Wed. Nov 20th, 2024

Belthangadi: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಬೆಳ್ತಂಗಡಿ:(ಸೆ.5) ನಡ ಗ್ರಾಮದ ಮಂಜೊಟ್ಟಿ ಪಣಿಕ್ಕಲ ನಿವಾಸಿಯಾದ ಧರ್ಣಪ್ಪ ಪೂಜಾರಿ(55 ವ) ಇವರು ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಇದನ್ನೂ ಓದಿ: 🟠ಉಜಿರೆ: (ಸೆ.6) ಉಜಿರೆ ಎಸ್.ಡಿ.ಎಂ ಮಲ್ಟಿ – ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ

ನಡ ಗ್ರಾಮದ ಪಣಿಕ್ಕಲ ನಿವಾಸಿ ಲಲಿತ ರವರ ದೂರಿನಂತೆ ಲಲಿತ ರವರ ಪತಿ ಧರ್ಣಪ್ಪ ಪೂಜಾರಿ ರವರು ಮದುವೆಯಾಗಿ 28 ವರ್ಷಗಳಾಗಿದ್ದು, ಮಕ್ಕಳಾಗಿರುವುದಿಲ್ಲ.

ಇದೇ ವಿಚಾರದಲ್ಲಿ ಲಲಿತ ಪತಿ ಧರ್ಣಪ್ಪ ಪೂಜಾರಿ ರವರು ಮಾನಸಿಕವಾಗಿ ಮನನೊಂದು ಮಾನಸಿಕ ಖಾಯಿಲೆಗೆ ತುತ್ತಾಗಿದ್ದರು. ಸುಮಾರು 10 ವರ್ಷಗಳಿಂದ ಮಾನಸಿಕ ತಜ್ಞರಿಂದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು.

ಸುಮಾರು 5 ತಿಂಗಳಿನಿಂದ ಯಾವುದೇ ಕೆಲಸಕ್ಕೂ ಹೋಗದೆ ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ. ಸೆ.04 ರಂದು ಲಲಿತ ರವರು ಸಂಜೆ 4.30 ಗಂಟೆಗೆ ಮಂಜೊಟ್ಟಿ ಹಾಲಿನ ಡಿಪೊಗೆ ಹೋಗಿದ್ದು, ಸಂಜೆ 5.30 ಗಂಟೆಗೆ ಮನೆಗೆ ವಾಪಾಸ್ಸು ಬಂದು ನೋಡಿದಾಗ ಲಲಿತ ಗಂಡ ಮನೆಯ ಛಾವಡಿಗೆ ಹಾಕಿದ ಮರದ ಅಡ್ಡಕ್ಕೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.

ಕೂಡಲೇ ನೆರೆಮನೆಯವರ ಸಹಾಯದಿಂದ ಅವರನ್ನು ಇಳಿಸಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *