Wed. Nov 20th, 2024

Assault: ತಿಂಡಿ ಕೊಡುವ ನೆಪದಲ್ಲಿ ಬಾಲಕಿಯ ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದ ವೃದ್ಧ – ವಿಕೃತಕಾಮಿ ಸಿಕ್ಕಿಬಿದ್ದದ್ದು ಹೇಗೆ ಗೊತ್ತಾ?

Assault:(ಸೆ.6) ಹೆಣ್ಣು ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳ ಸಂಖ್ಯೆಗೆ ಇದೊಂದು ಘಟನೆ ಹೊಸ ಸೇರ್ಪಡೆಯಾಗಿದೆ.

ಇದನ್ನೂ ಓದಿ: ⛔Mangalore Accident: ಏರ್ಪೋಟ್ ರೋಡಲ್ಲಿ ಬೈಕ್‌ ಸ್ಕಿಡ್ ಆಗಿ ಇಬ್ಬರು ಯುವಕರು ಸಾವು

70 ವರ್ಷದ ಮದುಕನೋರ್ವ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ವೀಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈತನನ್ನು ಇದೀಗ ಪೊಲೀಸರು ಬಂಧನ ಮಾಡಿದ್ದಾರೆ.

ಉತ್ತರಪ್ರದೇಶದ ಸೀತಾಪುರದಲ್ಲಿ ನಡೆದಿರುವ ಘಟನೆ ಇದಾಗಿದ್ದು, ಅಂಗಡಿಗೆ ಬಂದ ಬಾಲಕಿಯ ಜೊತೆ ವೃದ್ಧನೋರ್ವ ವಿಕೃತಿ ಮೆರೆದಿದ್ದಾರೆ. ಬಾಲಕಿಯೊಬ್ಬಳು ಮೊಹಮ್ಮದ್‌ ಅನ್ವರ್‌ (70) ಎಂಬಾತನ ಅಂಗಡಿಗೆ ಬಂದಿದ್ದು, ತಿಂಡಿ ಖರೀದಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಚಾಕಲೇಟ್‌ ಕೊಡುವ ನೆಪದಲ್ಲಿ ಬಾಲಕಿಯನ್ನು ಹತ್ತಿರ ಕರೆಸಿದ ಈತ ಖಾಸಗಿ ಅಂಗ ಮುಟ್ಟಿ ವಿಕೃತಿ ಮೆರೆದಿದ್ದಾನೆ. ಇದನ್ನುಯಾರೋ ಒಬ್ಬರು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.

ವೀಡಿಯೋ ವೈರಲ್‌ ಆಗುತ್ತಿದ್ದಂತೆ ಸೀತಾಪುರ ಪೊಲೀಸರು ಪೋಕ್ಸೋ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಲ್ಲಿ 70 ರ ವೃದ್ಧ ಅನ್ವರ್‌ನನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *