Wed. Nov 20th, 2024

Padmunja: ಸಹಕಾರ ಸಂಘದ ಮಹಾಸಭೆ- ಸಾಧಕರಿಗೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ – ರೂ.360.99 ಕೋಟಿ ವ್ಯವಹಾರ, ರೂ.1.81 ಕೋಟಿ ನಿವ್ವಳ ಲಾಭ, ಶೇ.13 ಡಿವಿಡೆಂಡ್ ಘೋಷಣೆ

ಪದ್ಮುಂಜ :(ಸೆ.1) ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆ, ಸಾಧಕರಿಗೆ,

ಇದನ್ನೂ ಓದಿ: 🔴Metro Lip Lock Viral video: ಮೆಟ್ರೋದಲ್ಲಿ ಪ್ರೇಮಿಗಳ ಲಿಪ್ ಲಾಕ್ ರೊಮ್ಯಾನ್ಸ್ – ವಿಡಿಯೋ ವೈರಲ್

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಎಸ್, ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ ಸೆ 1ರoದು ಸಂಘದ ಸಭಾಭವನ ದಲ್ಲಿ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ಇವರ ಅಧ್ಯಕ್ಷತೆಯಲ್ಲಿ ಜರಗಿತು.


ಸಂಘವು 2023-24 ನೇ ಸಾಲಿನಲ್ಲಿ ರೂ.360.99 ಕೋಟಿ ವ್ಯವಹಾರ, ರೂ.1.81 ಕೋಟಿ ನಿವ್ವಳ ಲಾಭ, ಶೇ.13 ಡಿವಿಡೆಂಡ್ ಘೋಷಿಸಲಾಯಿತು.

ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ ಸ್ವಾಗತಿಸಿ, ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ಅಂಕಿತಾ ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಿದರು.

ಉಪಾಧ್ಯಕ್ಷರಾದ ಅಶೋಕ ಗೌಡ, ನಿರ್ದೇಶಕರಾದ ಉದಯ ಬಿ.ಕೆ, ಉದಯ ಭಟ್, ನಾರಾಯಣ ಗೌಡ, ರಾಜೀವ ರೈ, ವಿನಯಶ್ರೀ, ಶೀಲಾವತಿ, ದಿನೇಶ್ ನಾಯ್ಕ್, ಪಿಜಿನ ಮುಗೇರ, ಬ್ಯಾಂಕ್ ಪ್ರತಿನಿಧಿ ಸುದರ್ಶನ್, ಸಿಬ್ಬಂದಿ ವರ್ಗ, ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *