Wed. Nov 20th, 2024

Mysore: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2024 – ದಸರಾ ಗಜಪಡೆಯ ಕ್ಯಾ.ಅಭಿಮನ್ಯುವಿಗೆ ಇಂದಿನಿಂದ ಭಾರ ಹೊರಿಸಿ ತಾಲೀಮು ಆರಂಭ

ಮೈಸೂರು:(ಸೆ.1) ಮೊದಲ ದಿನ 500 ಕೆಜಿಗೂ ಹೆಚ್ಚಿನ ಭಾರ ಹೊರಿಸಿ ತಾಲೀಮು ಆರಂಭಿಸಲಾಗಿದೆ. ಅಭಿಮನ್ಯುವಿನ ಹೆಗಲ ಮೇಲೆ ಗಾದಿ, ನಮ್ದ, ಕಬ್ಬಿಣದ ತೊಟ್ಟಿಲು ಕಟ್ಟಿ, ಸುಮಾರು 520 ಕೆಜಿಯಷ್ಟು ಮರಳಿ‌ನ ಮೂಟೆಗಳನ್ನು ಇರಿಸಿ ಭಾರ ಹೊರಿಸುವ ತಾಲೀಮಿಗೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ: 🛑ಕುವೆಟ್ಟು: ಸಬರಬೈಲ್ ನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಯತ್ನ

ಅರಮನೆಯ ಆವರಣದಲ್ಲಿ ಸಂಪ್ರದಾಯಬದ್ಧವಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯುವಿಗೆ ಭಾರ ಹೊತ್ತು ಸಾಗುವ ತಾಲೀಮಿಗೆ ಚಾಲನೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.

ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಸ್ಥಾನದ ಮುಂಭಾಗ ಅಭಿಮನ್ಯುವಿನ ಜೊತೆಗೆ ಎಡಬಲದಲ್ಲಿ ಕುಮ್ಕಿ ಆನೆಗಳಾದ ಲಕ್ಷ್ಮಿ ಮತ್ತು ವರಲಕ್ಷ್ಮಿಯನ್ನು ನಿಲ್ಲಿಸಿ ಸಂಪ್ರದಾಯಬದ್ಧವಾಗಿ ವಿಶೇಷ ಪೂಜೆ ನೆರವೇರಿಕೆ ಮಾಡಲಾಗಿದೆ.
ಬಳಿಕ ಅಭಿಮನ್ಯುವಿಗೆ ಗಾದಿ, ನಮ್ದ ಕಟ್ಟಿ, ಕಬ್ಬಿಣದ ತೊಟ್ಟಿಲಿನಲ್ಲಿ ಮರಳಿ‌ನ ಮೂಟೆಗಳನ್ನು ಇರಿಸಿ ಭಾರ ಹೊತ್ತು ಸಾಗುವ ತಾಲಿಮು ಆರಂಭ. ಮೊದಲ ದಿನ ಸುಮಾರು 520 ಕೆಜಿಯಷ್ಟು ಭಾರ ಹೊತ್ತು ಸಾಗಿದ ಅಭಿಮನ್ಯು. ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಭಾರವನ್ನು ಹೆಚ್ಚಿಸಲಾಗುತ್ತದೆ.


ಸುಮಾರು ಒಂದುವರೆ ಗಂಟೆ ಕಾಲ ಅಭಿಮನ್ಯುವಿಗೆ ಗಾದಿ ಕಟ್ಟಿದ ಮಾವುತರು ಮತ್ತು ಕಾವಾಡಿಗಳು. ಡಿಸಿಎಫ್ ಡಾ ಐ ಬಿ ಪ್ರಭುಗೌಡ ಸಮ್ಮುಖದಲ್ಲಿ ನಡೆದ ಗಜಪಡೆಯ ತಾಲೀಮು‌. ಮುಂದಿನ ದಿನಗಳಲ್ಲಿ ಅಭಿಮನ್ಯುವಿನ ಜೊತೆಗೆ ಇತರ ಆನೆಗಳಿಗೂ ಭಾರ ಹೊರಿಸಿ ತಾಲೀಮು ನಡೆಸಲಾಗುತ್ತದೆ.


ಜಂಬೂಸವಾರಿ ಮೆರವಣಿಗೆ ವೇಳೆಗೆ 750 ಕೆ ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸುಲಲಿತವಾಗಿ ಸಾಗಲು ಅಭಿಮನ್ಯುವನ್ನು ಅಣಿಗೊಳಿಸಲಾಗುತ್ತದೆ.

Leave a Reply

Your email address will not be published. Required fields are marked *