ಕಾರ್ಕಳ:(ಆ.31) ಕಾರಿಗೆ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿ ಹಣ ನೀಡದೆ ವಾಹನದೊಂದಿಗೆ ಪರಾರಿಯಾದ ಘಟನೆ ಕಾರ್ಕಳ ಜಂಕ್ಷನ್ ಬಳಿಯ ಪೆಟ್ರೋಲ್ ಬಂಕ್ ವೊಂದರಲ್ಲಿ ಬೆಳಗ್ಗಿನ ಜಾವದಲ್ಲಿ ನಡೆದಿದೆ.
ಇದನ್ನೂ ಓದಿ; 🛑ಸುಳ್ಯ : ಯುವತಿ ನಾಪತ್ತೆ ಕೇಸ್..!!!
ಕಾರ್ಕಳದ ‘ಅನು ಪ್ಯೂಯೆಲ್ ಪಂಪ್’ ಎಂಆರ್ಪಿಎಲ್ ದಿನದ 24 ಘಂಟೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ದುರುಪಯೋಗ ಮಾಡಿದ ವ್ಯಕ್ತಿಯೊಬ್ಬ ಆಗಸ್ಟ್ 29ರ ಬೆಳಗ್ಗಿನ ಜಾವ 2.50ಕ್ಕೆ ಬಿಳಿ ಬಣ್ಣದ ಕಾರಿನಲ್ಲಿ ಬಂದು ಪುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸುವಂತೆ ಹೇಳಿದ್ದಾನೆ.
ಗ್ರಾಹಕನ ಸೂಚನೆಯಂತೆ 4253.88 ಮೊತ್ತದಷ್ಟು ಟ್ಯಾಂಕ್ ಪೂರ್ತಿ ಪೆಟ್ರೋಲ್ ತುಂಬಿಸಿ, ಟ್ಯಾಂಕ್ ನಿಂದ ಪೈಪ್ ಬೇರ್ಪಡಿಸುತ್ತಿದ್ದಾಗ ಗ್ರಾಹಕ ತನ್ನ ವಾಹನವನ್ನು ಚಲಾಯಿಸಿ ಹೊರಟು ಹೋಗಿದ್ದಾನೆ. ವಾಹನವು ಬೈಲೂರು-ಉಡುಪಿ ರಸ್ತೆಯಲ್ಲಿ ಹೋಗಿದ್ದು.
ವಂಚಕ ಗ್ರಾಹಕ ತುಳುವಿನಲ್ಲಿ ಮಾತನಾಡುತ್ತಿದ್ದನು. ಗ್ಯಾರೇಜ್ ಎಲ್ಲಿಯಾದರೂ ಓಪನ್ ಇದೆಯಾ ಅಂತ ಮೊದಲಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿಯಲ್ಲಿ ವಿಚಾರಿಸಿ ನಂತರ ಮಂಕುಬೂದಿ ಎರಚಿದ್ದಾನೆ ಎಂದು ತಿಳಿದುಬಂದಿದೆ.