Wed. Nov 20th, 2024

Madantyaru: ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಮಹೋತ್ಸವ – ಸವಿ ನೆನಪಿನ ಕೇಂದ್ರ ಕಚೇರಿಯ ನೂತನ ಕಟ್ಟಡ ‘ಪರಿಶ್ರಮ’ ಲೋಕಾರ್ಪಣೆ

ಮಡಂತ್ಯಾರು:(ಸೆ.23) ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ನೂತನ ಕಟ್ಟಡ ಪರಿಶ್ರಮದ ಉದ್ಘಾಟನಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸೋಮವಾರ ನೆರವೇರಿತು.

ಇದನ್ನೂ ಓದಿ: 🚌ಬಂಟ್ವಾಳ: ಕೆಎಸ್ ಆರ್ ಟಿಸಿ ಬಸ್ ಪಲ್ಟಿ

ಪರಿಶ್ರಮ ಕಟ್ಟಡದ ಉದ್ಘಾಟನೆಯನ್ನು ಸಹಕಾರ ರತ್ನ ಡಾ| ಎಂ. ಎನ್. ರಾಜೇಂದ್ರ ಕುಮಾರ್ ನೆರೆವೇರಿಸಿದರು. ರಸಗೊಬ್ಬರ ವಿಭಾಗ , ಆಡಳಿತ ವಿಭಾಗ , ಸಭಾಂಗಣ ಮತ್ತು ಲಿಫ್ಟ್ , ಪಡಿತರ ಹೀಗೆ ಹಲವು ವಿಭಾಗದ ಉದ್ಘಾಟನೆ ನೆರವೇರಿತು.

ರಾಜೇಂದ್ರ ಕುಮಾರ್ ಶುಭಹಾರೈಕೆ ..!
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ ಎನ್ ರಾಜೇಂದ್ರ ಕುಮಾರ್ , ಪರಿಶ್ರಮ ಇದೊಂದು ಅತ್ಯುತ್ತಮ ಕಟ್ಟಡವಾಗಿದೆ. ಹಿರಿಯರಿಗೆ ಬ್ಯಾಂಕ್ ಗೆ ಬರಲು ಲಿಫ್ಟ್ ವ್ಯವಸ್ಥೆ ಕೂಡ ಮಾಡಲಾಗಿದೆ, ಇದು ಶ್ಲಾಘನೀಯ ಎಂದರು.

ವಾಣಿಜ್ಯ ಬ್ಯಾಂಕ್ ಗಳಲ್ಲಿ ಇಂತಹ ಅಂದದ ಕಟ್ಟಡವಿಲ್ಲ ಇಷ್ಟೆಲ್ಲಾ ವ್ಯವಸ್ಥೆಗಳು ಕೂಡ ಇಲ್ಲ , ಯಾವುದೇ ಲಿಫ್ಟ್ ಇಲ್ಲ , ಹವಾನಿಯಂತ್ರಣ ಕೊಠಡಿಗಳಿಲ್ಲ . ಆದರೆ ಇಂದು ಸಹಕಾರಿ ತತ್ವವನ್ನು ಪಾಲಿಸುವವರಿಂದಾಗಿ ಸಹಕಾರಿ ಬ್ಯಾಂಕ್ ಗಳು ಹೆಚ್ಚಿನ ಲಾಭವನ್ನು ಹೊಂದಿ ಅತ್ಯದ್ಭುತವಾಗಿ ಬೆಳೆವಣೆಗೆಯನ್ನು ಕಾಣುತ್ತಿದೆ ಎಂದರು.

ಅಲ್ಲದೆ ನಿಮ್ಮ ಸಂಸ್ಕೃತಿ ತಿಳ್ಕೊಂಡು , ನಿಮ್ಮ ಸೇವೆಯನ್ನು ಮಾಡುತ್ತ ನಮ್ಮ ಸಹಕಾರಿ ಬ್ಯಾಂಕ್ ಮಾಡುತ್ತಿದೆ. ವಾಣಿಜ್ಯ ಬಾಂಕುಗಳ ರೀತಿ ಬೇರೆ ಭಾಷಿಕರನ್ನು ಸಿಬ್ಬಂದಿಯಾಗಿ ನೇಮಿಸುತ್ತಿಲ್ಲ. ನಿಮ್ಮ ಭಾಷೆಯೊಂದಿಗೆ ನಮ್ಮ ಸಿಬ್ಬಂದಿ ಮಾತುಕತೆ ನಡೆಸುತ್ತಿದೆ. ಅಲ್ಲದೇ ಬ್ಯಾಂಕ್ ಗೆ ಬರುವ ಲಾಭವನ್ನು ನಿಮಗೆ ಕೊಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.

ಸಾಲವನ್ನು ಕೂಡ ಸುಲಭ ರೂಪದಲ್ಲಿ ಸಹಕಾರಿ ಸಂಘಗಳು ಕೊಡುತ್ತಿವೆ. ಸಹಕಾರಿ ಸಾಲ ಮರುಪಾವತಿಯನ್ನು ಕೂಡ ನಮ್ಮ ಸದಸ್ಯರು ಮಾಡುತ್ತಿದ್ದಾರೆ ಎಂದರು. ನಮ್ಮ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ ಎಂದು ಇದೆ ವೇಳೆ ರಾಜೇಂದ್ರ ಕುಮಾರ್ ಹೇಳಿದರು.

ಈ ಹಿಂದೆ ಕಾರ್ಯನಿರ್ವಹಿಸಿದವರಿಗೆ ಸನ್ಮಾನ..!
ಇದೇ ವೇಳೆ ಸಂಘವನ್ನು ಕಟ್ಟಲು ಈ ಹಿಂದೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಮಾಜಿ ಅಧ್ಯಕ್ಷರುಗಳಾದ ಸಂಜೀವ ಶೆಟ್ಟಿ ಮುಗೇರೋಡಿ, ಹಾಜಿ ಅಬ್ದುಲ್ಲ ಲತೀಫ್ ಸಾಹಿಬ್, ಪುಷ್ಪರಾಜ್ ಹೆಗ್ಡೆ ಯವರಿಗೆ ಸನ್ಮಾನ ಮಾಡಲಾಯಿತು.

ಜೊತೆಗೆ ಮಾಜಿ ಕಾರ್ಯ ನಿರ್ವಹಣಾ ಅಧಿಕಾರಿಗಳಾದ ಡೀಕಯ್ಯ ಮೂಲ್ಯ , ತುಳಸಿ ಡಿ ಆಚಾರ್ಯ , ರಾಮಕೃಷ್ಣ ಹೆಬ್ಬಾರ್ ಇವರಿಗೂ ಕೂಡ ಸನ್ಮಾನಿಸಲಾಯ್ತು . ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಅರವಿಂದ ಜೈನ್ , ಕುಶಾಲಪ್ಪ ಗೌಡ , ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜೋಕಿಮ್ ಡಿʼಸೋಜಾ ಮತ್ತಿತರು ಇದ್ದರು.

ವೇದಿಕೆ ಮುಂಭಾಗದಲ್ಲಿ ಸಂಘದ ನಿರ್ದೇಶಕರುಗಳು, ಸದಸ್ಯರು, ಬ್ಯಾಂಕ್ ಸಿಬ್ಬಂದಿ ಆಸೀನರಾಗಿದ್ದರು. ಕಾರ್ಯಕ್ರಮವನ್ನು ಧರ್ಣೇಂದ್ರ ಜೈನ್ ನಿರೂಪಿಸಿದರು.

ಅಲಂಕಾರದಿಂದ ಕಂಗೊಳಿಸಿದ ಪರಿಶ್ರಮ:
ಪರಿಶ್ರಮ ಕಟ್ಟಡವನ್ನು ಹೂವಿನ ಅಲಂಕಾರದಿಂದ ಸಿಂಗಾರಿಸಲಾಗಿತ್ತು. ಬ್ಯಾಂಕ್ ಹಾಗೂ ಇನ್ನಿತರ ಕೊಠಡಿಗಳು ಕೂಡ ಕಂಗೊಳಿಸುತ್ತಿತ್ತು. ಕಟ್ಟಡಕ್ಕೆ ಲೈಟ್ ನಿಂದಲೂ ಸಿಂಗಾರ ಮಾಡಲಾಗಿತ್ತು.

Leave a Reply

Your email address will not be published. Required fields are marked *