಾಗೆಯೇ ಗಲ್ಲಾ ಮೊನಿಶ್, ರಾಯಪತಿ ಕಾರ್ತಿಕ್, ಹಾಗೂ ನಬೀನ್ ಶ್ರೇಷ್ಠ ಕೂಡ ಡೆಂಟನ್‌ ನಿವಾಸಿಗಳೇ ಆಗಿದ್ದು, ಇವರ ವಿರುದ್ಧ ವೇಶ್ಯಾವಾಟಿಕೆಗೆ ಮನವಿ ಮಾಡಿ ಆರೋಪವಿದೆ. ಇದರ ಜೊತೆಗೆ ಆರೋಪಿ ಜಯಕಿರಣ ರೆಡ್ಡಿ ಮೆಕಲ ವಿರುದ್ಧ ಅಪ್ರಾಪ್ತೆಗೆ ವೇಶ್ಯಾವಾಟಿಕೆಗೆ ಮನವಿ ಮಾಡಿದ ಆರೋಪದ ಜೊತೆ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪವೂ ಇದೆ. ಟೆಕ್ಸಾಸ್‌ ಕಾನೂನಿನ ಪ್ರಕಾರ ಅಪ್ರಾಪ್ತೆಯನ್ನು ಬಳಸಿಕೊಂಡು ವೇಶ್ಯಾವಾಟಿಕೆಗೆ ಮನವಿ ಮಾಡುವುದು ಎರಡನೇ ಹಂತದ ಅಪರಾಧವಾಗಿದೆ. ಆಗಸ್ಟ್ 14 ಹಾಗೂ 15 ರಂದು ಈ ವೇಶ್ಯಾವಾಟಿಕೆ ವಿರೋಧಿ ಕಾರ್ಯಾಚರಣೆ ನಡೆದಿದ್ದು, ಒಟ್ಟು 21 ಜನರನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *