ಬೆಳ್ತಂಗಡಿ: (ಸೆ.24) ಜೆಸಿಐ ಬೆಳ್ತಂಗಡಿ ಪೂರ್ವಾಧ್ಯಕ್ಷ , ಉದ್ಯಮಿ ಪೃಥ್ವಿ ರಂಜನ್ ರಾವ್ ಹೃದಯಾಘಾತದಿಂದ ಮಂಗಳವಾರ ಸಂಜೆ ನಿಧನ ಹೊಂದಿದ್ದಾರೆ.

ಇಂದು ಬೆಳಗ್ಗೆ ಹೃದಯಾಘಾತಕ್ಕೊಳಗಾಗಿ ಅಸ್ವಸ್ಥರಾದ ಅವರನ್ನು ತಕ್ಷಣ ಮನೆಯವರು ಸ್ಥಳೀಯ

ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಂಜೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.


ಕಳೆದ ಹಲವಾರು ವರ್ಷಗಳಿಂದ ಬೆಳ್ತಂಗಡಿಯಲ್ಲಿ ಶಾಮಿಯಾನದ ಉದ್ಯಮವನ್ನು ನಡೆಸುತ್ತಿದ್ದ ಅವರು ಸ್ನೇಹ ಜೀವಿಯಾಗಿದ್ದರು.

