ಶಿರ್ಲಾಲು :(ಸೆ.25)ಮೂಡಬಿದ್ರಿಯ ಕೇರ್ ಚಾರಿಟೇಬಲ್ ಟ್ರಸ್ಟ್ ಮಾಲೀಕ ಅನಿಲ್ ಅವರು ಶಿರ್ಲಾಲು ಬೈಲಡ್ಕ ನಿವಾಸಿ ಸುಂದರ ಅವರನ್ನು ಭೇಟಿಯಾದರು.
ಅನಿಲ್ ಹಾಗೂ ಅವರ ತಂಡ ಸುಂದರ ಅವರಿಗೆ ಅಕ್ಕಿ ಕಾಳು ತರಕಾರಿ ಮತ್ತು ಅವರಿಗೆ ದಿನ ನಿತ್ಯ ಬಳಸುವ ಸಾಮಗ್ರಿಯನ್ನು ನೀಡಿದರು.
ಈ ವೇಳೆ ಸುಂದರ ಮತ್ತು ಅವರ ತಾಯಿ ಜೊತೆಗೆ ಅನಿಲ್ ಮಾತುಕತೆ ನಡೆಸಿದರು. ಜೊತೆಗೆ ಕೆಲವೇ ದಿನಗಳಲ್ಲಿ ಸೂರು ನಿರ್ಮಿಸುವ ಕೆಲಸ ಪ್ರಾರಂಭ ಮಾಡುವ ಬಗ್ಗೆಯೂ ಸುಂದರ್ ಅವರಿಗೆ ಭರವಸೆಯನ್ನು ನೀಡಿದರು.
ಸುಂದರ ಅವರು 19 ವರ್ಷ ಪ್ರಾಯವಿರುವಾಗ ಹಲಸಿನ ಹಣ್ಣು ಹೆಗಲಿಗೆ ಬಿದ್ದು ಸೊಂಟದ ಕೆಳಗಿನ ಭಾಗದ ಬಲವನ್ನು ಕಳೆದುಕೊಂಡಿದ್ದರು.
ಯಾವುದೇ ಚಿಕಿತ್ಸೆ ನೀಡಿದರು ಅದು ಫಲ ನೀಡಿರಲಿಲ್ಲ. ಕಳೆದ 35 ವರ್ಷಗಳಿಂದ ಮಲಗಿದ್ದಲೇ ಇದ್ದು ನರಕಯಾತನೆ ಅನುಭವಿಸುತ್ತಿದ್ದರು. ಇತ್ತೀಚೆಗೆ ಯು ಪ್ಲಸ್ ಟಿವಿ ಸುಂದರ ಅವರ ಸಮಸ್ಯೆ ಬಗ್ಗೆ ವರದಿ ಮಾಡಿತ್ತು.
ಈ ವರದಿ ನೋಡಿದ್ದ ಮೂಡಬಿದ್ರಿಯ ಕೇರ್ ಚಾರಿಟೇಬಲ್ ಟ್ರಸ್ಟ್ ಮಾಲೀಕ ಅನಿಲ್, ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಇಂದು ಸುಂದರ ಅವರ ಮನೆಗೆ ಭೇಟಿ ನೀಡಿದ ಅನಿಲ್ ಅವರು ಆತ್ಮವಿಶ್ವಾಸ ಹೆಚ್ಚಿಸಿದರು.