Wed. Nov 20th, 2024

Ujire: ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್‌ರವರ ತಂದೆ ಫ್ರಾನ್ಸಿಸ್ ಫೆರ್ನಾಂಡಿಸ್‌ ನಿಧನ

ಉಜಿರೆ :(ಆ.31) ಉಜಿರೆ ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್‌ರವರ ತಂದೆ ಫ್ರಾನ್ಸಿಸ್ ಫೆರ್ನಾಂಡಿಸ್‌(72) ರವರು. ಆ.30ರಂದು ನಿಧನರಾಗಿದ್ದಾರೆ.

ಇದನ್ನೂ ಓದಿ: ⚖Daily Horoscope – ಈ ರಾಶಿಯವರಿಗೆ ಬಹಳ ಆಪ್ತರಾದವರು ದೂರವಾಗಬಹುದು!!

ಮೃತರು ಸುಮಾರು 35 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರಿಗೆ ಅಪಘಾತ ರಹಿತ ಚಾಲಕ ಪ್ರಶಸ್ತಿ ಪುರಸ್ಕಾರವೂ ಲಭಿಸಿತ್ತು.

ಇವರು ನಿವೃತ್ತಿಯ ಬಳಿಕವೂ ಕೆ ಎಸ್ ಆರ್ ಟಿ ಸಿ ಚಾಲಕರಿಗೆ ತರಬೇತಿ ನೀಡುತ್ತಿದ್ದರು. ಇವರು ಉಜಿರೆ ಸಂತ ಅಂತೋನಿ ಚರ್ಚ್‌ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ, ಚರ್ಚ್‌ ನ ಒಂದು ವಾಳೆಯ ಗುರಿಕಾರರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು.

ಇವರ ಪತ್ನಿ ಉಜಿರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಎಮಿಲ್ಡಾ ಫೆರ್ನಾಂಡಿಸ್‌, ಪುತ್ರರಾದ ಉಜಿರೆ ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್‌, ಪ್ರಶಾಂತ್ ಫೆರ್ನಾಂಡಿಸ್‌, ಉಜಿರೆ ಎಸ್ ಎ ಮೆಡಿಕಲ್ ಮಾಲಕ ಪ್ರಕಾಶ್ ಫೆರ್ನಾಂಡಿಸ್‌ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *