Wed. Nov 20th, 2024

Delhi: ನಡು ಬೀದಿಯಲ್ಲಿ ಬಟ್ಟೆ ಹರಿದುಕೊಂಡು ಹೊಡೆದಾಡಿದ ಮಹಿಳೆಯರು – ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ!!

Delhi:(ಸೆ.5) ಕುಟುಂಬ ಕಲಹವನ್ನು ಬೀದಿಗೆ ತಂದು ರಂಪ ಮಾಡಿಕೊಂಡು ಇಬ್ಬರು ಮಹಿಳೆಯರು ಬಟ್ಟೆ ಹರಿಯುವ ರೀತಿಯಲ್ಲಿ ಹೊಡೆದಾಡಿಕೊಂಡ ಪ್ರಸಂಗ ನವದೆಹಲಿಯಲ್ಲಿ ನಡೆದಿದೆ.

ಇದನ್ನೂ ಓದಿ: 🟠ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ನೈಮಂಡಿ ಕೊತ್ವಾಲಿ ಪ್ರದೇಶದ ಅಲ್ಮಾಸ್‌ಪುರದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ರಸ್ತೆಯಲ್ಲಿ ತೀವ್ರ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ರೊಚ್ಚಿಗೆದ್ದ ಎರಡೂ ಕಡೆಯ ಮಹಿಳೆಯರು ರಸ್ತೆಯಲ್ಲೇ ಬಟ್ಟೆ ಹರಿದುಕೊಂಡು ಹೊಡೆದಾಡಿದ್ದಾರೆ.

ಗಲಾಟೆ ಮಾಡುತ್ತಾ, ಹೊಡೆದಾಡಿಕೊಳ್ಳುತ್ತಾ ಇಬ್ಬರು ಬಟ್ಟೆಹರಿದುಕೊಳ್ಳುತ್ತಿದ್ದಂತೆ ದಾರಿಹೋಕರು ಆ ಮಹಿಳೆಯರ ದೇಹ ಮುಚ್ಚಲು ತಮ್ಮ ಟವೆಲ್ ನೀಡಿದರು. ಮಾಹಿತಿ ತಿಳಿದ ಬಳಿಕ ಪೊಲೀಸರು ಆಗಮಿಸಿ ಎರಡೂ ಕಡೆಯ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಎರಡೂ ಕಡೆಯವರ ದೂರಿನ ಆಧಾರದ ಮೇಲೆ ಪೊಲೀಸರು ಪರಸ್ಪರ ದೂರು ದಾಖಲಿಸಿಕೊಂಡಿದ್ದಾರೆ.

ಈ ಎರಡೂ ಕುಟುಂಬದ ಮನೆಗಳು ಹತ್ತಿರದಲ್ಲಿವೆ. ಯಾವುದೋ ವಿಚಾರಕ್ಕೆ ವಾಗ್ವಾದ ನಡೆಸಿದ್ದರು. ಇಬ್ಬರ ನಡುವೆ ಜಗಳ ಆರಂಭವಾದಾಗ ಅತ್ತಿಗೆ ಮತ್ತು ಸಹೋದರ ಆಗಮಿಸಿದರು. ಅತ್ತ ಕಡೆಯ ಮಹಿಳೆಯರೂ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಎರಡೂ ಕಡೆಯ ಮಹಿಳೆಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಮಹಿಳೆಯರು ಪರಸ್ಪರ ಬಟ್ಟೆ ಹರಿದುಕೊಂಡರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *