ತಮಿಳುನಾಡು: (ಸೆ.10) ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ರಾಧಾಪುರಂ ತಾಲೂಕಿನ ಆತುಕುರಿಚಿ ಗ್ರಾಮದಲ್ಲಿ ಮಹಿಳೆಯೊಬ್ಬರು ಪಕ್ಕದ ಮನೆಯ ಬಾಲಕನನ್ನು ಹತ್ಯೆ ಮಾಡಿ

ಇದನ್ನೂ ಓದಿ: ⛔ಬೆಂಗಳೂರು : ಪತ್ನಿ ಸಾವಿಗೆ ಕಾರಣನಾದ ಪತಿ ಬಿಚ್ಚಿಟ್ಟ ರಹಸ್ಯವೇನು ಗೊತ್ತಾ??
ವಾಷಿಂಗ್ ಮೆಷಿನ್ನಲ್ಲಿ ಬಚ್ಚಿಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಬಾಲಕನ ತಂದೆಯೊಂದಿಗೆ ದ್ವೇಷವಿದ್ದ ಹಿನ್ನೆಲೆಯಲ್ಲಿ ಪಕ್ಕದ ಮನೆಯ ತಂಗಮ್ಮಾಳ್ ಎಂಬಾಕೆ 3 ವರ್ಷದ ಬಾಲಕನನ್ನು ಹತ್ಯೆ ಮಾಡಿದ್ದಾಳೆ.
ಕಟ್ಟಡ ಕಾರ್ಮಿಕ ವಿಘ್ನೇಶ್ ಅವರ ಪುತ್ರ ಸಂಜಯ್ ಎಂಬ ಪುಟ್ಟ ಬಾಲಕ ಬೆಳಗ್ಗೆ ಮನೆಯ ಬಳಿ ಆಟವಾಡುತ್ತಿದ್ದ, ಆದರೆ ಬಾಲಕನ ತಾಯಿ ಮಗನನ್ನು ಶಾಲೆಗೆ ಕರೆದೊಯ್ಯಬೇಕೆಂದು ಹುಡುಕಾಡಿದಾಗ ಮಗು ಕಾಣೆಯಾಗಿತ್ತು.



ನಂತರ ವಿಘ್ನೇಶ್ ರಾಧಾಪುರಂ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿ ಪಕ್ಕದ ಮನೆಗಳಲ್ಲಿ ಬಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಆ ಸಂದರ್ಭದಲ್ಲಿ ಸಂಜಯ್ ಮೃತದೇಹವನ್ನು ಗೋಣಿಚೀಲದಲ್ಲಿ ಸುತ್ತಿ ತಂಗಮ್ಮಾಳ್ ಅವರ ಮನೆಯಲ್ಲಿರುವ ವಾಷಿಂಗ್ ಮೆಷಿನ್ನಲ್ಲಿ ಬಚ್ಚಿಟ್ಟಿದ್ದನ್ನು ಪತ್ತೆ ಮಾಡಿದ್ದಾರೆ.

ಇದೀಗ ಪೊಲೀಸರು ಶವವನ್ನು ವಶಪಡಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.



