Wed. Nov 20th, 2024

Aries To Pisces: ಮೇಷದಿಂದ ಮೀನವರೆಗೆ- ಇಂದು ಈ ರಾಶಿಯವರಿಗೆ ಅದೃಷ್ಟದ ದಿನ

ಮೇಷ ರಾಶಿ : ಏಕಕಾಲಕ್ಕೆ ಒತ್ತಡವಾದಂತೆ ಅನ್ನಿಸುವುದು. ಇಂದು ನಿಮ್ಮಲ್ಲಿ ಹೋರಾಟದ ಸ್ವಭಾವವು ಎದ್ದು ತೋರುವುದು. ಎಲ್ಲದಕ್ಕೂ ವಿರೋಧ ಮಾಡುವಿರಿ. ಖುಷಿಯಲ್ಲಿ ಕೊಟ್ಟ ಮಾತಿನಿಂದ ನಿಮಗೆ ಇಂದು ತೊಂದರೆಯಾದೀತು.

ವೃಷಭ ರಾಶಿ : ನೀವು ಅದೃಷ್ಟವನ್ನು ನಿರೀಕ್ಷಿತ ಸಮಯವನ್ನು ಕಳೆಯುವಿರಿ. ಯಾರನ್ನಾದರೂ ಮೆಚ್ಚಿಸಲು ನಿಮ್ಮ ಕೆಲಸವನ್ನು ಪಕ್ಕಕ್ಕಿರಿಸುವಿರಿ. ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳಲು ಸತತ ಪ್ರಯತ್ನ ಮಾಡುವಿರಿ.

ಮಿಥುನ ರಾಶಿ : ಇಂದು ನೀವು ಬಹಳ ಕಷ್ಟಪಟ್ಟು ಕೆಲಸ ಮಾಡಲಿದ್ದೀರಿ. ತಾತ್ಸಾರ ಮಾಡದೇ ಕ್ರಮಬದ್ಧವಾಗಿ ಶತ್ರುಗಳನ್ನು ಗೆಲ್ಲಿರಿ. ಕ್ರೀಡಾಪಟುಗಳು ತಮ್ಮ ಅವಿರತಶ್ರಮವನ್ನು ನಡೆಸಲಿದ್ದಾರೆ. ತಾಯಿಯಿಂದ ನಿಮಗೆ ಧನವು ಲಾಭವಾಗಬಹುದು.

ಕರ್ಕಾಟಕ ರಾಶಿ : ಇಂದು ವಿದ್ಯಾಭ್ಯಾಸದಲ್ಲಿ ಕಾರ್ಯಕ್ಷಮತೆ ಗಮನಾರ್ಹವಾಗಿ ಸುಧಾರಣೆ ಕಾಣಲಿದೆ. ನಿಮ್ಮ ಅಂದಿನ ಸ್ಥಿತಿಯನ್ನು ನೆನೆಸಿಕೊಂಡು ಹೆಮ್ಮೆಪಡಲಿದ್ದೀರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಹವಣಿಸುವಿರಿ. ಸಂಗಾತಿಯ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಇದರ ಪ್ರಭಾವವು ಕಛೇರಿಯ ಕೆಲಸದಲ್ಲಿಯೂ ಕಾಣಬಹುದು.

ಸಿಂಹ ರಾಶಿ : ಇಂದು ನೀವು ಸಹೋದ್ಯೋಗಿಗಳ ಜೊತೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿದೇಶದಲ್ಲಿ ಕೆಲಸಮಾಡಲು ನಿಮಗೆ ಅನೇಕ ಅವಕಾಶಗಳು ಸಿಗಬಹುದು. ಮಧ್ಯವರ್ತಿಗಳ ಮೂಲಕ‌ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ.

ಕನ್ಯಾ ರಾಶಿ : ಇಂದು ನಿಮ್ಮ ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯದಿಂದ ದ್ವೇಷವು ಉಂಟಾಗಬಹುದು. ಇಂದಿನ ನಿಮ್ಮ ಕೆಲಸವು ಶಿಸ್ತಿನಿಂದ ಇದ್ದರೂ ನಿಮ್ಮ ಜೊತೆಗಾರರು ಅದನ್ನು ಮೂದಲಿಸಲಿದ್ದಾರೆ. ನಿಮ್ಮ ಸಲಹೆಗಳನ್ನು ನಿಮ್ಮವರು ತೆಗೆದುಕೊಳ್ಳದೇ ಇರುವುದು ನಿಮಗೆ ಸಿಟ್ಟು, ಬೇಸರವನ್ನೂ ಉಂಟುಮಾಡಬಹುದು.

