Mahalakshmi Murder Case:(ಸೆ.25) ಬೆಂಗಳೂರು ಮಹಿಳೆಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ಸಿಕ್ಕಿ ಬಿದ್ದಿದ್ದು, ನೇಪಾಳಿ ಕನ್ನಡತಿಯನ್ನು ಭೀಕರವಾಗಿ ಕೊಂದು ಆಕೆಯ ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟು ಪರಾರಿ ಆಗಿದ್ದ ವ್ಯಕ್ತಿ ಬೇರಾರೂ ಅಲ್ಲ. ಆಕೆಯ ಸಹೋದ್ಯೋಗಿ ಎಂದು ವರದಿಯಾಗಿದೆ.
ಇದನ್ನೂ ಓದಿ: 🟣ಬೆಳ್ತಂಗಡಿ : ಯಶೋಧ ಕೃಷ್ಣ ವೀಡಿಯೋ ಸ್ಪರ್ಧೆ
ವೈಯಾಲಿಕಾವಲ್‌ನಲ್ಲಿ ನಡೆದ ಭೀಕರ ಕೊಲೆ ಇಡೀ ದೇಶವನ್ನೇ ನಡುಗಿಸಿತ್ತು. ಮಹಾಲಕ್ಷ್ಮಿ ಫ್ಯಾಶನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಆಕೆಯನ್ನು ಕೊಂದಿದ್ದು, ಟೀಮ್ ಹೆಡ್ ಮುಕ್ತಿ ರಂಜನ್ ರಾಯ್‌ನಿಂದಲೇ ಕೊಲೆಯಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಹೆಬ್ಬಗೋಡಿಯಲ್ಲಿ ಈತ ವಾಸ ಮಾಡುತ್ತಿದ್ದು, ಈತ ಒರಿಸ್ಸಾ ಮೂಲದವನು. ತಮ್ಮನೊಂದಿಗೆ ವಾಸವಿದ್ದು, ನಿತ್ಯ ಮಲ್ಲೇಶ್ವರಂನ ಫ್ಯಾಶನ್ ಫ್ಯಾಕ್ಟರಿಯಲ್ಲಿ ಟೀಂ ಹೆಡ್ ಆಗಿದ್ದ. ಇದೇ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮಿಯನ್ನು ರಂಜನ್ ಪ್ರೀತಿ ಮಾಡುತ್ತಿದ್ದ. ಆದರೆ ಇವರಿಬ್ಬರ ನಡುವೆ ಏನಾಯ್ತೋ ನಂತರ ಮಹಾಲಕ್ಷ್ಮೀಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.
ಸೆ.1 ರಂದು ಮಹಾಲಕ್ಷ್ಮೀ ಕೆಲಸಕ್ಕೆ ಹಾಜರಾಗಿದ್ದು, ಮಾರನೇ ದಿನ ವಾರದ ರಜೆ ಪಡೆದಿದ್ದಳು. ನೆಲಮಂಗಲದ ತಾಯಿ ಮನೆಗೆ ಬರುವುದಾಗಿ ಹೇಳಿದ್ದರಿಂದ, ಕುಟುಂಬಸ್ಥರಿಗೆ ಭೇಟಿ ವಿಷಯ ತಿಳಿಸಿದ್ದಳು. ಆದರೆ ಸೆ.2 ರಂದು ಮಹಾಲಕ್ಷ್ಮೀ ಕುಟುಂಬಸ್ಥರ ಸಂಪರ್ಕಕಕ್ಕೆ ಸಿಗಲಿಲ್ಲ. ರಂಜನ್ ಒಡಿಶಾ ಮೂಲದವನಾದರೂ ಪೊಲೀಸರ ಕಣ್ತಪ್ಪಿಸಿ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದು, ಫೋನ್ ಬಳಸದೇ ಪೊಲೀಸರ ಸಂಪರ್ಕಕ್ಕೆ ಸಿಗುತ್ತಿಲ್ಲ. ಕರ್ನಾಟಕ ಪೊಲೀಸರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಮಹಾಲಕ್ಷ್ಮೀಯನ್ನು 50 ತುಂಡಾಗಿ ಕತ್ತರಿಸಿದ್ದು, ಫ್ರಿಡ್ಜ್‌ನಲ್ಲಿ ಇಟ್ಟು, ಆರೋಪಿ ಪರಾರಿಯಾಗಿದ್ದಾನೆ. ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಆರೋಪಿಯ ಗುರುತಿಗಾಗಿ ಶೋಧ ಮಾಡಿದಾಗ ಹಲವರ ಬೆರಳಚ್ಚು ಗುರುತು ಪತ್ತೆಯಾಗಿರುವ ಕುರಿತು ವರದಿಯಾಗಿದೆ.
