ಮಂಗಳೂರು :(ಸೆ.24) ಪಾರ್ಟ್ ಟೈಂ ಜಾಬ್ ಆಫರ್ ನೀಡಿ ವ್ಯಕ್ತಿಯೊಬ್ಬರಿಗೆ 28 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಕೋಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ⭕ಸುಳ್ಯ : ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಮೃತದೇಹ ಪತ್ತೆ!
2024 ಜುಲೈ 21ರಂದು ಸಂತ್ರಸ್ತ ವ್ಯಕ್ತಿಗೆ ಪಾರ್ಟ್ ಟೈಂ ಜಾಬ್ ಬಗ್ಗೆ ವಾಟ್ಸ್‌ಆ್ಯಪ್ ಮೆಸೇಜ್ ಬಂದಿತ್ತು. ಮೆಸೇಜ್‌ನಲ್ಲಿ ಟೆಲಿಗ್ರಾಂ ಆ್ಯಪ್ ತೆರೆದು ಲಿಂಕ್ ಕ್ಲಿಕ್ ಮಾಡಲು ತಿಳಿಸಿದ್ದರು. ಅದಕ್ಕೆ 123 ರೂ. ಪಾವತಿಸಿದ್ದು, ಆರೋಪಿಗಳು ತಿಳಿಸಿದಂತೆ ವಿಡಿಯೋದ ಸ್ಕ್ರೀನ್ ಶಾಟ್ ಕಳುಹಿಸಿದ್ದಕ್ಕೆ ಅವರಿಗೆ 130 ರೂ. ಹಾಕಿದ್ದರು.
ಆ ಬಳಿಕ ಕಳುಹಿಸಿರುವ ವಿಡಿಯೋ ತಪ್ಪಾಗಿದೆಯೆಂದು ಮತ್ತೊಂದು ಲಿಂಕ್ ಕಳುಹಿಸಿದ್ದರು. ಅಲ್ಲದೆ ವ್ಯಕ್ತಿಗೆ ಹೆಚ್ಚಿನ ಲಾಭದ ಆಮೀಷವೊಡ್ಡಿ 1 ಸಾವಿರ ಹಾಕಲು ಸೂಚಿಸಿದ್ದರು. ಅದರಲ್ಲಿ ಅವರಿಗೆ 1300 ರೂ. ಹಣ ಬಂದಿರುವುದು ತೋರಿಸಿತ್ತು.
ಆ ಬಳಿಕ ವಂಚಕರ ಮಾತು ನಂಬಿ ಅವರು ನೀಡಿರುವ ಬೇರೆಬೇರೆ ಖಾತೆಗಳಿಗೆ ಒಟ್ಟು 28,18,065 ರೂ. ಹಣವನ್ನು ಪಾವತಿಸಿದ್ದಾರೆ. ಆದರೆ ಆ ಬಳಿಕ ಹಣ ಹಿಂದಿರುಗಿ ಪಾವತಿಯಾಗಲೇ ಇಲ್ಲ. ಇದರಿಂದ ಸಂತ್ರಸ್ತ ವ್ಯಕ್ತಿ ಮೋಸ ಹೋಗಿರುವುದು ಗೊತ್ತಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಕೋಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.