Wed. Nov 20th, 2024

Ujire: ಶ್ರೀ ಧ.ಮಂ. ಪಿ.ಯು. ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ – ಅರಿವೇ ಗುರುವಾಗಬೇಕು – ರಾಮಕೃಷ್ಣಭಟ್

ಉಜಿರೆ:(ಸೆ.18) ನಿಮ್ಮೊಳಗಿನ ಮಾತು ಆಡಲು ಶುರುವಾದರೆ ನೀವು ಗುರುಗಳಾಗಿರುತ್ತೀರಿ ಶ್ರೀಕೃಷ್ಣ ಜಗತ್ತಿನ ಮೊದಲ ಗುರು.
ಅರ್ಜುನ ಗಾಂಡೀವ ಕೆಳಗಿರಿಸಿದಾಗ ಶ್ರೀಕೃಷ್ಣ ಅರ್ಜುನನಲ್ಲಿ ಮೊದಲು ಕೇಳಿದ ಮಾತು, ನಿನ್ನನ್ನು ನೀನು ಉದ್ಧರಿಸಿಕೋ ಎಂದು.

ಇದನ್ನೂ ಓದಿ; ⚖Daily Horoscope – ಇಂದು ಈ ರಾಶಿಯವರಿಗೆ ಮಿತ್ರರಿಂದ ಅಪಾಯವಾಗುವ ಸಾಧ್ಯತೆ ಇದೆ !!

ಎಲ್ಲ ಜವಾಬ್ದಾರಿಗಳ ಮಜಲುಗಳ ನಡುವೆ, ನಿದ್ದೆ-ಮುದ್ದೆಗಳ ಸವಾಲುಗಳ ನಡುವೆ ಹೇಗೆ ಜೀವನವನ್ನು ಸಾಗಿಸಬೇಕು, ಅರಿವೇ ಗುರುವಾಗಬೇಕು ಎಂದು ಬೆಳಾಲು ಶ್ರೀ ಧ.ಮಂ.ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ರಾಮಕೃಷ್ಣಭಟ್ ಇವರು ಶ್ರೀಧ.ಮಂ.ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.

ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಅನನ್ಯಾ ಇವರು ವಿದ್ಯಾರ್ಥಿಗಳಿಗೆ ಜೀವಸಂಕುಲದಲ್ಲಿ ಶ್ರೇಷ್ಠನಾದ ಮಾನವ, ಮಾನವನಾಗಿ ಜೀವನ ಮಾಡಬೇಕಾದಲ್ಲಿ ಗುರುವಿನ ಮಹತ್ವ, ಗುರು ಮತ್ತು ದೇವರ ನಡುವೆ ಗುರುವೇಕೆ ಉನ್ನತ ಸ್ಥಾನದಲ್ಲಿರುತ್ತಾನೆ ಎಂದು ಹಲವು ನಿದರ್ಶನಗಳ ಮೂಲಕ ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್‌ ರವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.


ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಯುವರಾಜ್‌ ಪೂವಣಿ ಹಾಗೂ ಉಪಪ್ರಾಂಶುಪಾಲರಾದ ಡಾ. ರಾಜೇಶ್ ಬಿ. ಇವರು ಉಪಸ್ಥಿತರಿದ್ದರು.

ದ್ವಿತೀಯ ವಿಜ್ಞಾನ ವಿದ್ಯಾರ್ಥಿನಿ ಸುಮೇಧಾ ಗಾಂವ್ಕರ್‌ ಇವರು ಶಿಕ್ಷಕರ ದಿನದ ಮಹತ್ವವನ್ನು ಪ್ರಸ್ತುತಪಡಿಸಿದರು. ಸಂಕೇತ್ ಮತ್ತು ಬಳಗದವರು ಪ್ರಾರ್ಥಿಸಿದರು. ಧನ್ಯ ಮತ್ತು ಸೌಜನ್ಯ ಇವರು ಅತಿಥಿ ಪರಿಚಯ ಮಾಡಿದರು.

ಸ್ವಪ್ನ ಅಭ್ಯಾಗತರನ್ನು ಸ್ವಾಗತಿಸಿ, ಶ್ರದ್ಧಾ ಇವರು ವಂದಿಸಿದರು. ಸಾಕ್ಷಿ ಮತ್ತು ನಿಜ ಕುಲಾಲ್ ನಿರೂಪಿಸಿದರು.


ಕಾಲೇಜಿನ‌ ಉಪನ್ಯಾಸಕರಿಂದ ಹಾಗೂ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Leave a Reply

Your email address will not be published. Required fields are marked *