Wed. Feb 5th, 2025

Ghost Hackers: ಡಿಜಿಟಲ್ ಅರೆಸ್ಟ್ ಆಯ್ತು – ಈಗ Ghost ಹ್ಯಾಕರ್ಸ್- ಏನಿದು Ghost ಹ್ಯಾಕರ್ಸ್..?

Ghost Hackers: ಭೂತ ಹ್ಯಾಕರ್ಸ್. ಆತ್ಮ, ಪ್ರೇತಾತ್ಮ, ದೆವ್ವ, ಭೂತಗಳ ನಂಬೋರಿಗೆ ಈ ಹೆಸರು ಕೇಳಿದ್ರೇನೆ ಎದೆ ಝಲ್ ಎನ್ನುತ್ತೆ. ಇದೀಗ ನಿಮ್ಮನ್ನು ಮೋಸಗೊಳಿಸಲು ‘ಘೋಸ್ಟ್ ಹ್ಯಾಕರ್ಸ್’ ದಾಂಧಲೆಗೆ ಇಳಿದಿದ್ದಾರೆ.

ಏನಿದು ಭೂತ ಹ್ಯಾಕರ್ಸ್..?:
ಸೈಬರ್ ಕ್ರೈಂ ವೇಗವಾಗಿ ಹೆಚ್ಚುತ್ತಿದೆ. ಇದು ಹೊಸ ವಿಚಾರ ಅಲ್ಲ. ಜನರನ್ನು ವಂಚಿಸಲು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ನಾನಾ ಐಡಿಯಾಗಳನ್ನು ಮಾಡ್ತಿದ್ದಾರೆ. ಇದು ಕೂಡ ಹೊಸ ವಿಚಾರ ಅಲ್ಲ ಅಂತಾ ನೀವು ಹೇಳಬಹುದು. ಇತ್ತೀಚೆಗಿನ ದಿನಗಳಲ್ಲಿ ಹ್ಯಾಕರ್ಸ್ ಹಣ ಮಾಡಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಹ್ಯಾಕರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಕಣ್ಣಿಡುತ್ತಿದ್ದಾರೆ. ಯಾರದೊ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಈ ಗ್ಯಾಂಗ್ ಆಕ್ಟಿವ್ ಆಗಲಿದೆ.

ಘೋಸ್ಟ್ ಹ್ಯಾಕರ್ಸ್ ಹೇಗೆ ಕೆಲಸ ಮಾಡ್ತದೆ?
ಮೊದಲೇ ಹೇಳಿದಂತೆ ಸೋಶಿಯಲ್ ಮೀಡಿಯಾ ಮೇಲೆ ಕಣ್ಣಿಟ್ಟಿರುತ್ತಾರೆ. ಅಂದರೆ ‘ಘೋಸ್ಟ್ ಹ್ಯಾಕರ್‌ಗಳು’ ಮರಣ ಹೊಂದಿದ ವ್ಯಕ್ತಿಗಳ ಆನ್‌ಲೈನ್ ಖಾತೆಗಳ ಲಾಭವನ್ನು ಪಡೆಯುವ ಅಪರಾಧಿಗಳು. ಯಾರದ್ದೋ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಎಚ್ಚರಗೊಳ್ಳುವ ಇವರು, ದಾಳಿಗೆ ಪ್ಲಾನ್ ಮಾಡ್ತಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಇತರೆ ಖಾತೆಗಳಿಗೆ ಪ್ರವೇಶಿಸಲು ಪ್ರಾರಂಭಿಸುತ್ತಾರೆ. ಆರಂಭದಲ್ಲಿ ಸತ್ತ ವ್ಯಕ್ತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪಡೆಯುತ್ತಾರೆ.

ಮಾಹಿತಿ ತಿಳಿದ ಬಳಿಕ ಹಳೆಯ ತಂತ್ರವನ್ನು ಬಳಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಪಳಗಿರುವ ಇವರು, ಸತ್ತ ವ್ಯಕ್ತಿಯ ಖಾತೆಗೆ ಎಂಟ್ರಿ ನೀಡಿ. ದುರ್ಬಲ ಪಾಸ್ ವರ್ಡ್‌ಗಳನ್ನು ಭೇದಿಸುವಲ್ಲಿ ಯಶಸ್ವಿ ಆಗ್ತಾರೆ. ಒಮ್ಮೆ ಖಾತೆಗೆ ಹ್ಯಾಕರ್ಸ್ ಪ್ರವೇಶ ಪಡೆದರೆ, ತಮಗೆ ಬೇಕಾದ ರೀತಿಯಲ್ಲಿ ಅಪರಾಧಗಳನ್ನು ಮಾಡ್ತಾರೆ. ಸ್ನೇಹಿತರು ಮತ್ತು ಕುಟುಂಬಕ್ಕೆ ಸ್ಪ್ಯಾಮ್, ಸ್ಕ್ಯಾಮ್‌ ಗಳು ಅಥವಾ ದುರುದ್ದೇಶಪೂರಿತ ಸಂದೇಶಗಳನ್ನು ಕಳುಹಿಸುತ್ತಾರೆ. ಅವರ ಅಂತಿಮ ಗುರಿ ಹಣ ಸಂಪಾದನೆ ಮಾಡೋದಾಗಿದೆ.

ಪಾರಾಗೋದು ಹೇಗೆ..?
ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್‌ಗಳಲ್ಲಿ ಸತ್ತವರ ಖಾತೆಗಳನ್ನು ನಿರ್ವಹಿಸುವ ಆಯ್ಕೆಯೂ ಇದೆ. ಉದಾಹರಣೆಗೆ ಫೇಸ್‌ಬುಕ್‌ನಲ್ಲಿ ಬಳಕೆದಾರರು ತಮ್ಮ ಸಾವಿನ ನಂತರ ಅವರ ಖಾತೆ ಏನಾಗುತ್ತದೆ ಅನ್ನೋದನ್ನು ಮೊದಲೇ ನಿರ್ಧರಿಸಬಹುದು. ಬೇರೆ ಯಾರೋ ನಿರ್ವಹಿಸುವ ಅಥವಾ ಪ್ರೊಫೈಲ್ ನಿಷ್ಕ್ರಿಯಗೊಳಿಸುವ ಆಯ್ಕೆ ಇರುತ್ತದೆ. ಫೇಸ್‌ಬುಕ್ ಮಾತ್ರವಲ್ಲ, ಇನ್‌ಸ್ಟ್ರಾಗ್ರಾಮ್, ಎಕ್ಸ್‌ನಲ್ಲಿಯೂ ಈ ಆಪ್ಷನ್ ಇದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು