ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ವ್ಯತಿಪಾತ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:44 ಗಂಟೆ, ರಾಹು ಕಾಲ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:33, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ ಸಂಜೆ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ 09:27ರ ವರೆಗೆ.
ಮೇಷ ರಾಶಿ : ಕೆಲವು ಸಂಗತಿಗಳ ವಿಚಾರದಲ್ಲಿ ನೀವು ಗೊತ್ತಿಲ್ಲದಂತೆ ಇರುವುದು ಒಳ್ಳೆಯದು. ಅಸೂಯೆಯು ನಿಮ್ಮ ಸೃಜನಾತ್ಮಕತೆಗೆ ತೊಂದರೆ ಕೊಡುವುದು. ಸಾಮರಸ್ಯದ ಕೊರತೆಯಿಂದ ಮನಸ್ಸು ಉದ್ವೇಗಕ್ಕೆ ಒಳಗಾಗಬಹುದು. ನಿಮಗೆ ಇನ್ನಷ್ಟು ವಿದ್ಯಾಭ್ಯಾಸದ ಅವಶ್ಯಕತೆ ಬೇಕು ಎನಿಸಲಿದೆ.
ವೃಷಭ ರಾಶಿ : ನಿಮಲ್ಲಿ ಎಲ್ಲವೂ ಇದ್ದರೂ ಕೊರತೆ ಎಂಬಂತೆ ಇರುವಿರಿ. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಯಾರದೋ ಮೂಲಕ ನಿಮಗೆ ಅಪಾಯದ ಸೂಚನೆ ಬರಬಹುದು. ನಿಮ್ಮ ನಿಷ್ಪಕ್ಷಪಾತ ನಿಲುವು ಕೆಲವರಿಗೆ ಇಷ್ಟವಾಗದೇ ಹೋಗಬಹುದು.
ಮಿಥುನ ರಾಶಿ : ಇಂದು ನಿಮ್ಮ ಮಕ್ಕಳ ವಿಚಾರದಲ್ಲಿ ನಿಮಗೆ ಬೇಸರವಾಗಲಿದೆ. ಪಾಲುದಾರಿಕೆಯಿಂದ ನೀವು ನಿಶ್ಚಿಂತರೆಂಬ ಭಾವ ಬರಬಹುದು. ಸ್ನೇಹಿತರಿಗೆ ಧನಸಹಾಯವನ್ನು ಮಾಡುವಿರಿ.
ಕರ್ಕಾಟಕ ರಾಶಿ : ನಿಮಗೆ ಅವಶ್ಯಕ ವಸ್ತುಗಳ ಬಗ್ಗೆ ಅತಿಯಾದ ಇಚ್ಛೆ ಇರಲಿದೆ. ಅನಾರೋಗ್ಯದಿಂದ ನಿಮ್ಮ ಕಾರ್ಯದಲ್ಲಿ ಲವಲವಿಕೆ ಇಲ್ಲವಾದೀತು. ಪಾಲುದಾರಿಕೆಯು ಕಲಹದಲ್ಲಿ ಕೊನೆಯಾಗುವುದು. ವೃತ್ತಿಪರರು ಕಛೇರಿಯಲ್ಲಿ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುವರು.
ಸಿಂಹ ರಾಶಿ : ಇಂದು ನಿಮ್ಮ ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ತಪ್ಪಿಗೆ ನೀವು ಸಮಜಾಯಿಷಿ ಕೊಟ್ಟು ತಪ್ಪಿಸಿಕೊಳ್ಳುವಿರಿ. ಆಲಸ್ಯದಿಂದ ಇಂದು ಕಛೇರಿಗೆ ವಿಳಂಬವಾಗಿ ಹೋಗುವಿರಿ. ಇದು ವೃತ್ತಿಜೀವನ ಮೊದಲ ಕಪ್ಪುಚುಕ್ಕೆಯಾಗಲಿದೆ.
ಕನ್ಯಾ ರಾಶಿ : ನಿಮ್ಮ ಮೇಲೆ ಕಳ್ಳತನದ ಮಾತುಗಳು ಕೇಳಿಬರಬಹುದು. ಪರಿಚಿತರೇ ನಿಮ್ಮನ್ನು ಅಪರಿಚಿತರಂತೆ ಮಾತನಾಡಬಹುದು. ನಿಮ್ಮ ಶುದ್ಧ ನಡತೆಯು ಎಲ್ಲವನ್ನೂ ಮಾಡಿಸೀತು. ಸಂಗಾತಿಯಿಂದ ಉಡುಗೊರೆಯನ್ನು ಪಡೆಯುವಿರಿ. ಸ್ವಲ್ಪ ಆದಾಯವೂ ನಿಮಗೆ ಸುಖವನ್ನು ಕೊಡುವುದು.
ತುಲಾ ರಾಶಿ : ನೀವು ಪಾಲುದಾರಿಕೆಯನ್ನು ಬಿಡುವ ಬಗ್ಗೆ ಯೋಚಿಸುವಿರಿ. ಕಾರ್ಯಗಳನ್ನು ಮುಂದೂಡಿ ನಿಮಗೆ ಬೇಸರವಾಗಬಹುದು. ನಿಮ್ಮೊಳಗೆ ಹತ್ತಾರು ದ್ವಂದ್ವಗಳು ಇರಲಿವೆ. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಕುಗ್ಗಿಸಬಹುದು.
ವೃಶ್ಚಿಕ ರಾಶಿ : ಇಂದು ನಿಮ್ಮ ಪರಿಶ್ರಮದ ಬಗ್ಗೆ ಹೆಚ್ಚು ವಿಶ್ವಾಸವಿರಲಿದೆ. ಸ್ವಾವಲಂಬಿಯಾಗಲು ಎಲ್ಲ ರೀತಿಯಿಂದ ಪ್ರಯತ್ನಿಸುವಿರಿ. ಎಲ್ಲದಕ್ಕೂ ನೀವು ಇಂದು ಆಕರ್ಷಿತರಾಗುವಿರಿ.
ಧನು ರಾಶಿ : ಇಂದು ನೀವು ಮನೆಯನ್ನು ಸುಂದರವಾಗಿಡಲು ತೊಡಗುವಿರಿ. ವ್ಯವಹಾರದಲ್ಲಿ ನಿಮಗೆ ಇಂದು ನಿಮಗೆ ನಿಂದನೆ ಸಿಗಬಹುದು. ಇಂದು ನಿಮಗೆ ಶ್ರೇಷ್ಠವ್ಯಕ್ತಿಗಳ ಸಹವಾಸ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ.
ಮಕರ ರಾಶಿ : ಇಂದು ನೀವು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಲು ಕಷ್ಟವಾಗುವುದು.ಒತ್ತಡವನ್ನು ಪರಿಹರಿಸಿಕೊಳ್ಳಲು ದೂರದ ಊರಿಗೆ ಹೋಗುವಿರಿ. ವಿವಾಹಕ್ಕೆ ಬೇಕಾದ ತಯಾರಿಯಲ್ಲಿ ನೀವಿರುವಿರಿ. ಸಂಗಾತಿಯ ಜೊತೆ ಪ್ರಯಾಣವನ್ನು ಇಚ್ಛಿಸುವಿರಿ.
ಕುಂಭ ರಾಶಿ : ಇಂದು ನೀವು ಎಲ್ಲವನ್ನೂ ಶಕ್ತಿಮೀರಿ ಕಾರ್ಯದಲ್ಲಿ ಪ್ರಯತ್ನಶೀಲರಾಗುವಿರಿ. ಕಾರಣಾಂತರಗಳಿಂದ ನಿಮ್ಮ ಉದ್ಯೋಗದಲ್ಲಿ ತೊಂದರೆಯಾಗಲಿದೆ. ಹೊಸಬರನ್ನು ಪರಿಚಯಿಸಿಕೊಳ್ಳುವ ಹಂಬಲವು ಇರುವುದು. ನಿಮ್ಮ ಮೇಲೆ ಕೆಟ್ಟ ದೃಷ್ಟಿಯು ಬೀಳುವ ಸಾಧ್ಯತೆ ಇದೆ.
ಮೀನ ರಾಶಿ : ಇಂದು ಮಹಿಳೆಯರಿಗೆ ಬಿಡುವಿಲ್ಲದ ಕಾರ್ಯವು ಇರಲಿದೆ. ಇಂದು ನೀವು ಇನ್ನೊಬ್ಬರ ಬಗ್ಗೆ ಸಲ್ಲದ ಮಾತುಗಳನ್ನು ಆಡುವಿರಿ. ಸಮಯಕ್ಕೆ ಸಿಕ್ಕ ಸ್ಫೂರ್ತಿಯು ನಿಮ್ಮ ಇಂದಿನ ಕೆಲಸವನ್ನು ಚೆನ್ನಾಗಿಸುವುದು. ಸ್ವಂತ ವಾಹನದ ಬಗ್ಗೆ ನಿಮಗೆ ಮೋಹವು ಹೆಚ್ಚಾಗುವುದು. ಯಾರದೋ ಮಾತಿನ ಆಧಾರದ ಮೇಲೆ ನಿಮಗೆ ನಂಬಿಕೆ ಬಾರದು.