ಮಂಗಳೂರು:(ಜು.10) ಪೋಲಿಸರಿಗೆ ಸಮಸ್ಯೆಯಾಗಿದ್ದ ಚಡ್ಡಿಗ್ಯಾಂಗ್ ನ ಸದಸ್ಯರು, ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿ, ಎಎಸ್ ಐ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಪೊಲೀಸರು ಶೂಟ್ ಔಟ್ ಮಾಡಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ನಿನ್ನೆ ಸಕಲೇಶಪುರದಿಂದ ಚಡ್ಡಿಗ್ಯಾಂಗ್ ಅನ್ನು ಬಂಧಿಸಿ, ಮುಲ್ಕಿ ಸಮೀಪ ಮಹಜರಿಗೆ ತೆರಳುತ್ತಿರುವಾಗ, ಚಡ್ಡಿಗ್ಯಾಂಗ್ ಎಎಸ್ ಐ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ ಪೊಲೀಸರು ಆರೋಪಿಗಳಾದ ರಾಜು ಸಿಂಗ್ವಾನಿಯಾ ಮತ್ತು ಬಾಲಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ಮಧ್ಯಪ್ರದೇಶದ ಗುಣಾ ಜಿಲ್ಲೆಯ ರಾಜು ಸಿಂಗ್ವಾನಿಯ (24 ವ), ಭೂಪಾಲ್ ನ ಮಯೂರ್ (30 ವ), ಬಾಲಿ (22 ವ), ಗುಣಾ ಜಿಲ್ಲೆಯ ವಿಕ್ಕಿ (21 ವ) ನಾಲ್ವರು ಬಂಧಿತ ಆರೋಪಿಗಳು.