ಮಂಗಳೂರು: (ಸೆ.13) ಕ್ಷೇವಿಯರ್ ಐಟಿಐ ಅಸೈಗೋಳಿ ಇದರ ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಪಾನೀರ್ ರವರು ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ:🛑ಮಂಗಳೂರು: ಹಳೆಮನೆ ಕೆಡವುತ್ತಿದ್ದಾಗ ಗೋಡೆ ಸಹಿತ ಲಿಂಟಲ್ ಬಿದ್ದು ಇಬ್ಬರು ಮೃತ್ಯು
ಕ್ಷೇವಿಯರ್ ಎಜುಕೇಶನ್ ಟ್ರಸ್ಟ್ (ರಿ.)1984 ರಲ್ಲಿ ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ಹಿಂದುಳಿದ ಮತ್ತು ಗ್ರಾಮಿಣ ಯುವಕರಿಗೆ ತಾಂತ್ರಿಕ ತರಬೇತಿ ನೀಡುವ ಉದ್ದೇಶ ದಿಂದ ಜಾತಿ ಮತ ಧರ್ಮ ಲೆಕ್ಕಿಸದೆ ಸಮಾಜದ ಉದ್ಧಾರಕ್ಕಾಗಿ ಸ್ಥಾಪನೆಗೊಂಡಿತು.
ಕ್ಷೇವಿಯರ್ ಟ್ರಸ್ಟ್ ವತಿಯಿಂದ 1984 ರಲ್ಲಿ ಮುಕ್ಕದಲ್ಲಿ ಕ್ಷೇವಿಯರ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ( XITC )ಎಂದು ಸ್ಥಾಪನೆಗೊಂಡು. ತದನಂತರ 1992ರಲ್ಲಿ ಮುಕ್ಕದಿಂದ ಕೊಣಾಜೆ ಸಮೀಪದ ಅಸೈಗೋಳಿಗೆ ಸ್ಥಳಾಂತರಿಸಲಾಯಿತು.
ಕ್ಷೇವಿಯರ್ ಐಟಿಐ ಐಟಿಐ ಗೆ ಉದ್ಯೋಗ ಮತ್ತು ತರಬೇತಿ ಇಲಾಖೆ ಕರ್ನಾಟಕ ರಾಜ್ಯ ಸರ್ಕಾರ ಮತ್ತು ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶ ನಲ್ ಟ್ರೈನಿಂಗ್ NCVT ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಭಾರತ ಸರ್ಕಾರ ನವ ದೆಹಲಿಯಿಂದ ಗುರುತಿಸಲ್ಪಟ್ಟಿದ್ದ ,
ಈ ಸಂಸ್ಥೆಗೆ 40 ವರ್ಷ ತುಂಬುವ ಈ ಶುಭ ಸಂದರ್ಭದಲ್ಲಿ 2024 ಸಪ್ಟೆಂಬರ್ 9 ತಾರೀಕಿನಂದು ನಡೆದ ಕ್ಷೇವಿಯರ್ ಟ್ರಸ್ಟ್(ರಿ) ಇದರ ಸಭೆಯಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷರು,
All India Christian union ಇದರ ರಾಜ್ಯಾಧ್ಯಕ್ಷರು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮೈನೋರಿಟಿಯ ಅಧ್ಯಕ್ಷರಾಗಿ ಸಾಮಾಜಿಕ ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನೆ ತಾನು ತೊಡಗಿಸಿಕೊಂಡು ಬಂದಿದ್ದಾರೆ.