ಕೊಯ್ಯೂರು :(ಆ.29) ಇಲ್ಲಿಯ ಶ್ರೀ ಕೃಷ್ಣ ಭಜನಾ ಮಂಡಳಿಯಲ್ಲಿ ಸದಸ್ಯರಾಗಿ ನಂತರ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ಭಜನಾ ಮಂಡಳಿಯ ಗೌರವ ಸಲಹೆಗಾರರಾಗಿ, ಊರಿನ ವಿವಿಧ ಸಂಘಟನೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು ಲಾಯಿಲ ವಲಯದ ಭಜನಾ ಪರಿಷತ್ತಿನ ಸಂಯೋಜಕರಾಗಿ ಅಧ್ಯಕ್ಷರಾಗಿ ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿಯಾಗಿ,
ಇದನ್ನೂ ಓದಿ: 🛑ಕಡಬ: ಕುಖ್ಯಾತ ಗರುಡ ಗ್ಯಾಂಗಿನ ಸದಸ್ಯ ಲಾಕ್
ತಾಲೂಕು ಕುಣಿತ ಭಜನೆಯ ತರಬೇತಿದಾರರುಗಳ ಸಂಘ ಸ್ಥಾಪನೆಯ ಕಾರಣಿಕರ್ತರಾಗಿ, ಅದರ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಮಂಜುನಾಥೇಶ್ವರ ಭಜನಾ ಪರಿಷತ್ ಧರ್ಮಸ್ಥಳ ಇದರ ರಾಜ್ಯಾಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಶ್ರೀ ಪಿ ಚಂದ್ರಶೇಖರ ಸಾಲ್ಯಾನ್ ಇವರಿಗೆ ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೇರಲ್ ಕೊಯ್ಯೂರು ಇದರ ವತಿಯಿಂದ ಅಭಿನಂದನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀ ರೋಹಿತಾಕ್ಷ ಉಮಿಯ ದರ್ಕಾಸು. ಕಾರ್ಯದರ್ಶಿ ಓಬಯ್ಯ ನಾಯ್ಕ, ಗೌರವಾಧ್ಯಕ್ಷರಾದ ವಿಶ್ವನಾಥ ಗೌಡ ಬಚ್ಚಿರೆದಡಿ ಊರಿನ ಪ್ರಗತಿಪರ ಕೃಷಿಕರು, ಹಿರಿಯರು, ಭಜನಾ ಮಂಡಳಿಯ ಗೌರವ ಸಲಹೆಗಾರರಾದ ಶ್ರೀಯುತ ಪ್ರಚಂಡಬಾನು ಭಟ್ ಪಾಂಬೆಲು, ಸಲಹೆಗಾರರುಗಳಾದ ಶ್ರೀ ಶೇಖರ ಗೌಡ ಕೋರಿಯಾರು ,
ಶ್ರೀ ಕುಶಾಲಪ್ಪ ನಾಯ್ಕ ಕುಕ್ಕುದಡಿ, ಉಪಾಧ್ಯಕ್ಷರುಗಳಾದ ಶ್ರೀ ಸುಂದರ ಗೌಡ ಕಜೆಕೋಡಿ, ಶ್ರೀ ರಮೇಶ್ ಗೌಡ ಮಾವಿನಕಟ್ಟೆ, ಜೊತೆ ಕಾರ್ಯದರ್ಶಿಗಳಾದ ಶ್ರೀ ಅಶೋಕ ಪೂಜಾರಿ ಕುಂಇಿಮೇರು, ಶ್ರೀ ಜಿತೇಶ್ ಪೂಜಾರಿ ಸಾಂತ್ಯೋಡಿ, ಲೆಕ್ಕ ಪರಿಶೋಧಕರುಗಳಾದ ಶ್ರೀ ಲಿಂಗಪ್ಪ ಗೌಡ ಬೆರ್ಕೆ, ಶ್ರೀ ಹೇಮಂತಗೌಡ ದೆಂತ್ಯಾರು ಬೊಟ್ಟು,
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ದೇಜಪ್ಪಗೌಡ ಬೆಲ್ದೆ, ಮಹಿಳಾ ಭಜನಾ ತಂಡದ ಅಧ್ಯಕ್ಷೆಯಾದ ಶ್ರೀಮತಿ ಪೂರ್ಣಿಮಾ ಹೇಮಂತ ಗೌಡ ಜಂಕಿನಡ್ಕ, ಗೌರವಾಧ್ಯಕ್ಷೆಯಾದ ಶ್ರೀಮತಿ ಮಾಲಿನಿ ಧನಂಜಯ ಆಚಾರ್ಯ ಕೋಡಿಯಲು ಜೊತೆ ಕಾರ್ಯದರ್ಶಿಯಾದ ಶ್ರೀಮತಿ ಹರಿಣಾಕ್ಷಿ ಆದೂರು ಪೆರಾಲ್, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಅಶ್ವಿನಿ ಕಾಂತಪ್ಪ ಗೌಡ ಬರೆಮೇಲು,
ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ವಿನಯ್ ಕೆ, ಉಪಾಧ್ಯಕ್ಷರಾದ ಶ್ರೀ ಯಶವಂತ ಗೌಡ ಪುರ್ಯಳ, ಕಾರ್ಯದರ್ಶಿ ಶ್ರೀ ಮನೋಜ್ ಕಜೆ, ಜೊತೆ ಕಾರ್ಯದರ್ಶಿ ಶ್ರೀ ದಿನೇಶ್ ಜಾನ್ಲಾಪು, ಕೋಶಾಧಿಕಾರಿ ಗೀತಾ ರಾಮಣ್ಣಗೌಡ ಕೋಡಿಯೆಲು, ಕ್ರೀಡಾ ಸಮಿತಿಯ ಸಂಚಾಲಕರಾದ ಶ್ರೀ ದಾಮೋದರ ಗೌಡ ಬೆರ್ಕೆ, ಹರ್ಷ ಗೆಳೆಯರ ಬಳಗದ ಅಧ್ಯಕ್ಷರಾದ ಶ್ರೀ ರಾಮಣ್ಣ ಗೌಡ ಕುಂಞಮೇರು, ಕಾರ್ಯದರ್ಶಿಯಾದ ಭರತ್ ದೆಂಬುಗ ಮತ್ತು ಭಜನಾ ಮಂಡಳಿಗಳ ಎಲ್ಲಾ ಸದಸ್ಯರುಗಳು ಹಾಗೂ ಊರವರು ಪಾಲ್ಗೊಂಡಿದ್ದರು.