Wed. Nov 20th, 2024

Raichur: ಪೆನ್ಸಿಲ್​ನಲ್ಲಿ ಮೂಡಿಬಂದ ಬಾಲ ಕೃಷ್ಣ- ಈ ಕಲಾಕೃತಿಯ ಅಗಲ, ಎತ್ತರ ಎಷ್ಟು ಗೊತ್ತಾ?

ರಾಯಚೂರು:(ಆ.25) ಆಗಸ್ಟ್ 26 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ಬೆಣ್ಣೆ ಕಳ್ಳ ಕೃಷ್ಣ ಜನಿಸಿದ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅದರಲ್ಲೂ ತಾಯಂದಿರು ತಮ್ಮ ಮುದ್ದು ಕಂದಮ್ಮನಿಗೆ ರಾಧೆ ಕೃಷ್ಣನ ವೇಷಗಳನ್ನು ತೊಟ್ಟು ಸಂಭ್ರಮಿಸುತ್ತಾರೆ.

ಇದನ್ನೂ ಓದಿ: 🛑ಬೆಂಗಳೂರು: ಒಂದು ಕೈಯಲ್ಲಿ ಸಿಗರೇಟ್.. ಮತ್ತೊಂದು ಕೈಯಲ್ಲಿ ಕಾಫಿ

ಶ್ರೀಕೃಷ್ಣನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲು ಮೀಸಲಾಗಿರುವ ಈ ದಿನವನ್ನು ಸಡಗರದಿಂದ ಎಲ್ಲೆಡೆ ಆಚರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ನಡುವೆ ರಾಯಚೂರಿನಲ್ಲಿ ಪೆನ್ಸಿಲ್​ನಲ್ಲಿ ಬಾಲ ಕೃಷ್ಣನನ್ನು ಕೆತ್ತನೆ ಮಾಡಲಾಗಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಬಾಲ ಕೃಷ್ಣನನ್ನು ಪೆನ್ಸಿಲ್​ನಲ್ಲಿ ಕೆತ್ತನೆ ಮಾಡಲಾಗಿದ್ದು, ಈ ಮೂಲಕ ವಿಶಿಷ್ಟವಾಗಿ ಕೃಷ್ಣನ ಹುಟ್ಟಿದ ಹಬ್ಬವನ್ನು ಆಚರಿಸಲು ಮುಂದಾಗಿದ್ದಾರೆ.

ಕೆತ್ತನೆಯನ್ನು ಮಾಡಿದವರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಪಟ್ಟಣದ ನಳಿನಿ ನವೀನ್ ಕುಮಾರ್ ಎಂಬುವವರು, ಪೆನ್ಸಿಲ್​ನಲ್ಲಿ ಕೃಷ್ಣನನ್ನು ಕೆತ್ತನೆ ಮಾಡಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಪೆನ್ಸಿಲ್​ನಲ್ಲಿ ಮೂಡಿದ ಬಾಲ ಕೃಷ್ಣನ ಸೂಕ್ಷ್ಮ ಕಲಾಕೃತಿ, 1 ಮಿಲಿ ಮೀಟರ್ ಅಗಲ ಹಾಗೂ 1 ಸೆಂಟಿಮೀಟರ್ ಎತ್ತರವಾಗಿದ್ದು, ಸುಮಾರು ನಾಲ್ಕು ಗಂಟೆಗಳಲ್ಲಿ ಈ ಕಲಾಕೃತಿಯನ್ನು ನಳಿನಿ ಅವರು ಕೆತ್ತನೆ ಮಾಡಿದ್ದಾರೆ. ಇದು ನಳಿನಿಯವರ 104 ಸೂಕ್ಷ್ಮ ಕಲಾಕೃತಿಯಾಗಿದೆ.

Leave a Reply

Your email address will not be published. Required fields are marked *