ತುಲಾ ರಾಶಿ : ಭೂಮಿಯ ವ್ಯವಹಾರವನ್ನು ಸದ್ಯಕ್ಕೆ ನಿಲ್ಲಿಸಿ, ಕೆಲವು ದಿನಗಳ ಅನಂತರ ನಡೆಸುವುದು ಉತ್ತಮ. ಹೊಸತನವನ್ನು ಇಷ್ಟಪಟ್ಟು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ನಿಮ್ಮದಾದ ಆತ್ಮೀಯ ವೃತ್ತವನ್ನು ನಿರ್ಮಿಸಿಕೊಳ್ಳುವಿರಿ.

ವೃಶ್ಚಿಕ ರಾಶಿ : ಇಂದು ಯಾರ ಬಳಿಯಾದರೂ ಮಾತನಾಡಲು ಸಂಕೋಚ ಇರುವುದು. ಚಿಂತೆಯು ನಿಮ್ಮ ಮಾನಸಿಕ ಸ್ಥಿತಿಯನ್ನು ದುರ್ಬಲ ಮಾಡುವುದು. ಜೋಪಾನವಾಗಿ ಇರಿಸಿಕೊಂಡಿರುವ ನಿಮ್ಮ ಅಮೂಲ್ಯವಾದ ವಸ್ತುಗಳು ಕಣ್ಮರೆಯಾಗಿದ್ದು, ಇಂದು ತಿಳಿಯಲಿದೆ. ಆಸ್ತಿಯ ವಿಚಾರಕ್ಕೆ ಸಹೋದರರ ನಡುವೆ ವೈಮನಸ್ಯ ಉಂಟಾಗಬಹುದು.

ಧನು ರಾಶಿ : ಇಂದು ಸಜ್ಜನರ ಸಹವಾಸದಿಂದ ಸಜ್ಜನರೆನಿಸಿಕೊಳ್ಳುವಿರಿ. ಸ್ವಾಭಿಮಾನಕ್ಕೆ ಧಕ್ಕೆ ಬಂದು ಮನಸ್ಸಿನಲ್ಲಿ ಬಹಳ ಹಿಂಸೆಯನ್ನು ಅನುಭವಿಸಬಹುದು.

ಮಕರ ರಾಶಿ : ಇಂದು ಅಪರಿಚಿತರೂ ಆಪ್ತರಂತೆ ವರ್ತಿಸಬಹುದು. ನಿಮ್ಮ ಎಲ್ಲ ಗೌಪ್ಯತೆಯನ್ನು ಹೇಳುವಿರಿ. ಹಗುರವಾದ ಮಾತುಗಳು ನಿಮಗೆ ಅಪಮಾನವನ್ನು ಮಾಡುವುದು. ಯಾರನ್ನೂ ಹಗುರವಾಗಿ ಕಾಣುವುದು ಬೇಡ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಶ್ಯಕತೆ ಇಲ್ಲ.

ಕುಂಭ ರಾಶಿ : ಇಂದು ನಿಮ್ಮ ಮಾತುಗಳು ಸಂಬಂಧದಲ್ಲಿ ಒಡಕು ತರುವಂತಹವು ಆಗಿರುತ್ತವೆ. ಒತ್ತಡದಿಂದ ನಿಮಗೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಇಲ್ಲವಾದರೆ ಮಾಡುವ ಕೆಲಸವು ಅಶಿಸ್ತಿನಿಂದ ಇರಬಹುದು. ನಿರೀಕ್ಷೆ ಮೀರಿದ ಅನುಕೂಲತೆಗಳು ಇದ್ದರೂ ಸಂತೃಪ್ತಿಯು ಇರಲಾರದು.

ಮೀನ ರಾಶಿ : ನಿಮಗೆ ಆಗದವರ ಬಗ್ಗೆ ಕಿವಿಚುಚ್ಚುವುದು ಬೇಡ. ಹಣದ ಕೊರತೆಯಿಂದ ಸಾಲವನ್ನು ಮಾಡುವ ಸಾಧ್ಯತೆಯಿದೆ. ವಾಹನ ಖರೀದಿಯ ವಿಚಾರದಲ್ಲಿ ಗೊಂದಲಗಳು ಬರಬಹುದು. ಸಂತೋಷವನ್ನು ಅನುಭವಿಸುವ ತಾಳ್ಮೆ ಇರದು. ಹಣಕಾಸಿನ ವ್ಯವಹಾರದಲ್ಲಿ ನಿಮಗೆ ಹೆಚ್ಚು ಸಂದೇಹಗಳು ಬರಬಹುದು.

Leave a Reply

Your email address will not be published. Required fields are marked *