ಉಜಿರೆ:(ಸೆ.2) ಜನಾರ್ದನ ದೇವಸ್ಥಾನದ ರಥಬೀದಿ ಸಮೀಪದ ನಿವಾಸಿಯಾಗಿರುವ ಸುಪ್ರಭಾ ಪಿ (40 ವ) ಇವರು ಸೆ.1ರಂದು ಮನೆಯಲ್ಲಿ ಜಾರಿ ಬಿದ್ದು ತಲೆಗೆ ಬಲವಾದ ಏಟು ಬಿದ್ದ ಕಾರಣ,
ಇದನ್ನೂ ಓದಿ; 🔵KPSC Exam: KPSC ಪರೀಕ್ಷೆಯಲ್ಲಿ ಕನ್ನಡ ಅನುವಾದದಲ್ಲಿ ಎಡವಟ್ಟು ಹಿನ್ನೆಲೆ
ಅವರನ್ನು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆ.2ರಂದು ನಿಧನರಾಗಿದ್ದಾರೆ.
ಮೃತರು ಚಾರ್ಮಾಡಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಪತಿ ರವಿರಾಜ್ ಶೆಟ್ಟಿ, ಮಕ್ಕಳಾದ ವೇದಾಂತ್, ಚರಿತ್ ಇವರನ್ನು ಅಗಲಿದ್ದಾರೆ.