Wed. Nov 20th, 2024

Badanaje: ಸ. ಉ. ಪ್ರಾ. ಶಾಲೆ ಬದನಾಜೆಯಲ್ಲಿ ವಲಯ ಮಟ್ಟದ ಪ್ರಾಥಮಿಕ ಶಾಲಾ ತ್ರೋಬಾಲ್ ಪಂದ್ಯಾಟ

ಬದನಾಜೆ:(ಸೆ.7) ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬದನಾಜೆಯಲ್ಲಿ ಹಳೆಪೇಟೆ ಉಜಿರೆ, ಅಣಿಯೂರು, ಮುಂಡಾಜೆ ವಲಯ ಮಟ್ಟದ ಪ್ರಾಥಮಿಕ ಶಾಲಾ ತ್ರೋಬಾಲ್ ಪಂದ್ಯಾಟವು ನಡೆಯಿತು.

ಇದನ್ನೂ ಓದಿ; ⛔ಉಪ್ಪಿನಂಗಡಿ : ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ್ದ ವಿವಾಹಿತೆ ನಾಪತ್ತೆ

ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀಮತಿ ಉಷಾ ಕಿರಣ್ ಕಾರಂತ್ ಗ್ರಾಮ ಪಂಚಾಯತ್ ಅಧ್ಯಕ್ಷರು, ಶ್ರೀಮತಿ ನಾಗವೇಣಿ ಗ್ರಾಮ ಪಂಚಾಯತ್ ಸದಸ್ಯರು ಉಜಿರೆ, ಶ್ರೀಮತಿ ಸವಿತಾ ಗ್ರಾಮ ಪಂಚಾಯತ್ ಸದಸ್ಯರು ಉಜಿರೆ ಶ್ರೀ ರಾಮಯ್ಯ ಗೌಡ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಮುನಾ,

ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ, ಶ್ರೀಮತಿ ಪ್ರತಿಮಾ ಸಮೂಹ ಸಂಪನ್ಮೂಲ ವ್ಯಕ್ತಿ ಹಳೆಪೇಟೆ ಉಜಿರೆ, ಶ್ರೀಯುತ ಪ್ರಶಾಂತ್ ಸಮೂಹ ಸಂಪನ್ಮೂಲ ಅಧಿಕಾರಿ ಅಣಿಯೂರು, ಮುಂಡಾಜೆ, ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ನವೀನ,

ವಲಯ ದೈಹಿಕ ಶಿಕ್ಷಣ ಸಂಯೋಜಕರು ಶ್ರೀಯುತ ರವಿ, ಶಿಕ್ಷಕರ ಸಂಘದ ಕಾರ್ಯದರ್ಶಿಯಾದ ಸುರೇಶ್ ಮಾಚರ್ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀಯುತ ಅನಿಲ್ ಡಿಸೋಜ ಉಪಸ್ಥಿತರಿದ್ದರು.

ಶ್ರೀಮತಿ ಉಷಾ ಕಿರಣ್ ಕಾರಂತ ಗ್ರಾಮ ಪಂಚಾಯತ ಅಧ್ಯಕ್ಷರು ಜ್ಯೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

ಶ್ರೀಮತಿ ಪ್ರತಿಮ ಸಮೂಹ ಸಂಪನ್ಮೂಲ ಅಧಿಕಾರಿಗಳು ಹಳೆಪೇಟೆ ಉಜಿರೆ ಪ್ರಾಸ್ತಾವಿಕ ನುಡಿ ದರು. ಶ್ರೀಮತಿ ಲಲಿತ ಕುಮಾರಿ ಮುಖ್ಯ ಶಿಕ್ಷಕರು ಸ್ವಾಗತಿಸಿದರು.ಶ್ರೀಮತಿ ಜಯಂತಿ ಕುಮಾರಿ ಶಿಕ್ಷಕಿ ವಂದಿಸಿದರು.

ಶ್ರೀಮತಿ ಜಯಲಕ್ಷ್ಮಿ ಶಿಕ್ಷಕಿ ನಿರೂಪಿಸಿದರು. ಬಾಲಕರ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬದನಾಜೆ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿರುತ್ತದೆ.

ಶ್ರೀಯುತ ನಿರಂಜನ್ ದೈಹಿಕ ಶಿಕ್ಷಕರು ತರಬೇತಿ ನೀಡಿದರು. ಕಾರ್ಯಕ್ರಮ ಊರವರ ಸಹಕಾರದೊಂದಿಗೆ ಉತ್ತಮವಾಗಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *