ಬೆಳ್ತಂಗಡಿ:(ಆ.26) ಎ.ಎಸ್.ಎನ್ ಕ್ರಿಯೇಷನ್ ಇವೆಂಟ್ ಮ್ಯಾನೇಜ್ಮೆಂಟ್ ಪ್ರೆಸೆಂಟ್ಸ್ ವಾಯ್ಸ್ ಆಫ್ ಮಲ್ನಾಡ್ ಮೂಡಿಗೆರೆ ಸೀಸನ್ 3 ಫೈನಲ್ ಹಂತಕ್ಕೆ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬೈಪಾಡಿ ನೆರೋಲ್ದಪಳಿಕೆ ಇಲ್ಲಿಯ ಹಳ್ಳಿ ಪ್ರತಿಭೆ ಕುಸುಮ ಎಂ ಎಸ್. ತಲುಪಿದ್ದಾರೆ.
ಇದನ್ನೂ ಓದಿ: 🛑ಮಹಾರಾಷ್ಟ್ರದ ನಾಗ್ಪುರದಲ್ಲಿ ಡಿ.ಪಿ.ಜೈನ್ ಕಂಪನಿ ಕಚೇರಿ ಎದುರು ಕ್ರಷರ್ ಮಾಲಕರ ಪ್ರತಿಭಟನೆ
ಅವಕಾಶ ಸಿಗುತ್ತಿಲ್ಲ ಎನ್ನುವವರ ಮಧ್ಯೆ, ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿ ಸದ್ದಿಲ್ಲದೇ ತಮ್ಮದೇ ಶೈಲಿಯಲ್ಲಿ ಗಾಯನ ಕ್ಷೇತ್ರದಲ್ಲಿ ಸುದ್ದಿ ಮಾಡುತ್ತಿರುವ ಹಳ್ಳಿ ಪ್ರತಿಭೆ ಕುಸುಮ ಎಂ ಎಸ್ ಇವರು ವಾಯ್ಸ್ ಆಫ್ ಮಲ್ನಾಡ್ ಇವರು ಏರ್ಪಡಿಸಿದ್ದ ಗಾಯನ ಸ್ಪರ್ಧೆಯಲ್ಲಿ ಫೈನಲ್ ಹಂತಕ್ಕೆ ತಲುಪಿದ 12 ಸ್ಪರ್ಧೆಗಳಲ್ಲಿ ಇವರು ಒಬ್ಬರಾಗಿರುತ್ತಾರೆ..
ಕಲಾಮಾತೆಯೇ ಕಲಾವಿದನನ್ನು ಅಪ್ಪಿಕೊಂಡ ಮೇಲೆ ಭಯವೇತಕೆ , ಕಲಾದೇವಿಯನ್ನು ಪೂಜಿಸಿದರೆ ಆಕೆ ಒಳಿಯದೆ ಬಿಡುವಳೇ ಎಂಬಂತೆ,
ಯಾವುದೇ ಸಂಗೀತ ತರಬೇತಿ ಇಲ್ಲದೆ, ಸತತ ಅಭ್ಯಾಸದಿಂದ ಗಾಯನಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಹನಿ ಹನಿ ಸೇರಿದರೆ ಹಳ್ಳ ಎನ್ನುವಂತೆ ಸಣ್ಣ ಪುಟ್ಟ ಅವಕಾಶಗಳಲ್ಲಿ ಭಾಗವಹಿಸಿ, ತೆರೆ ಮರೆಯಲ್ಲಿದ್ದ ಪ್ರತಿಭೆಯೊಂದು ಜನರ ಮೆಚ್ಚುಗೆಗಳಿಸಿ ಸಂಗೀತಕ್ಷೇತ್ರದಲ್ಲಿ ಹೆಸರುಗಳಿಸುತ್ತಿದ್ದಾರೆ.