ಉಜಿರೆ: (ಸೆ.1) ವಿಶ್ವ ಹಿಂದೂ ಪರಿಷದ್ , ಬೆಳ್ತಂಗಡಿ ಪ್ರಖಂಡ ಇದರ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ ಸಂಭ್ರಮ ಪ್ರಯುಕ್ತ ಬೃಹತ್ ಹಿಂದೂ ಸಮಾವೇಶವು ಉಜಿರೆಯ ಜನಾರ್ದನ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ಜರುಗಿತು.
ಸಭಾ ಕಾರ್ಯಕ್ರಮಕ್ಕೂ ಮೊದಲು , ಎಸ್.ಡಿ.ಎಮ್ ಕಾಲೇಜಿನ ಮೈದಾನದಿಂದ ಉಜಿರೆಯ ಬೀದಿಯಲ್ಲಿ ಕುಣಿತ ಭಜನೆ ಮೂಲಕ ಶ್ರದ್ದಾ, ಭಕ್ತಿಯ ಅದ್ದೂರಿ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮವನ್ನು ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ಉದ್ಘಾಟಿಸಿದರು.
ಬಳಿಕ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕರ್ನಾಟಕ ದಕ್ಷಿಣ ಪ್ರಾಂತದ , ವಿಶ್ವ ಹಿಂದೂ ಪರಿಷದ್ ಪ್ರಾಂತ ಉಪಾಧ್ಯಕ್ಷ ಟಿ.ಎ.ಪಿ, ಶೆಣೈ , ವಿಶ್ವ ಹಿಂದೂ ಪರಿಷದ್ ಇರೋದ್ರಿಂದ ಹಿಂದೂಗಳಿಗೆ ಈಗ ಸಮಾಜದಲ್ಲಿ ಗೌರವ ಸಿಗುತ್ತಿದೆ ಅಂತ ಹೇಳಿದರು. ಸಮಾಜದಲ್ಲಿ ಸಮಾನತೆ ತರುವ ಕೆಲಸವನ್ನು ವಿಶ್ವ ಹಿಂದೂ ಪರಿಷದ್ ಮಾಡಿದೆ.
ಈ ಹಿಂದೆ ಹಿಂದೂಗಳ ಮೇಲೆ ದಾಳಿ, ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿದ್ದ ದಾಳಿಯನ್ನು ನಿಗ್ರಹಿಸಿದ್ದು ವಿಶ್ವ ಹಿಂದೂ ಪರಿಷದ್ ಎಂದು ಅವರು ಹೇಳಿದರು. ರಾಮ ಮಂದಿರದ ನಿರ್ಮಾಣಕ್ಕೆ ತಾರ್ಕಿಕ ಸ್ಪರ್ಶ ಕೊಟ್ಟಿರುವಂತಹದ್ದು ಕೂಡ ವಿಶ್ವ ಹಿಂದೂ ಪರಿಷದ್ ಎಂದು ಹೇಳಿದ್ರು. ಹಿಂದೂ ಸಮಾಜ ಮೈ ಕೊಡವಿ ನಿಲ್ಲಬೇಕಾದಂಥ ಸ್ಥಿತಿ ನಿರ್ಮಾಣವಾಗಿದೆ. ಹಿಂದೂ ಎನ್ನುವ ಹೆಸರಿನಲ್ಲಿ ಸಮಾಜ ಕಟ್ಟಬೇಕು. ನಾವೂ ಕಾರ್ಯಕರ್ತರು ಬಲಿದಾನಕ್ಕೆ ತಯಾರು ಇದ್ದೇವೆ ಆದ್ರೆ ನಮ್ಮ ಹಿಂದೂ ಸಂಘಟನೆ ಜಾತಿಯ ಹೆಸರಲ್ಲಿ ವಿಘಟನೆ ಆಗಬಾರದು ಎಂದು ಅವರು ಕರೆ ಕೊಟ್ಟರು.
ಮುಖ್ಯ ಅತಿಥಿಗಳಾಗಿ, ಬೆನಕ ಹೆಲ್ತ್ ಸೆಂಟರ್ ಉಜಿರೆಯ ಮುಖ್ಯಸ್ಥರಾದ ಡಾ| ಭಾರತಿ ಜಿ.ಕೆ, ವಿ.ಹಿಂ.ಪ. ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಎಕ್ಸೆಲ್ ಕಾಲೇಜು ಗುರುವಾಯನಕೆರೆಯ ಆಡಳಿತ ಹಾಗೂ ನಿರ್ದೇಶಕ ಸುಮಂತ್ ಕುಮಾರ್ ಜೈನ್, ನಾರಾಯಣ ಗೌಡ ಕೊಳಂಬೆ ಪಂಚಶ್ರೀ ಸೋಮಂತ್ತಡ್ಕ ಭಾಗವಹಿಸಿದ್ದರು. ವಿ.ಹಿಂ.ಪ ಮಂಗಳೂರು ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ವಿವಿಧ ಸಂಘಟನೆಗಳ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.
ವಿ.ಹಿಂ.ಪ ಷಷ್ಠಿ ಪೂರ್ತಿ ಉತ್ಸವ ಸಮಿತಿ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿಗಾರ್, ಸಂಚಾಲಕ ಸಂಪತ್ ಬಿ. ಸುವರ್ಣ, ಸಹ ಸಂಚಾಲಕ ಬಾಲಕೃಷ್ಣ ಶೆಟ್ಟಿ ಉಜಿರೆ, ವಿ.ಹಿಂ.ಪ. ಅಧ್ಯಕ್ಷ ದಿನೇಶ್ ಚಾರ್ಮಾಡಿ, ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಬಜರಂಗದಳ ಸಂಯೋಜಕ ಸಂತೋಷ್ ಅತ್ತಾಜೆ, ಸಹ ಸಂಯೋಜಕ ಸತೀಶ್ ಮರಕ್ಕಡ, ಸತ್ಸಂಗ ಪ್ರಮುಖ್ ಅಶೋಕ್ ಕಳೆಂಜ,
ಸೇವಾ ಪ್ರಮುಖ್ ವಿನೋದ್ ಮದ್ದಡ್ಕ, ವಿದ್ಯಾರ್ಥಿ ಪ್ರಮುಖ್ ಅಖಿಲ್ ರೆಖ್ಯ, ವಿ.ಹಿಂ.ಪ ಉಪಾಧ್ಯಕ್ಷ ಸತೀಶ್ ನೆರಿಯ, ಗೋರಕ್ಷಾ ಪ್ರಮುಖ್ ವಿ.ಹಿಂ.ಪ ರಮೇಶ್ ಧರ್ಮಸ್ಥಳ, ಗೋರಕ್ಷಕ್ ಪ್ರಮುಖ್ ಬಜರಂಗದಳ ಅನಂತ್ ಉಜಿರೆ, ಸಹ ಸಂಯೋಜಕ್ ಪ್ರಶಾಂತ್ ಕೊಕ್ಕಡ, ಪ್ರಚಾರ ಮತ್ತು ಪ್ರಸಾರ ನಾಗೇಶ್ ಕಲ್ಮಂಜ, ಸುರಕ್ಷ ಪ್ರಮುಖ್ ರಾಜೇಶ್ ನಿಡ್ಲೆ, ಮಾತೃಶಕ್ತಿ ಪ್ರಮುಖ್ ಶ್ರೀಮತಿ ವಿದ್ಯಾ ದುರ್ಗಾವಾಹಿನಿ ಸಂಯೋಜಕ ಕು. ಶ್ವೇತಾ ಬೆಳಾಲ್ ಸಹಕರಿಸಿದರು. ಶಿವಶಂಖರ್ ಗೇರುಕಟ್ಟೆ ವಂದೇಮಾತರಂ ಹಾಡಿದರು. ಸಂಪತ್ ಸುವರ್ಣ ಸ್ವಾಗತಿಸಿದರು. ಮೋಹನ್ ಬೆಳ್ತಂಗಡಿ ಧನ್ಯವಾದವಿತ್ತರು.