Wed. Nov 20th, 2024

ಜಗತ್ತಿಗೆ ಹೊಸ ಎಂಟ್ರಿ : ಕಿಸ್ಸಿಂಗ್ ಡಿಸೀಸ್

ಬ್ರಿಟನ್ (ಜುಲೈ 10) : ಖಾಯಿಲೆ ಅಂದ್ರೇನೆ ಎಲ್ಲರಿಗೂ ಭಯ. ಕೊರೊನಾ ಮಹಾಮಾರಿಯ ಭೀಕರತೆ ಇನ್ನೂ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಈ ಜಗತ್ತಿಗೆಇನ್ನೊಂದು ಸಾಂಕ್ರಾಮಿಕ ರೋಗದ ಎಂಟ್ರಿ ಆಗಿದೆ. ಅದೇ ಕಿಸ್ಸಿಂಗ್ ಡಿಸೀಜ್.
ಹೌದು, ಈಗಾಗಲೇ ಅಮೆರಿಕದಂತಹ ದೇಶಗಳಲ್ಲಿ ಕಿಸ್ಸಿಂಗ್ ಡಿಸೀಜ್ ಎಚ್ಚರಿಕೆ ಸೂಚನೆ ನೀಡಿದೆ. ಈ ಸಾಂಕ್ರಾಮಿಕ ರೋಗ ಹರಡುವುದು ವ್ಯಕ್ತಿಯ ಲಾಲಾರಸದ ಮೂಲಕ. ಈಗಾಗಲೇ ಬ್ರಿಟನ್‌ನಲ್ಲಿ ಈ ವೈರಸ್‌ನಿಂದಾಗಿ ಕಾಲೇಜು ವಿದ್ಯಾರ್ಥಿಯೋರ್ವ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ. ಸಾಮಾನ್ಯವಾಗಿ ಈ ಡಿಸೀಜ್ಎಪ್ಸ್ಟೀನ್-ಬಾರ್ ವೈರಸ್ (EBV) ನಿಂದ ಉಂಟಾಗುತ್ತದೆ. ಇದು ಸೋಂಕಿತ ವ್ಯಕ್ತಿಯ ಬಾಯಿಯಿಂದ ಲಾಲಾರಸದ ನೇರ ಸಂಪರ್ಕದಿಂದ ಅಥವಾ ರಕ್ತದಂತಹ ಇತರ ದೈಹಿಕ ದ್ರವಗಳ ಮೂಲಕ ಹರಡುತ್ತದೆ. ಚುಂಬನ, ಲೈಂಗಿಕ ಸಂಪರ್ಕ ಅಥವಾ ಆಹಾರ ಮತ್ತು ಪಾನೀಯಗಳನ್ನು ಹೊಂದಿರುವ ಯಾರೊಂದಿಗಾದರೂ ಹಂಚಿಕೊಳ್ಳುವ ಮೂಲಕ ಹರಡಬಹುದು.

ಕಿಸ್ಸಿಂಗ್ ಕಾಯಿಲೆ ಲಿಪ್‌ಲಾಕ್ ಕಿಸ್, ಒಂದೇ ತಟ್ಟೆಯಲ್ಲಿ ಊಟ ಮಾಡೋದು, ಸ್ಪೂನ್, ಒಂದೇ ಸಿಗರೇಟು ಇಬ್ಬರು ಬಳಸುವುದು, ಮಾಡೋದು ಹೀಗೆ ವೈರಸ್ ದೇಹವನ್ನು ಪ್ರವೇಶಿಸಿದಾಗ, ಮೊದಲ ಬದಲಾವಣೆಯು ಗಂಟಲಿನಲ್ಲಿ ಕಂಡುಬರುತ್ತದೆ. ಮೊದಲು ಕೆಮ್ಮಿನಿಂದ ಪ್ರಾರಂಭಗೊಳ್ಳುವ ಕಿಸ್ಸಿಂಗ್ ಕಾಯಿಲೆಯಲ್ಲಿ ಗ್ರಂಥಿಗಳ ಜ್ವರ ಬರುತ್ತದೆ. ಇದರ ನಂತರ ವ್ಯಕ್ತಿಯು ವಾಂತಿ ಮಾಡಲು ಪ್ರಾರಂಭಿಸುತ್ತಾನೆ ಆಗಾಗ್ಗೆ ಮೈ ಬೆವರಲು ಹೆಚ್ಚಾಗುತ್ತದೆ. ಜ್ವರದ ತೀವ್ರತೆ ಹೆಚ್ಚಾದಂತೆ ದೇಹದ ಮೇಲೆ ದದ್ದುಗಳು ಏಳುತ್ತವೆ. ತಲೆ ಮತ್ತು ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಹಸಿವಿನ ಕೊರತೆ, ಯಕೃತ್ತಿನಲ್ಲಿ ನೋವು ಸಹ ಇದರ ಲಕ್ಷಣಗಳಾಗಿವೆ. ಈ ರೋಗವು ಮುಖ್ಯವಾಗಿ ಲಾಲಾರಸದ ಮೂಲಕ ದೇಹವನ್ನು ಪ್ರವೇಶಿಸುವುದರಿಂದ ಇದನ್ನು ಕಿಸ್ಸಿಂಗ್ ಕಾಯಿಲೆ ಎಂದೇ ಹೆಸರಾಗಿದೆ.

ಸದ್ಯ ಕಿಸ್ಸಿಂಗ್ ಕಾಯಿಲೆ ತಡೆಗಟ್ಟಲು ಮುಖ್ಯವಾಗಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಇತರ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ವೈದ್ಯರು ಸಲಹೆ ನೀಡಿರುತ್ತಾರೆ.

Leave a Reply

Your email address will not be published. Required fields are marked *