ಇನ್ನೊಂದು ಕಡೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕಟಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್‌ನನ್ನು ಕರೆದು ವಿಚಾರಣೆ ಮಾಡಿದ್ದು, ವಿಚಾರಣೆ ಸಂದರ್ಭದಲ್ಲಿ ಅಶ್ರಫ್, ಮಹಾಲಕ್ಷ್ಮೀ ಜೊತೆ ಸಂಪರ್ಕದಲ್ಲಿದ್ದದ್ದು ನಿಜ. ಆದರೆ ನಾನು ಕೊಲೆ ಮಾಡಿಲ್ಲ ಆರು ತಿಂಗಳ ಹಿಂದೆ ಆಕೆ ಜೊತೆ ಸಂಪರ್ಕ ಇತ್ತು. ಆಮೇಲೆ ದೂರ ಆಗಿದ್ದೇನೆ. ನಮ್ಮಿಬ್ಬರ ವಿಚಾರ ನಮ್ಮ ಕುಟುಂಬದವರಿಗೆ ತಿಳಿದು ಜಗಳವಾಗಿದ್ದು, ಅನಂತರ ಆಕೆಯ ತಂಟೆಗೆ ಹೋಗಿಲ್ಲ. ಈ ಕೊಲೆಗೂ ನನಗೂ ಏನೂ ಸಂಬಂಧವಿಲ್ಲ” ಎಂದು ಹೇಳಿದ್ದಾರೆ.
ಅನಂತರ ಪೊಲೀಸರು ಅಶ್ರಫ್ ಮೊಬೈಲ್ ಪರಿಶೀಲನೆ ಮಾಡಿದಾಗ ಇಬ್ಬರ ಮಧ್ಯೆ ಕಳೆದ ಆರು ತಿಂಗಳಿನಿಂದ ಸಂಪರ್ಕ ಇಲ್ಲದೇ ಇರುವುದು ತಿಳಿದು ಬಂದಿದೆ. ಹಾಗಾಗಿ ಪೊಲೀಸರು ಅಶ್ರಫ್‌ನನ್ನು ಬಿಟ್ಟಿದ್ದಾರೆ.
ಮಹಾಲಕ್ಷ್ಮೀ ಅವರ ತಾಯಿಗೆ ನಾಲ್ಕು ಮಕ್ಕಳಿದ್ದು, ಮೊದಲ ಮಗಳು ಲಕ್ಷ್ಮೀ. ಈಕೆ ಸೈಯದ್ ಇಮ್ರಾನ್ ಎಂಬುವವರ ಜೊತೆ ಲವ್ ಮ್ಯಾರೇಜ್ ಆಗಿದ್ದು, ತನ್ನ ಹೆಸರನ್ನು ಶಾಹೀದಾ ಬುಷುರ ಎಂದು ಬದಲಿಸಿದ್ದಾಳೆ.
ಕೊಲೆಯಾದ ಮಹಾಲಕ್ಷ್ಮೀ ಎರಡನೆಯವಳು. ಈಕೆಗೆ ಹೇಮಂತ್ ದಾಸ್ ಎಂಬುವವರ ಜೊತೆ ಅರೇಂಜ್ಡ್ ಮದುವೆ ಆಗಿದ್ದು, ಒಂಬತ್ತು ತಿಂಗಳಿನಿಂದ ಗಂಡನಿಂದ ದೂರವಿದ್ದಳು. ಮೂರನೆಯವರು ಮಗ ಉಕ್ಕುಂ ಸಿಂಗ್. ಡೆಲಿವರಿ ಬಾಯ್ ಕೆಲಸ ಮಾಡಿಕೊಂಡಿದ್ದಾನೆ. ನಾಲ್ಕನೆಯವನು ನರೇಶ್ ಕೂಲಿ ಕೆಲಸ ಮಾಡಿಕೊಂಡಿದ್ದಾನೆ.