ಯಲಹಂಕ:(ಸೆ.18) ಸ್ಪಂದನ ಚಾರಿಟೇಬಲ್ ಟ್ರಸ್ಟಿನ ಮಹತ್ವದ 14ನೇ ಯೋಜನೆಯಾದ “ಮುಗ್ಧ ಮನಸ್ಸುಗಳೊಂದಿಗೆ ಸ್ಪಂದನ ಚಾರಿಟೇಬಲ್ ಟ್ರಸ್ಟ್” ದಿನಾಂಕ 15 ಸೆಪ್ಟೆಂಬರ್ 2024ರಂದು ಬುದ್ಧಿ ವಿಶೇಷ ಚೇತನರ ಕಲಿಕಾ ಕೇಂದ್ರ ಯಲಹಂಕದಲ್ಲಿ ನೆರವೇರಿತು.
ಇದನ್ನೂ ಓದಿ: 🛑ಅಂಕಲ್- ಆಂಟಿ ಲವ್ ಸ್ಟೋರಿ – ಆಂಟಿ ಕೊನೆಗೆ ಮಾಡಿದ್ದೇನು ಗೊತ್ತಾ?
ಸ್ಪಂದನ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಬೆಳ್ಳಿಯಪ್ಪರವರ ಅಧ್ಯಕ್ಷತೆಯಲ್ಲಿ ,ಶ್ರೀಮತಿ ರಮ್ಯಾ ಚಿದಾನಂದರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ಕಾರ್ಯಕ್ರಮವನ್ನು ಬುದ್ಧಿ ವಿಶೇಷ ಚೇತನರ ಕಲಿಕಾ ಕೇಂದ್ರದ ಸಂಸ್ಥಾಪಕ ಟ್ರಸ್ಟಿ ಮತ್ತು ಅಧ್ಯಕ್ಷರಾದ ಶ್ರೀ ಕೃಷ್ಣರಾಜ ಮರಕಿಣಿ ಮತ್ತು ಸ್ಪಂದನ ಚಾರಿಟೇಬಲ್ ಟ್ರಸ್ಟಿನ ಗೌರವಾಧ್ಯಕ್ಷರಾದ ಶ್ರೀ ಸುರೇಶ್ ರವರು ಉದ್ಘಾಟಿಸಿದರು.
ಬುದ್ಧಿ ವಿಶೇಷ ಚೇತನರ ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಗೆ ವಿವಿಧ ಮನೋರಂಜನಾ ಸ್ಪರ್ಧೆ, ಸಾಂಸ್ಕೃತಿಕ ಸ್ಪರ್ಧೆ ನಡೆಸಲಾಯಿತು. ವಿಜೇತರಿಗೆ ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.
ಟ್ರಸ್ಟಿನ ವತಿಯಿಂದ ಅಗತ್ಯ ನೆರವಿನ ರೂಪದಲ್ಲಿ Sensory integration training kit ಮತ್ತು Projector screen ನೀಡಲಾಯಿತು.
ಈ ಸಂದರ್ಭದಲ್ಲಿ ಬುದ್ಧಿ ವಿಶೇಷ ಚೇತನರ ಕಲಿಕಾ ಕೇಂದ್ರದ ಸಂಸ್ಥಾಪಕ ಟ್ರಸ್ಟಿ ಮತ್ತು ಅಧ್ಯಕ್ಷರಾದ ಶ್ರೀ ಕೃಷ್ಣರಾಜ ಮರಕಿಣಿ,
ಬುದ್ಧಿ ವಿಶೇಷ ಚೇತನರ ಕಲಿಕಾ ಕೇಂದ್ರದ ಸಂಸ್ಥಾಪಕ ಟ್ರಸ್ಟಿ ಮತ್ತು ಕಾರ್ಯದರ್ಶಿಗಳಾದ ಶ್ರೀಮತಿ ರೇಖಾ ದೊಡ್ಡಮನಿ, ಸ್ಪಂದನ ಚಾರಿಟೇಬಲ್ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು, ಕೋರ್ ಕಮಿಟಿ ಸದಸ್ಯರು, ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಮಾರಿ ರೂಪ ಶ್ರೀ ರವರು ನಿರೂಪಿಸಿದರು. ಕಾರ್ಯಕ್ರಮವನ್ನು ರಾಷ್ಟ್ರಗೀತೆಯೊಂದಿಗೆ ಕೊನೆಗೊಳಿಸಲಾಯಿತು.